खानापूर

डॉक्टर दिनानिमित्त अभियंता व समाजसेवक प्रसाद पाटील यांचा KLE संस्थेकडून गौरव | ವೈದ್ಯರ ದಿನಾಚರಣೆಯ ಅಂಗವಾಗಿ ಇಂಜಿನಿಯರ್ ಹಾಗೂ ಸಮಾಜಸೇವಕ ಪ್ರಸಾದ್ ಪಾಟೀಲ್ ಅವರಿಗೆ KLE ಸಂಸ್ಥೆಯಿಂದ ಸನ್ಮಾನ

खानापूर, दि. 4 जुलै : डॉक्टर दिनानिमित्त रुग्णसेवेत मोलाचे योगदान दिल्याबद्दल गर्लगुंजी ग्रामपंचायतीचे सदस्य, अभियंता व समाजसेवक प्रसाद विठ्ठल पाटील यांचा KLE संस्थेतर्फे विशेष सन्मान करण्यात आला.


प्रसाद पाटील हे व्यावसायिकदृष्ट्या अभियंता असले तरी गेल्या अनेक वर्षांपासून सामाजिक बांधिलकी जपत रुग्णसेवेत सक्रिय आहेत. दर आठवड्याला सरासरी चार ते पाच गंभीर रुग्णांना वेळेत उपचारासाठी विविध रुग्णालयांत दाखल करून देणे, विविध सरकारी व खासगी योजनांद्वारे गरजू रुग्णांच्या मोफत शस्त्रक्रिया करून देणे, तसेच आतापर्यंत सुमारे १,५०० हून अधिक रुग्णांना वेळेवर उपचार मिळवून देत त्यांचे प्राण वाचविण्यासाठी मोलाचे योगदान त्यांनी दिले आहे.
याशिवाय त्यांनी स्वतः ३३ वेळा रक्तदान केले असून अनेक गरजू रुग्णांना विविध माध्यमांतून रक्त उपलब्ध करून देण्यासाठीही सातत्याने प्रयत्न केले आहेत. त्यांच्या या समाजोपयोगी कार्याची दखल घेत KLE संस्थेने डॉक्टर दिनानिमित्त त्यांचा गौरव केला.
या कार्यक्रमाला संस्थेचे संचालक डॉ. राजशेखर, चीफ ऑपरेटिंग ऑफिसर नवीन एम., जिल्हा मुख्य कुटुंब नियोजन अधिकारी डॉ. विश्वनाथ भोवी, वैद्यकीय अधीक्षक डॉ. संजय कंबार, तसेच डॉ. श्रीकांत मैत्री, डॉ. अजय काळे, डॉ. खोत, डॉ. जमादार, डॉ. पोटे, डॉ. केदार, संस्थेचे डॉक्टर, विद्यार्थी, जनसंपर्क अधिकारी व कर्मचारी उपस्थित होते. यावेळी समाजसेवक नागेश नार्वेकर यांचाही सन्मान करण्यात आला.
कार्यक्रमात मार्गदर्शन करताना डॉ. राजशेखर यांनी डॉक्टरांनी रुग्णांना योग्य उपचार देतानाच स्वतःच्या आरोग्याचीही काळजी घेणे आवश्यक असल्याचे सांगितले. आजकाल अनेक रुग्ण इंटरनेट व कृत्रिम बुद्धिमत्ता (AI) माध्यमांवरील अपूर्ण माहितीच्या आधारे उपचारासाठी येत असल्याने त्यांना योग्य वैद्यकीय माहिती समजावून सांगणे ही डॉक्टरांची जबाबदारी असल्याचे त्यांनी नमूद केले.
सत्काराला उत्तर देताना प्रसाद पाटील यांनी खानापूर तालुक्यातून येणाऱ्या गरीब रुग्णांना उपचार खर्चात शक्य तितकी सवलत देण्याची विनंती केली. अनेकदा रुग्णांना दाखल करताना प्रारंभीचा खर्चही स्वतःच्या खिशातून करावा लागतो, असे त्यांनी सांगितले.
तसेच KLE रुग्णालयात न्यूरोलॉजी व कार्डियाक विभाग सुरू करावा, ग्रामीण भागातील रुग्णांसाठी फिरती बस सेवा उपलब्ध करावी, अशी मागणी त्यांनी केली. याशिवाय KLE संस्थेने खानापूर तालुक्यातील सहा गावे दत्तक घेऊन तेथे मोफत आरोग्य तपासणी शिबिरे आयोजित केल्याबद्दल त्यांनी संस्थेचे आभार मानले.

