खानापूर

पावसाने दडी मारल्याने खानापूर तालुक्यातील शेतकरी संकटात; दुष्काळग्रस्त घोषित करण्याची मागणी | ಮಳೆ ಕೈಕೊಟ್ಟ ಹಿನ್ನೆಲೆ: ಖಾನಾಪುರ ತಾಲೂಕಿನ ರೈತರು ಸಂಕಷ್ಟದಲ್ಲಿ; ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ

खानापूर : पावसाने दडी मारल्यामुळे खानापूर तालुक्यातील शेतकऱ्यांसमोर मोठे संकट निर्माण झाले आहे. पावसाअभावी पिकांची वाढ खुंटली असून अनेक ठिकाणी पिके कोमेजण्याच्या मार्गावर आहेत. उपलब्ध पाणीसाठे अपुरे पडत असल्याने पिके वाचविण्यासाठी शेतकऱ्यांची धडपड सुरू आहे.

खानापूर तालुक्यात भात हे प्रमुख पीक असल्याने पावसाअभावी निर्माण झालेल्या परिस्थितीचा मोठा फटका शेतकऱ्यांना बसत आहे. “हे संकट केवळ एका शेतकऱ्यावर आलेले नसून संपूर्ण तालुक्यातील शेतकऱ्यांवर आले आहे. भात हे मुख्य पीक असल्यामुळे पावसाअभावी हा मोठा आघात आहे,” अशी भावना जटगे गावचे रहिवासी शेतकरी महाबळेश्वर तिनेकर यांनी व्यक्त केली.

पिकांना पाणी देण्यासाठी विहिरी, बोअरवेल तसेच इतर जलस्रोतांवर शेतकऱ्यांना अवलंबून राहावे लागत आहे. त्यातच वीजपुरवठ्यातील खंडितपणामुळे सिंचन करणे आणखी कठीण झाले आहे. बियाणे, खते, मशागत आणि इतर शेती खर्चाचा मोठा भार शेतकऱ्यांवर असताना हातातोंडाशी आलेले पीक वाचविण्याचे आव्हान निर्माण झाले आहे.

या पार्श्वभूमीवर शासनाने खानापूर तालुक्यातील परिस्थितीची तातडीने प्रत्यक्ष पाहणी करून तालुका दुष्काळग्रस्त घोषित करावा, अशी मागणी शेतकरी वर्गातून होत आहे.

तसेच पिकांच्या नुकसानीचे तातडीने पंचनामे करून योग्य नुकसानभरपाई द्यावी, पिकांना पाणी देण्यासाठी सुरळीत वीजपुरवठा करावा, आवश्यक ठिकाणी सिंचन व पाणी उपलब्धतेसाठी तातडीच्या उपाययोजना कराव्यात आणि पात्र शेतकऱ्यांना पीकविमा व दुष्काळी मदतीचा लाभ त्वरित मिळवून द्यावा, अशी मागणी करण्यात येत आहे.

यावर्षी अत्यल्प पाऊस झाल्याने खानापूर तालुक्यातील खरीप पिके करपून गेली असून शेतकरी आर्थिक संकटात सापडला आहे. त्यामुळे खानापूर तालुका दुष्काळग्रस्त म्हणून घोषित करून शेतकऱ्यांना आवश्यक ती मदत तातडीने जाहीर करावी, अशी मागणी आज खानापूर तालुका महाराष्ट्र एकीकरण समितीच्या वतीने करण्यात आली.


शेतकरी आणि शेतीसमोरील हे संकट गांभीर्याने घेऊन शासनाने तातडीने मदत करावी, अशी अपेक्षा व्यक्त होत आहे.


ಮಳೆ ಕೈಕೊಟ್ಟ ಹಿನ್ನೆಲೆ: ಖಾನಾಪುರ ತಾಲೂಕಿನ ರೈತರು ಸಂಕಷ್ಟದಲ್ಲಿ; ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ

ಖಾನಾಪುರ : ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ಹಲವು ಪ್ರದೇಶಗಳಲ್ಲಿ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಲಭ್ಯವಿರುವ ನೀರಿನ ಸಂಗ್ರಹವೂ ಸಾಕಾಗದೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾನಾಪುರ ತಾಲೂಕಿನ ಪ್ರಮುಖ ಬೆಳೆಯಾಗಿರುವ ಭತ್ತಕ್ಕೆ ಮಳೆಯ ಕೊರತೆಯಿಂದಾಗಿ ದೊಡ್ಡ ಹೊಡೆತ ಬಿದ್ದಿದೆ. “ಈ ಸಂಕಷ್ಟ ಒಬ್ಬ ರೈತನಿಗೆ ಮಾತ್ರ ಸೀಮಿತವಾಗಿಲ್ಲ. ತಾಲೂಕಿನ ಎಲ್ಲ ರೈತರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭತ್ತವೇ ಪ್ರಮುಖ ಬೆಳೆಯಾಗಿರುವುದರಿಂದ ಮಳೆಯ ಕೊರತೆ ರೈತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ,” ಎಂದು ಜಟಗೆ ಗ್ರಾಮದ ನಿವಾಸಿ ರೈತ ಮಹಾಬಳೇಶ್ವರ ತಿನೇಕರ್ ಅವರು ತಿಳಿಸಿದ್ದಾರೆ.

ಬೆಳೆಗಳಿಗೆ ನೀರುಣಿಸಲು ರೈತರು ಬಾವಿ, ಕೊಳವೆಬಾವಿ ಸೇರಿದಂತೆ ವಿವಿಧ ನೀರಿನ ಮೂಲಗಳನ್ನು ಅವಲಂಬಿಸಬೇಕಾಗಿದೆ. ಇದರ ಜೊತೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ಮಾಡುವುದು ರೈತರಿಗೆ ಮತ್ತಷ್ಟು ಕಷ್ಟಕರವಾಗಿದೆ. ಬೀಜ, ರಸಗೊಬ್ಬರ, ಕೃಷಿ ಕೆಲಸ ಹಾಗೂ ಇತರ ಖರ್ಚುಗಳ ಹೊರೆ ರೈತರ ಮೇಲಿರುವ ಸಂದರ್ಭದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ಖಾನಾಪುರ ತಾಲೂಕಿನ ಪರಿಸ್ಥಿತಿಯನ್ನು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ, ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ರೈತರಿಂದ ಆಗ್ರಹ ವ್ಯಕ್ತವಾಗಿದೆ.

ಅಲ್ಲದೆ, ಬೆಳೆ ನಷ್ಟದ ಕುರಿತು ತಕ್ಷಣ ಪಂಚನಾಮೆ ನಡೆಸಿ ಸೂಕ್ತ ಪರಿಹಾರ ನೀಡಬೇಕು, ಬೆಳೆಗಳಿಗೆ ನೀರುಣಿಸಲು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು, ಅಗತ್ಯವಿರುವ ಪ್ರದೇಶಗಳಲ್ಲಿ ನೀರಾವರಿ ಹಾಗೂ ನೀರಿನ ಲಭ್ಯತೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕು. ಅರ್ಹ ರೈತರಿಗೆ ಬೆಳೆ ವಿಮೆ ಹಾಗೂ ಬರ ಪರಿಹಾರದ ಸೌಲಭ್ಯವನ್ನು ಶೀಘ್ರವಾಗಿ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ರೈತರು ಮತ್ತು ಕೃಷಿ ಎದುರಿಸುತ್ತಿರುವ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತುರ್ತು ನೆರವು ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या