खानापूर-जांबोटी मार्गावरील शंकर पेठ पुलावर गुडघाभर पाणी; प्रवाशांचा जीव धोक्यात | ಖಾನಾಪುರ–ಜಾಂಬೋಟಿ ರಸ್ತೆಯ ಶಂಕರಪೇಟೆ ಸೇತುವೆಯ ಮೇಲೆ ಮೊಣಕಾಲು ಮಟ್ಟದ ನೀರು; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ವಾಹನ ಸವಾರರು
खानापूर, दि. ४ जुलै : सतत सुरू असलेल्या पावसामुळे खानापूर-जांबोटी मुख्य रस्त्यावरील शंकर पेठ पुलावर गुडघाभर पाणी साचत असून वाहनचालक आणि प्रवाशांना जीव मुठीत धरून प्रवास करावा लागत आहे. संबंधित समस्येकडे सार्वजनिक बांधकाम विभागाच्या (पीडब्ल्यूडी) दुर्लक्षामुळे नागरिकांमध्ये तीव्र नाराजी व्यक्त होत आहे.

स्थानिकांच्या म्हणण्यानुसार, सुमारे चार वर्षांपूर्वी पुलावर डांबरीकरण करण्यात आले होते. मात्र कालांतराने डांबरीकरणाचा कार्पेट उखडून गेल्याने पावसाचे पाणी वाहून जाण्याची व्यवस्था विस्कळीत झाली आहे. तसेच पुलावरील पाणी बाहेर जाण्यासाठी बसविण्यात आलेले निचऱ्याचे पाईप रस्त्याच्या पातळीपेक्षा उंच राहिल्याने पाण्याचा योग्य निचरा होत नसून पुलावर मोठ्या प्रमाणात पाणी साचत आहे.
याशिवाय पुलाच्या दोन्ही बाजूंचे कठडे व साईड पट्ट्या उंच झाल्यामुळे पाण्याचा प्रवाह अडत असून परिस्थिती आणखी गंभीर बनली आहे. परिणामी वाहनचालकांना पुलावरील खड्डे आणि रस्त्याचा अंदाज न आल्याने अपघाताचा धोका वाढला आहे.
स्थानिक नागरिकांनी प्रशासन आणि सार्वजनिक बांधकाम विभागाने या समस्येची तातडीने दखल घेऊन पुलावरील साचलेल्या पाण्याचा निचरा करण्यासाठी आवश्यक उपाययोजना कराव्यात, तसेच पुलाची त्वरित दुरुस्ती करून प्रवाशांना होणारा नाहक त्रास व संभाव्य अपघात टाळावेत, अशी मागणी केली आहे.
ಖಾನಾಪುರ–ಜಾಂಬೋಟಿ ರಸ್ತೆಯ ಶಂಕರಪೇಟೆ ಸೇತುವೆಯ ಮೇಲೆ ಮೊಣಕಾಲು ಮಟ್ಟದ ನೀರು; ಜೀವ ಕೈಯಲ್ಲಿ ಹಿಡಿದು ಸಂಚರಿಸುವ ವಾಹನ ಸವಾರರು
ಖಾನಾಪುರ, ಜುಲೈ 4 : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಖಾನಾಪುರ–ಜಾಂಬೋಟಿ ಮುಖ್ಯ ರಸ್ತೆಯ ಶಂಕರಪೇಟೆ ಸೇತುವೆಯ ಮೇಲೆ ಮೊಣಕಾಲು ಮಟ್ಟದ ನೀರು ನಿಂತಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯ ಬಗ್ಗೆ ಸಾರ್ವಜನಿಕ ಕಾಮಗಾರಿ ಇಲಾಖೆ (ಪಿಡಬ್ಲ್ಯೂಡಿ) ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರ ಮಾಹಿತಿಯಂತೆ, ಸುಮಾರು ನಾಲ್ಕು ವರ್ಷಗಳ ಹಿಂದೆ ಸೇತುವೆಯ ಮೇಲೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಕಾಲಕ್ರಮೇಣ ಡಾಂಬರದ ಮೇಲ್ಚಪ್ಪರ ಸಂಪೂರ್ಣ ಹಾಳಾಗಿದ್ದು, ಮಳೆನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ನೀರು ಹೊರಹೋಗಲು ಅಳವಡಿಸಿದ್ದ ಪೈಪ್‌ಗಳು ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಮಳೆನೀರು ಹೊರಹೋಗದೆ ಸೇತುವೆಯ ಮೇಲೆಯೇ ನಿಂತುಕೊಳ್ಳುತ್ತಿದೆ.
ಇದಲ್ಲದೆ, ಸೇತುವೆಯ ಎರಡೂ ಬದಿಗಳ ಪಟ್ಟಿಗಳು ಹಾಗೂ ತಡೆಗೋಡೆಗಳು ಎತ್ತರದಲ್ಲಿರುವ ಕಾರಣ ನೀರಿನ ಹರಿವಿಗೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಸೇತುವೆಯ ಮೇಲೆ ನೀರು ನಿಂತು ವಾಹನ ಸವಾರರಿಗೆ ರಸ್ತೆ ಮತ್ತು ಗುಂಡಿಗಳು ಕಾಣಿಸದೇ ಅಪಘಾತದ ಭೀತಿ ಹೆಚ್ಚಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಮೇಲಿನ ನೀರು ಸರಾಗವಾಗಿ ಹೊರಹೋಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ಸೇತುವೆಯ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
