क्रिकेटमध्ये सातत्यपूर्ण यश; माऊली स्पोर्ट्स क्लबची नवी जर्सी सादर, 2026-27 हंगामासाठी संघ सज्ज | ಹಾಫ್ ಪಿಚ್, ಫುಲ್ ಪಿಚ್ ಎರಡರಲ್ಲೂ ಮೌಳಿ ಸ್ಪೋರ್ಟ್ಸ್ ಕ್ಲಬ್ನ ಗೆಲುವಿನ ಓಟ
खानापूर : माऊली स्पोर्ट्स क्लब, गर्लगुंजी यांच्या 2026-27 वर्षातील क्रिकेट हंगामासाठी नव्या जर्सीचे अनावरण सोमवारी सायंकाळी मारुती मंदिर समुदाय भवन येथे उत्साहपूर्ण वातावरणात पार पडले. या जर्सीचे प्रायोजक गर्लगुंजी ग्रामपंचायतीचे माजी सदस्य व सामाजिक कार्यकर्ते प्रसाद पाटील यांच्या उपस्थितीत अनावरण करण्यात आले.
माऊली स्पोर्ट्स क्लबने 2025-26 हंगामात विविध क्रिकेट स्पर्धांमध्ये उल्लेखनीय कामगिरी करत विजयी घोडदौड कायम ठेवली आहे. संघाने माचीगड, माळ अंकले, नंदगड, जांबोटी, हलसाल, कापोली आणि हलशी येथील स्पर्धांमध्ये प्रथम क्रमांक पटकावला, तर माडीगुंजी येथील स्पर्धेत उपविजेतेपद मिळवले. याशिवाय जिल्ह्याबाहेरील अनेक स्पर्धांमध्येही संघाने उल्लेखनीय यश संपादन केले. हाफ पीच आणि फुल पीच या दोन्ही प्रकारच्या क्रिकेट स्पर्धांमध्ये संघाने सातत्यपूर्ण उत्कृष्ट कामगिरी करत आपली वेगळी ओळख निर्माण केली आहे.

क्रिकेटपुरतेच मर्यादित न राहता माऊली स्पोर्ट्स क्लबच्या माध्यमातून गावात कबड्डी, क्रिकेट आणि व्हॉलीबॉल स्पर्धांचेही नियमित आयोजन करण्यात येते. या स्पर्धांना ग्रामस्थांचा उत्स्फूर्त प्रतिसाद मिळत असून, संघ सामाजिक बांधिलकी जपत क्रीडा संस्कृतीला चालना देत आहे.
संघाला पीकेपीएसचे उपाध्यक्ष विनोद कुंभार, अष्टपैलू खेळाडू प्रताप पाटील, परशराम आस्टेकर, संघाचे कर्णधार सागर कोलेकर आणि पांडुरंग भातकांडे यांचे मार्गदर्शन लाभत आहे.
यावेळी यश चौगुले, हरीश चौगुले, योगेश पाटील, मल्लाप्पा पाटील, निलेश निट्टूरकर, श्रेयश निट्टूरकर, मंथन पाटील, प्रणय यलारीचे, संदेश कोलेकर, गणेश पाखरे, भुजंग मेलगे, गंधर्व बिर्जे, दत्ता पाटील, दत्ता देसाई, एकलव्य संघाचे प्रशिक्षक प्रशांत पाखरे, कल्लाप्पा लोहार, अनंत पाटील यांच्यासह अनेक खेळाडू उपस्थित होते. उपस्थितांनी संघाला आगामी स्पर्धांसाठी शुभेच्छा दिल्या.
यापूर्वीही गर्लगुंजी येथील एकलव्य संघामार्फत गावातील प्राथमिक व माध्यमिक शाळेतील विद्यार्थ्यांना जर्सी, शालेय बॅग आणि पाण्याच्या बाटल्यांचे वितरण करण्यात आले होते. या उपक्रमालाही प्रसाद पाटील यांनी प्रमुख प्रायोजक म्हणून सहकार्य केले होते.
यावेळी प्रसाद पाटील म्हणाले की, “तरुणांनी व्यसनांपासून दूर राहून निरोगी जीवनशैली स्वीकारावी, चांगल्या सवयी जोपासाव्यात, गाव व तालुक्याचे नाव राज्यभर उज्ज्वल करावे आणि अधिकाधिक युवकांनी क्रीडा क्षेत्रात करिअर घडवावे, हा या उपक्रमामागील प्रमुख उद्देश आहे.”
ಖಾನಾಪುರ : ಗರ್ಳಗುಂಜಿಯ ಮೌಳಿ ಸ್ಪೋರ್ಟ್ಸ್ ಕ್ಲಬ್ನ 2026-27ನೇ ಸಾಲಿನ ಕ್ರಿಕೆಟ್ ಋತುವಿಗಾಗಿ ಸಿದ್ಧಪಡಿಸಿದ ಹೊಸ ಜರ್ಸಿಯ ಅನಾವರಣ ಸೋಮವಾರ ಸಂಜೆ ಮಾರುತಿ ದೇವಸ್ಥಾನದ ಸಮುದಾಯ ಭವನದಲ್ಲಿ ಸಂಭ್ರಮದಿಂದ ನಡೆಯಿತು. ಗರ್ಳಗುಂಜಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಸಮಾಜಸೇವಕರಾದ ಪ್ರಸಾದ್ ಪಾಟೀಲ್ ಅವರ ಪ್ರಾಯೋಜಕತ್ವದಲ್ಲಿ ಜರ್ಸಿಯನ್ನು ಅನಾವರಣಗೊಳಿಸಲಾಯಿತು.
