जांबोटी–कुंभार्डा येथे पीएचसीसाठी आमदार विठ्ठल हलगेकर यांचे मुख्यमंत्र्यांकडे निवेदन | ಜಾಂಬೋಟಿ–ಕುಂಭಾರ್ಡಾದಲ್ಲಿ ಪಿಎಚ್ಸಿ ಸ್ಥಾಪನೆಗೆ ಶಾಸಕ ವಿಠ್ಠಲ ಹಳಗೇಕರರಿಂದ ಮುಖ್ಯಮಂತ್ರಿಗೆ ಮನವಿ
खानापूर : खानापूर विधानसभा मतदारसंघातील नागरिकांना दर्जेदार आरोग्य सेवा उपलब्ध करून देण्याच्या उद्देशाने जांबोटी व कुंभार्डा येथे नवीन प्राथमिक आरोग्य केंद्रे (पीएचसी) स्थापन करण्याबाबत मुख्यमंत्री यांच्याकडे निवेदन सादर करण्यात आले आहे.
खानापूर तालुक्यातील दाट वनक्षेत्र, दुर्गम गावे तसेच बेळगाव– चोर्ला घाट –पणजी आणि धारवाड–पणजी राष्ट्रीय महामार्गांवर वारंवार होणाऱ्या अपघातांच्या पार्श्वभूमीवर तातडीच्या वैद्यकीय सेवेची गरज लक्षात घेऊन ही मागणी करण्यात आली आहे.
ही आरोग्य केंद्रे सुरू झाल्यास ग्रामीण भागातील नागरिकांना जवळच उपचार सुविधा उपलब्ध होतील. तसेच अपघातग्रस्तांना त्वरित उपचार, गर्भवती महिला, ज्येष्ठ नागरिक व बालकांना अधिक चांगल्या वैद्यकीय सेवा मिळण्यास मदत होईल. यामुळे अनेक अमूल्य जीव वाचण्यास हातभार लागेल, असा विश्वास व्यक्त करण्यात आला आहे.
ಖಾನಾಪುರ : ಖಾನಾಪುರ ವಿಧಾನಸಭಾ ಕ್ಷೇತ್ರದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಜಾಂಬೋಟಿ ಹಾಗೂ ಕುಂಭಾರ್ಡಾ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್ಸಿ) ಸ್ಥಾಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಖಾನಾಪುರ ತಾಲ್ಲೂಕಿನ ದಟ್ಟ ಅರಣ್ಯ ಪ್ರದೇಶಗಳು, ದುರ್ಗಮ ಗ್ರಾಮಗಳು ಹಾಗೂ ಬೆಳಗಾವಿ–ಚೋರ್ಲಾ–ಪಣಜಿ ಮತ್ತು ಧಾರವಾಡ–ಪಣಜಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಸಂದರ್ಭಗಳಲ್ಲಿ ತುರ್ತು ವೈದ್ಯಕೀಯ ಸೇವೆಯ ಅಗತ್ಯವನ್ನು ಮನಗಂಡು ಈ ಬೇಡಿಕೆಯನ್ನು ಮುಂದಿರಿಸಲಾಗಿದೆ.
ಈ ಆರೋಗ್ಯ ಕೇಂದ್ರಗಳು ಸ್ಥಾಪನೆಯಾದಲ್ಲಿ ಗ್ರಾಮೀಣ ಜನತೆಗೆ ಸಮೀಪದಲ್ಲೇ ಆರೋಗ್ಯ ಸೇವೆಗಳು ಲಭ್ಯವಾಗಲಿದ್ದು, ಅಪಘಾತಕ್ಕೊಳಗಾದವರಿಗೆ ತ್ವರಿತ ಚಿಕಿತ್ಸೆ ದೊರೆಯಲಿದೆ. ಜೊತೆಗೆ ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ಸಿಗಲಿದ್ದು, ಸಾರ್ವಜನಿಕರ ಅಮೂಲ್ಯ ಜೀವಗಳನ್ನು ರಕ್ಷಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.
