कणकुंबीजवळ भीषण अपघात; खडीवाहू ट्रकची कारला जोरदार धडक | ಕಣಕುಂಬಿ ಬಳಿ ಭೀಕರ ಅಪಘಾತ; ಕಲ್ಲು ಸಾಗಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ
कणकुंबी : कणकुंबीजवळ डेल्टा हॉटेल परिसरात आज मंगळवारी संध्याकाळी भीषण अपघात झाला. खडीवाहू ट्रकने (जीए 04 टी 8192) बेळगाव नोंदणीकृत कारला जोरदार धडक दिल्याने कार चालकाचा जागीच मृत्यू झाला. अपघातानंतर ट्रकचालक घटनास्थळावरून पसार झाला.

धडकेनंतर कारचा मोठ्या प्रमाणात चक्काचूर झाला असून चालक कारमध्ये अडकून पडला होता. अपघाताची माहिती मिळताच खानापूर पोलीस घटनास्थळी दाखल झाले. कारमध्ये अडकलेल्या मृत चालकाला बाहेर काढण्यासाठी अग्निशमन दलाला पाचारण करण्यात आले.

अपघातामुळे परिसरात काही काळ वाहतुकीवर परिणाम झाला. खानापूर पोलिसांकडून घटनास्थळी पंचनामा करण्यात येत असून पसार झालेल्या ट्रकचालकाचा शोध सुरू आहे.
ಕಣಕುಂಬಿ ಬಳಿ ಭೀಕರ ಅಪಘಾತ; ಕಲ್ಲು ಸಾಗಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ
ಕಣಕುಂಬಿ : ಕಣಕುಂಬಿ ಬಳಿಯ ಡೆಲ್ಟಾ ಹೋಟೆಲ್ ಸಮೀಪ ಮಂಗಳವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಕಲ್ಲು ಸಾಗಿಸುತ್ತಿದ್ದ ಲಾರಿ (GA 04 T 8192) ಬೆಳಗಾವಿ ನೋಂದಣಿಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಮೃತ ಚಾಲಕ ಕಾರಿನೊಳಗೆ ಸಿಲುಕಿಕೊಂಡಿದ್ದರು.
ಮಾಹಿತಿ ತಿಳಿದು ಖಾನಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕಾರಿನೊಳಗೆ ಸಿಲುಕಿದ್ದ ಮೃತ ಚಾಲಕನನ್ನು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯಿತು.
ಘಟನೆ ಕುರಿತು ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