2025-26ರ ಅವಧಿಯಲ್ಲಿ ಮೌಳಿ ಸ್ಪೋರ್ಟ್ಸ್ ಕ್ಲಬ್ ಹಲವು ಕ್ರಿಕೆಟ್ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಿರಂತರ ವಿಜಯ ಸಾಧಿಸಿದೆ. ಮಾಚಿಗಡ, ಮಾಳ ಅಂಕಲೆ, ನಂದಗಡ, ಜಾಂಬೋಟಿ, ಹಲಸಾಳ, ಕಾಪೋಳಿ ಹಾಗೂ ಹಲಶಿ ಟೂರ್ನಿಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮಡಿಗುಂಜಿ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಜಿಲ್ಲೆಯ ಹೊರಗಡೆಯಲ್ಲಿಯೂ ಅನೇಕ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಹಾಫ್ ಪಿಚ್ ಹಾಗೂ ಫುಲ್ ಪಿಚ್ ಎರಡೂ ಮಾದರಿಯ ಕ್ರಿಕೆಟ್ ಸ್ಪರ್ಧೆಗಳಲ್ಲಿ ತಂಡವು ತನ್ನ ಗೆಲುವಿನ ಪರಂಪರೆಯನ್ನು ಮುಂದುವರಿಸಿದೆ.
ಕೇವಲ ಕ್ರಿಕೆಟ್ಗೆ ಸೀಮಿತವಾಗದೇ, ಮೌಳಿ ಸ್ಪೋರ್ಟ್ಸ್ ಕ್ಲಬ್ ಗ್ರಾಮದಲ್ಲಿ ಕಬಡ್ಡಿ, ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ.
ತಂಡಕ್ಕೆ ಪಿಕೆಪಿಎಸ್ ಉಪಾಧ್ಯಕ್ಷ ವಿನೋದ ಕುಂಭಾರ, ಆಲ್ರೌಂಡರ್ ಪ್ರತಾಪ ಪಾಟೀಲ್, ಪರಶುರಾಮ ಆಸ್ತೇಕರ್, ತಂಡದ ನಾಯಕ ಸಾಗರ್ ಕೋಲೆಕರ್ ಹಾಗೂ ಪಾಂಡುರಂಗ ಭಾತಕಾಂಡೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಯಶ್ ಚೌಗುಲೆ, ಹರೀಶ್ ಚೌಗುಲೆ, ಯೋಗೇಶ್ ಪಾಟೀಲ್, ಮಲ್ಲಪ್ಪ ಪಾಟೀಲ್, ನಿಲೇಶ್ ನಿಟ್ಟೂರಕರ, ಶ್ರೇಯಸ್ ನಿಟ್ಟೂರಕರ, ಮಂಥನ್ ಪಾಟೀಲ್, ಪ್ರಣಯ್ ಯಲಾರಿಚೆ, ಸಂದೇಶ್ ಕೋಲೆಕರ್, ಗಣೇಶ್ ಪಾಖರೆ, ಭುಜಂಗ ಮೇಲ್ಗೆ, ಗಂಧರ್ವ ಬಿರ್ಜೆ, ದತ್ತ ಪಾಟೀಲ್, ದತ್ತ ದೇಸಾಯಿ, ಏಕಲವ್ಯ ತಂಡದ ತರಬೇತುದಾರ ಪ್ರಶಾಂತ್ ಪಾಖರೆ, ಕಲ್ಲಪ್ಪ ಲೋಹಾರ, ಅನಂತ ಪಾಟೀಲ್ ಸೇರಿದಂತೆ ಹಲವಾರು ಆಟಗಾರರು ಉಪಸ್ಥಿತರಿದ್ದರು. ತಂಡಕ್ಕೆ ಮುಂಬರುವ ಎಲ್ಲ ಸ್ಪರ್ಧೆಗಳಿಗೂ ಶುಭ ಹಾರೈಸಲಾಯಿತು.
ಈ ಹಿಂದೆ ಗರ್ಳಗುಂಜಿಯ ಏಕಲವ್ಯ ತಂಡದ ಮೂಲಕ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜರ್ಸಿ, ಶಾಲಾ ಬ್ಯಾಗ್ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಗಿತ್ತು. ಆ ಕಾರ್ಯಕ್ರಮಕ್ಕೂ ಪ್ರಮುಖ ಪ್ರಾಯೋಜಕರಾಗಿ ಪ್ರಸಾದ್ ಪಾಟೀಲ್ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಾದ್ ಪಾಟೀಲ್, “ಯುವಕರು ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಂಡು ಗ್ರಾಮ ಹಾಗೂ ತಾಲ್ಲೂಕಿನ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಹೆಚ್ಚಿನ ಯುವಕರು ಕ್ರೀಡಾ ಕ್ಷೇತ್ರದಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ” ಎಂದು ಹೇಳಿದರು.
