खानापूर

एकही मतदार एसआयआर नोंदणीपासून वंचित राहू देऊ नका; खानापूरमध्ये डॉ. अंजली निंबाळकर यांचे आवाहन | ಎಸ್‌ಐಆರ್ ನೋಂದಣಿಯಿಂದ ಯಾವುದೇ ಮತದಾರರು ವಂಚಿತರಾಗಬಾರದು: ಡಾ. ಅಂಜಲಿ ನಿಂಬಾಳ್ಕರ್ ಕರೆ

खानापूर: एसआयआर (Special Intensive Revision) नोंदणी प्रक्रिया यशस्वी करण्यासाठी काँग्रेस कार्यकर्त्यांनी प्रत्येक गावातील पात्र मतदारांपर्यंत पोहोचून त्यांना नोंदणीसाठी प्रोत्साहित करावे, असे आवाहन माजी आमदार तथा एआयसीसी सचिव डॉ. अंजली निंबाळकर यांनी केले. खानापूर येथील टाऊन पंचायत सभागृहात आयोजित ब्लॉक काँग्रेसच्या एसआयआर नोंदणी प्रशिक्षण शिबिरात त्या मार्गदर्शन करत होत्या.

नोंदणीचे महत्त्व आणि जनजागृती

डॉ. निंबाळकर यांनी स्पष्ट केले की, एसआयआर नोंदणी न केल्यास मतदानाचा हक्क धोक्यात येऊ शकतो, तसेच भविष्यात नागरिकत्वाशी संबंधित कायदेशीर अडचणी निर्माण होऊ शकतात. नागरिकांना अचूक माहिती देऊन ही प्रक्रिया पूर्ण करून घेणे गरजेचे आहे. तसेच, राज्य सरकारच्या ‘पंच हमी’ योजनांचा लाभ सुरळीत मिळण्यासाठी ही नोंदणी आवश्यक असल्याचेही त्यांनी यावेळी नमूद केले.

राजकीय स्थिती आणि स्थानिक प्रश्न

विरोधी पक्षांवर टीका करताना त्या म्हणाल्या की, काँग्रेसला केवळ एका विशिष्ट वर्गाचा पक्ष म्हणून चुकीच्या पद्धतीने चित्रित करण्याचा प्रयत्न केला जात आहे. या प्रशिक्षण शिबिरात त्यांनी आगामी निवडणुकांमध्ये काँग्रेसला यश मिळवून देण्यासाठी कार्यकर्त्यांना संघटितपणे काम करण्याचा कानमंत्र दिला. त्याचबरोबर, गेल्या तीन वर्षांत रखडलेली विकासकामे, स्थानिक कंत्राटदारांची अडचण आणि वाळू उत्खनन बंदीमुळे रोजगारावर झालेला परिणाम या मुद्द्यांकडेही त्यांनी लक्ष वेधले.

शिबिरातील उपस्थिती

या प्रशिक्षण कार्यक्रमाला खानापूर काँग्रेसचे प्रभारी परसलाल जैन, जिल्हाध्यक्ष विनय नवलगट्टी, ब्लॉक काँग्रेस अध्यक्ष ईश्वर घाडी यांच्यासह महांतेश राऊत, सावित्री मदार, दीपा पाटील, वैष्णवी पाटील, गीता अंबालगट्टी, मधुकर कवळेकर, तोहीद चांद खानावर, दीपक कवठणकर, इसाक पठाण, लक्ष्मण पाटील आदींसह जिल्हा व तालुका स्तरावरील पदाधिकारी आणि मोठ्या संख्येने कार्यकर्ते उपस्थित होते.

यावेळी उपस्थित नेत्यांनी कार्यकर्त्यांना नोंदणी प्रक्रियेबाबत तांत्रिक मार्गदर्शन केले.

