सकाळची बस उशिरा, दुपारची लवकर; आमटे गावातील विद्यार्थी व प्रवासी त्रस्त! | ಬೆಳಗಿನ ಬಸ್ ತಡ, ಮಧ್ಯಾಹ್ನದ ಬಸ್ ಬೇಗ; ಆಮಟೆ ಗ್ರಾಮದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಪರದಾಟ!
खानापूर : आमटे गावातील बससेवा गेल्या काही दिवसांपासून अनियमित होत असल्याने प्रवासी, विद्यार्थी आणि नागरिकांना मोठ्या अडचणींचा सामना करावा लागत असल्याची तक्रार ग्रामस्थांनी केली आहे. या समस्येकडे तातडीने लक्ष देऊन बससेवा नियमित करण्याची मागणी ग्रामस्थांनी आमदार विठ्ठल हलगेकर यांच्याकडे केली आहे.
ग्रामस्थांच्या म्हणण्यानुसार, सकाळी सुमारे 9.15 वाजेपर्यंत गावात पोहोचणारी बस निश्चित वेळेत येत नसून कधी 10 वाजता, कधी 11 वाजता तर काहीवेळा 8.45 वाजताच येऊन निघून जाते. त्यामुळे दररोज सकाळी बसची वाट पाहणाऱ्या सुमारे 25 प्रवाशांचे नुकसान होत असून त्यांना वेळेवर कामाच्या ठिकाणी किंवा इतर ठिकाणी पोहोचता येत नाही.
तसेच खानापूरहून दुपारी सुटणारी बस जांबोटी येथे नियोजित वेळेपेक्षा लवकर पोहोचत असल्याने महाविद्यालयातून 12.45 वाजता सुटणाऱ्या विद्यार्थ्यांना बस मिळत नाही. विद्यार्थ्यांची वाट न पाहता बस पुढे निघून जात असल्याने त्यांना मोठा मनस्ताप सहन करावा लागत आहे.
याशिवाय शाळकरी विद्यार्थ्यांनाही बस वेळेवर न मिळाल्याने शिक्षणावर परिणाम होत असून अनेक विद्यार्थ्यांना शाळा गाठणे कठीण होत असल्याची खंत ग्रामस्थांनी व्यक्त केली आहे.
ही समस्या तातडीने सोडवून आमटे गावातील बससेवा नियमित करावी, अशी मागणी ग्रामस्थांनी संबंधित परिवहन विभाग तसेच आमदार विठ्ठल हलगेकर यांच्याकडे केली आहे.
ಖಾನಾಪುರ : ಆಮಟೆ ಗ್ರಾಮಕ್ಕೆ ಸಂಚರಿಸುವ ಬಸ್‌ಗಳ ಅನಿಯಮಿತ ವೇಳಾಪಟ್ಟಿಯಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಬಸ್ ಸೇವೆಯನ್ನು ನಿಯಮಿತಗೊಳಿಸುವಂತೆ ಗ್ರಾಮಸ್ಥರು ಶಾಸಕ ವಿಠ್ಠಲ ಹಲಗೇಕರ ಅವರಿಗೆ ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಮಾಹಿತಿ ಪ್ರಕಾರ, ಬೆಳಿಗ್ಗೆ ಸುಮಾರು 9.15 ಗಂಟೆಗೆ ಗ್ರಾಮ ತಲುಪಬೇಕಾದ ಬಸ್ ನಿಗದಿತ ವೇಳೆಗೆ ಬರುವುದಿಲ್ಲ. ಕೆಲವೊಮ್ಮೆ ಬೆಳಿಗ್ಗೆ 10 ಗಂಟೆಗೆ, ಕೆಲವೊಮ್ಮೆ 11 ಗಂಟೆಗೆ ಬರುತ್ತದೆ; ಇನ್ನೂ ಕೆಲವು ಸಂದರ್ಭಗಳಲ್ಲಿ 8.45 ಗಂಟೆಗೇ ಬಂದು ಹೊರಟು ಹೋಗುತ್ತದೆ. ಇದರಿಂದ ಪ್ರತಿದಿನ ಬೆಳಿಗ್ಗೆ ಬಸ್‌ಗಾಗಿ ಕಾಯುವ ಸುಮಾರು 25 ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.
ಇದೇ ರೀತಿ ಖಾನಾಪುರದಿಂದ ಮಧ್ಯಾಹ್ನ ಹೊರಡುವ ಬಸ್ ಜಾಂಬೋಟಿಗೆ ನಿಗದಿತ ಸಮಯಕ್ಕಿಂತ ಮುಂಚೆಯೇ ತಲುಪುವುದರಿಂದ 12.45ಕ್ಕೆ ಕಾಲೇಜು ಮುಗಿಸುವ ವಿದ್ಯಾರ್ಥಿಗಳಿಗೆ ಬಸ್ ಸಿಗುವುದಿಲ್ಲ. ವಿದ್ಯಾರ್ಥಿಗಳಿಗಾಗಿ ಕಾಯದೇ ಬಸ್ ಮುಂದಕ್ಕೆ ತೆರಳುತ್ತಿರುವುದರಿಂದ ಅವರು ಪರದಾಡುವಂತಾಗಿದೆ.
ಶಾಲಾ ವಿದ್ಯಾರ್ಥಿಗಳಿಗೂ ಸಮಯಕ್ಕೆ ಬಸ್ ಸಿಗದ ಕಾರಣ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದ್ದು, ಹಲವರಿಗೆ ಶಾಲೆಗೆ ಸಮಯಕ್ಕೆ ತಲುಪುವುದು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆದ್ದರಿಂದ ಆಮಟೆ ಗ್ರಾಮದ ಬಸ್ ಸೇವೆಯನ್ನು ನಿಯಮಿತಗೊಳಿಸಿ, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಿತ ಸಾರಿಗೆ ಇಲಾಖೆ ಹಾಗೂ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
