दुचाकीस्वाराच्या गळ्यात अडकला पतंगाचा दोरा; 19 वर्षीय तरुणाचा मृत्यू | ಮಾಂಜಾ ದಾರಿನಲ್ಲಿ ಸಿಲುಕಿ 19 ವರ್ಷದ ಬೈಕ್ ಸವಾರ ಸಾವು
बेळगाव : शहरातील गांधीनगर परिसरात राष्ट्रीय महामार्गाजवळ गुरुवारी काचेचा लेप असलेल्या मांजाच्या धाग्यात अडकून १९ वर्षीय दुचाकीस्वाराचा जागीच मृत्यू झाला. या घटनेमुळे शहरात बंदी असलेल्या मांजाची विक्री व वापर अद्याप सुरू असल्याचा प्रश्न पुन्हा ऐरणीवर आला आहे.
मृत तरुणाची ओळख ध्रुव के. (वय १९, रा. महांतेशनगर) अशी झाली आहे. दुचाकीवरून जात असताना मांजाचा धागा त्याच्या अंगाला अडकला आणि त्यात गंभीर दुखापत होऊन त्याचा मृत्यू झाल्याची प्राथमिक माहिती आहे.
घटनेनंतर परिसरात हळहळ व्यक्त करण्यात येत असून, बंदी असलेल्या मांजाची विक्री व वापर करणाऱ्यांवर कठोर कारवाई करण्याची मागणी नागरिकांकडून होत आहे.

ಕನ್ನಡ ಸುದ್ದಿ
ಗಾಂಧಿನಗರದಲ್ಲಿ ಮಾಂಜಾ ದಾರಿನಲ್ಲಿ ಸಿಲುಕಿ 19 ವರ್ಷದ ಬೈಕ್ ಸವಾರ ಸಾವು
ಬೆಳಗಾವಿ : ನಗರದ ಗಾಂಧಿನಗರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಗುರುವಾರ ಗಾಜಿನ ಲೇಪನ ಹೊಂದಿರುವ ಮಾಂಜಾ ದಾರಿನಲ್ಲಿ ಸಿಲುಕಿದ 19 ವರ್ಷದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಗರದಲ್ಲಿ ನಿಷೇಧಿತ ಮಾಂಜಾ ದಾರದ ಮಾರಾಟ ಹಾಗೂ ಬಳಕೆ ಇನ್ನೂ ನಡೆಯುತ್ತಿರುವ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಮೃತ ಯುವಕನನ್ನು ಧ್ರುವ ಕೆ. (19, ಮಹಾಂತೇಶ ನಗರ ನಿವಾಸಿ) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಾಂಜಾ ದಾರಿನಲ್ಲಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆಘಾತ ಮೂಡಿದ್ದು, ನಿಷೇಧಿತ ಮಾಂಜಾ ದಾರದ ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

