रोजगार हमी योजनेची डिजिटल अंमलबजावणी; मजुरी वाढीचीही घोषणा | ಡಿಬಿಟಿ-ಜಿ ರಾಮಜಿ ಯೋಜನೆ ಜಾರಿ; ಮನರೇಗಾ ಕಾರ್ಮಿಕರ ಕೂಲಿಯಲ್ಲಿ ಹೆಚ್ಚಳ

खानापूर, दि. ३ : खानापूर तालुक्यासह संपूर्ण जिल्ह्यात ग्रामीण भागातील रोजगार हमी (मनरेगा) अंतर्गत काम करणाऱ्या मजुरांसाठी डीबीटी-जी रमजी (DBT-G Ramji) योजना १ जुलैपासून लागू करण्यात आली आहे. या योजनेमुळे मजुरांची नोंदणी, उपस्थिती आणि मजुरी वितरण प्रक्रिया अधिक पारदर्शक व सुलभ होणार आहे. खानापूर तालुक्यासह संपूर्ण बेळगाव जिल्ह्यात विकसित भारत रोजगार आणि उपजीविका हमी अभियान (व्हीबी-जी रामजी) योजना १ जुलैपासून लागू करण्यात आली आहे. यासोबतच रोजगार हमी (मनरेगा) अंतर्गत काम करणाऱ्या मजुरांच्या दैनंदिन मजुरीत ₹१२ ची वाढ करण्यात आल्याची माहिती जिल्हा परिषदेचे मुख्य कार्यकारी अधिकारी राहुल शिंदे यांनी दिली.
खानापूर तालुक्यासह संपूर्ण बेळगाव जिल्ह्यात रोजगार हमी (मनरेगा) अंतर्गत काम करणाऱ्या मजुरांच्या दैनंदिन मजुरीत ₹१२ ची वाढ करण्यात आल्याची माहिती जिल्हा परिषदेचे मुख्य कार्यकारी अधिकारी राहुल शिंदे यांनी दिली.
पूर्वी ₹३७० प्रतिदिन असलेला मजुरीचा दर वाढवून ₹३८२ प्रतिदिन करण्यात आला आहे. तसेच, यापूर्वी प्रत्येक पात्र कुटुंबाला वर्षातून १०० दिवसांचा रोजगार दिला जात होता. आता या योजनेअंतर्गत १२५ दिवसांचा रोजगार उपलब्ध करून दिला जाणार असून, अधिकाधिक मजुरांनी या योजनेचा लाभ घ्यावा, असे आवाहन करण्यात आले आहे.
खानापूर तालुक्यासह जिल्ह्यातील ९९.४४ टक्के कार्यरत मजुरांचे ई-केवायसी पूर्ण झाले असून, नोंदणीकृत बहुतांश मजुरांची पडताळणी प्रक्रिया देखील पूर्ण झाली आहे. स्थलांतर आणि काही तांत्रिक अडचणींमुळे काही मजुरांचे ई-केवायसी प्रलंबित असले तरी ते पूर्ण करण्यासाठी प्रशासनाकडून आवश्यक कार्यवाही सुरू आहे.
व्हीबी-जी रामजी योजनेअंतर्गत एनएमएमएस (NMMS) प्रणालीद्वारे मजुरांची उपस्थिती नोंदविण्यात येणार असून, यामुळे उपस्थिती नोंदणी अधिक पारदर्शक होईल तसेच मजुरीचे वितरण अधिक कार्यक्षम आणि विश्वासार्ह पद्धतीने होईल, असा विश्वास प्रशासनाने व्यक्त केला आहे.
ಖಾನಾಪುರ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಡಿಬಿಟಿ-ಜಿ ರಾಮಜಿ ಯೋಜನೆ ಜಾರಿ; ಮನರೇಗಾ ಕಾರ್ಮಿಕರ ಕೂಲಿಯಲ್ಲಿ ₹12 ಹೆಚ್ಚಳ
ಖಾನಾಪುರ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ವಿಬಿ-ಜಿ ರಾಮಜಿ ಯೋಜನೆ ಜಾರಿ; ಮನರೇಗಾ ಕಾರ್ಮಿಕರ ಕೂಲಿಯಲ್ಲಿ ₹12 ಹೆಚ್ಚಳ
ಖಾನಾಪುರ, ಜು. 3 : ಖಾನಾಪುರ ತಾಲ್ಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಅಭಿವೃದ್ಧಿ ಭಾರತ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಅಭಿಯಾನ (ವಿಬಿ-ಜಿ ರಾಮಜಿ) ಯೋಜನೆಯನ್ನು ಜುಲೈ 1ರಿಂದ ಜಾರಿಗೊಳಿಸಲಾಗಿದೆ. ಇದರೊಂದಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ದಿನಗೂಲಿಯಲ್ಲಿ ₹12 ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಈವರೆಗೆ ₹370 ಇದ್ದ ದಿನಗೂಲಿ ದರವನ್ನು ಜುಲೈ 1ರಿಂದ ₹382ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಈ ಹಿಂದೆ ಪ್ರತಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಈಗ ಈ ಯೋಜನೆಯಡಿ 125 ದಿನಗಳ ಉದ್ಯೋಗ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಖಾನಾಪುರ ತಾಲ್ಲೂಕು ಸೇರಿದಂತೆ ಜಿಲ್ಲೆಯ ಶೇ.99.44ರಷ್ಟು ಸಕ್ರಿಯ ಮನರೇಗಾ ಕಾರ್ಮಿಕರ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಂಡಿದ್ದು, ನೋಂದಾಯಿತ ಬಹುತೇಕ ಕಾರ್ಮಿಕರ ದಾಖಲೆಗಳ ಪರಿಶೀಲನೆಯೂ ಮುಗಿದಿದೆ. ವಲಸೆ ಹಾಗೂ ತಾಂತ್ರಿಕ ಕಾರಣಗಳಿಂದ ಕೆಲ ಕಾರ್ಮಿಕರ ಇ-ಕೆವೈಸಿ ಬಾಕಿ ಉಳಿದಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಡಿ ಎನ್ಎಂಎಂಎಸ್ (NMMS) ವ್ಯವಸ್ಥೆಯ ಮೂಲಕ ಕಾರ್ಮಿಕರ ಹಾಜರಾತಿ ದಾಖಲಿಸಲಾಗುವುದು. ಇದರಿಂದ ಹಾಜರಾತಿ ದಾಖಲಾತಿಯಲ್ಲಿ ಹೆಚ್ಚಿನ ಪಾರದರ್ಶಕತೆ ಬರಲಿದ್ದು, ಕೂಲಿ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಯೂ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ.
.