ವೈದ್ಯರ ದಿನಾಚರಣೆಯ ಅಂಗವಾಗಿ ಇಂಜಿನಿಯರ್ ಹಾಗೂ ಸಮಾಜಸೇವಕ ಪ್ರಸಾದ್ ಪಾಟೀಲ್ ಅವರಿಗೆ KLE ಸಂಸ್ಥೆಯಿಂದ ಸನ್ಮಾನ

ಖಾನಾಪುರ, ಜು. ೪ : ವೈದ್ಯರ ದಿನಾಚರಣೆಯ ಅಂಗವಾಗಿ ರೋಗಿಗಳ ಸೇವೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಗರ್ಲಗುಂಜಿ ಗ್ರಾಮ ಪಂಚಾಯತ್ ಸದಸ್ಯ, ಇಂಜಿನಿಯರ್ ಹಾಗೂ ಸಮಾಜಸೇವಕ ಪ್ರಸಾದ್ ವಿಠ್ಠಲ ಪಾಟೀಲ್ ಅವರನ್ನು KLE ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಪ್ರಸಾದ್ ಪಾಟೀಲ್ ಅವರು ಹಲವು ವರ್ಷಗಳಿಂದ ಸಮಾಜಸೇವೆಯೊಂದಿಗೆ ರೋಗಿಗಳ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವಾರಕ್ಕೆ ಸರಾಸರಿ ನಾಲ್ಕರಿಂದ ಐದು ಗಂಭೀರ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿಸುವುದು, ವಿವಿಧ ಸರ್ಕಾರಿ ಹಾಗೂ ಖಾಸಗಿ ಯೋಜನೆಗಳ ಮೂಲಕ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿಕೊಡುವುದು ಸೇರಿದಂತೆ ಇದುವರೆಗೆ 1,500ಕ್ಕೂ ಹೆಚ್ಚು ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ದೊರಕುವಂತೆ ನೆರವಾಗಿ ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಇದಲ್ಲದೆ ಅವರು ಸ್ವತಃ 33 ಬಾರಿ ರಕ್ತದಾನ ಮಾಡಿದ್ದು, ಅಗತ್ಯವಿರುವ ಅನೇಕ ರೋಗಿಗಳಿಗೆ ವಿವಿಧ ಮಾರ್ಗಗಳ ಮೂಲಕ ರಕ್ತದ ವ್ಯವಸ್ಥೆ ಮಾಡಿಕೊಡುವ ಸಮಾಜಮುಖಿ ಕಾರ್ಯವನ್ನೂ ನಿರಂತರವಾಗಿ ನಡೆಸುತ್ತಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ KLE ಸಂಸ್ಥೆ ವೈದ್ಯರ ದಿನದ ಅಂಗವಾಗಿ ಗೌರವಿಸಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ರಾಜಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವನಾಥ ಭೋವಿ, ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಕಂಬಾರ, ಡಾ. ಶ್ರೀಕಾಂತ್ ಮೈತ್ರಿ, ಡಾ. ಅಜಯ್ ಕಾಳೆ, ಡಾ. ಖೋತ್, ಡಾ. ಜಮಾದಾರ್, ಡಾ. ಪೋಟೆ, ಡಾ. ಕೇದಾರ್, ಸಂಸ್ಥೆಯ ವೈದ್ಯರು, ವಿದ್ಯಾರ್ಥಿಗಳು, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜಸೇವಕ ನಾಗೇಶ್ ನಾರ್ವೇಕರ್ ಅವರನ್ನೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಜಶೇಖರ್ ಅವರು ವೈದ್ಯರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ ತಮ್ಮ ಆರೋಗ್ಯದ ಮೇಲೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಅನೇಕ ರೋಗಿಗಳು ಗೂಗಲ್ ಹಾಗೂ ChatGPT ಮುಂತಾದ ಮೂಲಗಳಿಂದ ಅಪೂರ್ಣ ಮಾಹಿತಿಯನ್ನು ಪಡೆದು ಬರುತ್ತಿರುವುದರಿಂದ ಅವರಿಗೆ ಸರಿಯಾದ ವೈದ್ಯಕೀಯ ಮಾಹಿತಿ ನೀಡಿ ಮನವರಿಕೆ ಮಾಡಿಕೊಡುವುದು ವೈದ್ಯರ ಕರ್ತವ್ಯ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಪ್ರಸಾದ್ ಪಾಟೀಲ್ ಅವರು ಖಾನಾಪುರ ತಾಲ್ಲೂಕಿನಿಂದ ಬರುವ ಬಡ ರೋಗಿಗಳಿಗೆ ಆಸ್ಪತ್ರೆಯ ಬಿಲ್ಲಿನಲ್ಲಿ ಸಾಧ್ಯವಾದಷ್ಟು ರಿಯಾಯಿತಿ ನೀಡುವಂತೆ ಮನವಿ ಮಾಡಿದರು. ಅನೇಕ ಸಂದರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ಆರಂಭಿಕ ವೆಚ್ಚವನ್ನೂ ತಮ್ಮದೇ ಖರ್ಚಿನಿಂದ ಭರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಅದೇ ರೀತಿ KLE ಆಸ್ಪತ್ರೆಯಲ್ಲಿ ನ್ಯೂರಾಲಜಿ ಹಾಗೂ ಕಾರ್ಡಿಯಾಕ್ ವಿಭಾಗಗಳನ್ನು ಆರಂಭಿಸಬೇಕು, ಗ್ರಾಮೀಣ ಭಾಗದ ರೋಗಿಗಳಿಗಾಗಿ ಸಂಚಾರಿ ಬಸ್ ಸೇವೆಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ ಖಾನಾಪುರ ತಾಲ್ಲೂಕಿನ ಆರು ಗ್ರಾಮಗಳನ್ನು ದತ್ತು ಪಡೆದು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿರುವ KLE ಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या