ಎಸ್‌ಐಆರ್ ನೋಂದಣಿಯಿಂದ ಯಾವುದೇ ಮತದಾರರು ವಂಚಿತರಾಗಬಾರದು: ಡಾ. ಅಂಜಲಿ ನಿಂಬಾಳ್ಕರ್ ಕರೆ

ಖಾನಾಪುರ: ಎಸ್‌ಐಆರ್ (Special Intensive Revision) ನೋಂದಣಿ ಪ್ರಕ್ರಿಯೆಯು ಪ್ರತಿಯೊಂದು ಹಳ್ಳಿಯಲ್ಲಿಯೂ ಸಮರ್ಪಕವಾಗಿ ನಡೆಯುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಖಚಿತಪಡಿಸಿಕೊಳ್ಳಬೇಕು. ಮತದಾರರಿಗೆ ನಿಖರವಾದ ಮಾಹಿತಿ ನೀಡಿ ಅವರನ್ನು ನೋಂದಣಿಗೆ ಪ್ರೇರೇಪಿಸಬೇಕು ಮತ್ತು ಅರ್ಹರಾದ ಒಬ್ಬ ಮತದಾರರೂ ಈ ಪ್ರಕ್ರಿಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಕರೆ ನೀಡಿದರು.

ಖಾನಾಪುರದ ಸ್ಟೇಷನ್ ರಸ್ತೆಯಲ್ಲಿರುವ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಎಸ್‌ಐಆರ್ ನೋಂದಣಿ ತರಬೇತಿ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ನೋಂದಣಿಯ ಮಹತ್ವ ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಿಂಬಾಳ್ಕರ್, “ಎಸ್‌ಐಆರ್ ನೋಂದಣಿ ಮಾಡಿಸದಿದ್ದರೆ ಕೇವಲ ಮತದಾನದ ಹಕ್ಕು ಮಾತ್ರವಲ್ಲ, ಭವಿಷ್ಯದಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕುಗಳು ಎದುರಾಗಬಹುದು. ಆದ್ದರಿಂದ, ಅರ್ಹ ನಾಗರಿಕರು ಯಾವುದೇ ವಿಳಂಬ ಮಾಡದೆ ತಕ್ಷಣ ನೋಂದಣಿ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳ ಲಾಭವನ್ನು ಸುಗಮವಾಗಿ ಪಡೆಯಲು ಕೂಡ ಈ ನೋಂದಣಿ ಅತಿ ಮುಖ್ಯವಾಗಿದೆ” ಎಂದು ತಿಳಿಸಿದರು.

ರಾಜಕೀಯ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಕಾಂಗ್ರೆಸ್ ಪಕ್ಷವನ್ನು ಕೇವಲ ಅಲ್ಪಸಂಖ್ಯಾತರ ಪಕ್ಷ ಎಂದು ಬಿಂಬಿಸಿ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಅವರು ಆರೋಪಿಸಿದರು. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಸಂಘಟಿತರಾಗಿ ದುಡಿಯಬೇಕು ಎಂದು ಅವರು ಸೂಚಿಸಿದರು. ಇದೇ ವೇಳೆ, ಕಳೆದ ಮೂರು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವುದು, ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗದಿರುವುದು ಮತ್ತು ಮರಳುಗಾರಿಕೆ ನಿಷೇಧದಿಂದ ಉದ್ಯೋಗಿಗಳ ಮೇಲೆ ಆಗಿರುವ ಪರಿಣಾಮದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಗಣ್ಯರ ಭಾಗಿ ಈ ತರಬೇತಿ ಶಿಬಿರದಲ್ಲಿ ಖಾನಾಪುರ ಕಾಂಗ್ರೆಸ್ ಪ್ರಭಾರಿ ಪರಸಲಾಲ್ ಜೈನ್, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಮಹಾಂತೇಶ ರೌತ್, ಸಾವಿತ್ರಿ ಮದಾರ್, ದೀಪಾ ಪಾಟೀಲ್, ವೈಷ್ಣವಿ ಪಾಟೀಲ್, ಗೀತಾ ಅಂಬಾಲಗಟ್ಟಿ, ಮಧುಕರ್ ಕವಳೇಕರ್, ತೌಹೀದ್ ಚಾಂದ್ ಖಾನಾವರ, ದೀಪಕ್ ಕವಠಣಕರ್, ಇಸಾಕ್ ಪಠಾಣ್, ಲಕ್ಷ್ಮಣ ಪಾಟೀಲ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಯಕರು ಎಸ್‌ಐಆರ್ ನೋಂದಣಿ ಪ್ರಕ್ರಿಯೆಯ ಬಗ್ಗೆ ಕಾರ್ಯಕರ್ತರಿಗೆ ಸವಿಸ್ತಾರವಾದ ಮಾರ್ಗದರ್ಶನ ನೀಡಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या