क्रॉस व्होटिंगच्या अफवा पूर्णपणे खोट्या; पक्षादेशानुसारच मतदान केले : आमदार विठ्ठलराव हलगेकर | ಕ್ರಾಸ್ ವೋಟಿಂಗ್ ಆರೋಪ ಸಂಪೂರ್ಣ ಸುಳ್ಳು; ಪಕ್ಷದ ವಿಪ್ ಪ್ರಕಾರವೇ ಮತದಾನ ಮಾಡಿದ್ದೇನೆ: ಶಾಸಕ ವಿಠ್ಠಲರಾವ್ ಹಲಗೇಕರ
खानापूर, दि. 2 : नुकत्याच पार पडलेल्या विधान परिषद (एमएलसी) निवडणुकीत आपण पक्षादेशाविरोधात जाऊन क्रॉस व्होटिंग केल्याच्या सोशल मीडियावर पसरवल्या जात असलेल्या बातम्या पूर्णपणे खोट्या, कपोलकल्पित आणि बदनामी करण्याच्या उद्देशाने पसरविल्या जात असल्याचा परखड खुलासा खानापूरचे आमदार विठ्ठलराव हलगेकर यांनी केला.
खानापूर येथील भाजप कार्यालयात आयोजित पत्रकार परिषदेत बोलताना हलगेकर म्हणाले की, २०२३ च्या विधानसभा निवडणुकीतील पराभव स्थानिक काँग्रेस नेत्यांच्या अजूनही जिव्हारी लागला असून, तो अपमान पचवता न आल्यानेच माझ्याविरोधात सातत्याने अशा प्रकारचे खोटे प्रचार आणि अफवा पसरवल्या जात आहेत.
विधान परिषद निवडणुकीत भाजपने दिलेल्या ‘व्हीप’नुसारच आपण प्रामाणिकपणे मतदान केले असून, पहिली पसंती भाजपचे अधिकृत उमेदवार निंगप्पा पाटील यांना तर दुसरी पसंती जनता दल (सेक्युलर)चे उमेदवार गोविंदराजू यांना दिल्याचे त्यांनी स्पष्ट केले.

निवडणुकीचा निकाल लागल्यानंतर अवघ्या दहा मिनिटांत एका कन्नड वृत्तवाहिनीच्या नावाचा गैरवापर करून आपला डुप्लिकेट फोटो वापरत आपण क्रॉस व्होटिंग केल्याची खोटी बातमी सोशल मीडियावर प्रसारित करण्यात आली. सत्य समोर आल्यानंतर ती पोस्ट काही मिनिटांत हटविण्यात आली. मात्र, तिचा स्क्रीनशॉट जतन करून फेसबुकसह विविध सोशल मीडिया माध्यमांतून आजही व्हायरल केला जात असून, खानापूर तालुक्यात संभ्रम निर्माण करण्याचा प्रयत्न सुरू असल्याचा आरोप त्यांनी केला.
तालुक्यात सुरू असलेल्या विकासकामांना खीळ घालण्यासाठी आणि आपली राजकीय बदनामी करण्याच्या उद्देशाने हा पद्धतशीर कट रचला जात असल्याचा आरोपही हलगेकर यांनी यावेळी केला.
“मी जन्माने हिंदू असून हिंदुत्वासाठी लढणारा कार्यकर्ता आहे. नोकरी करत असतानाही भारतीय जनता पक्षाशी एकनिष्ठ राहून काम केले आहे. पक्षाने माझ्यावर विश्वास ठेवून उमेदवारी दिली आणि मी पक्षाशी कधीही गद्दारी केलेली नाही. पैशांसाठी किंवा कोणत्याही स्वार्थासाठी पक्षाशी विश्वासघात करण्याचा प्रश्नच उद्भवत नाही,” असे त्यांनी ठामपणे सांगितले.
खानापूरच्या जनतेने ९२ हजारांहून अधिक मताधिक्याने मला निवडून दिले आहे. त्यामुळे माझ्याशी थेट राजकीय स्पर्धा करणे शक्य नसल्याने विरोधक अशा नीच पातळीवर उतरून खोट्या अफवा पसरवत असल्याचा आरोप त्यांनी केला.
“हा केवळ माझा अपमान नसून मला मतदान करणाऱ्या ९२ हजार मतदारांचाही अपमान आहे,” असे सांगत पत्रकारांनीही सोशल मीडियावरील खोट्या व दिशाभूल करणाऱ्या बातम्यांवर विश्वास न ठेवता सत्य पडताळूनच प्रसिद्ध करावे, असे आवाहन आमदार विठ्ठलराव हलगेकर यांनी केले.
व्हिडीओ: https://www.facebook.com/share/v/1Fwe2w71qw/
ಕ್ರಾಸ್ ವೋಟಿಂಗ್ ಆರೋಪ ಸಂಪೂರ್ಣ ಸುಳ್ಳು; ಪಕ್ಷದ ವಿಪ್ ಪ್ರಕಾರವೇ ಮತದಾನ ಮಾಡಿದ್ದೇನೆ: ಶಾಸಕ ವಿಠ್ಠಲರಾವ್ ಹಲಗೇಕರ
ಖಾನಾಪುರ, ಜು. 2: ಇತ್ತೀಚೆಗೆ ನಡೆದ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ತಾನು ಪಕ್ಷದ ಆದೇಶ ಉಲ್ಲಂಘಿಸಿ ಕ್ರಾಸ್ ವೋಟಿಂಗ್ ಮಾಡಿದ್ದೇನೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವು ಸಂಪೂರ್ಣ ಸುಳ್ಳು, ಆಧಾರರಹಿತ ಹಾಗೂ ತನ್ನ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹರಡಲಾಗುತ್ತಿರುವ ಅಪಪ್ರಚಾರ ಎಂದು ಖಾನಾಪುರ ಶಾಸಕ ವಿಠ್ಠಲರಾವ್ ಹಲಗೇಕರ ಸ್ಪಷ್ಟಪಡಿಸಿದರು.
ಖಾನಾಪುರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯ ಸೋಲನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಇನ್ನೂ ಮರೆತಿಲ್ಲ. ಅದರಿಂದಲೇ ತಮ್ಮ ವಿರುದ್ಧ ನಿರಂತರವಾಗಿ ಇಂತಹ ಸುಳ್ಳು ಆರೋಪಗಳನ್ನು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನೀಡಿದ್ದ ವಿಪ್‌ನಂತೆ ತಾನು ಪ್ರಾಮಾಣಿಕವಾಗಿ ಮತ ಚಲಾಯಿಸಿದ್ದೇನೆ. ಮೊದಲ ಆದ್ಯತೆಯ ಮತವನ್ನು ಬಿಜೆಪಿ ಅಧಿಕೃತ ಅಭ್ಯರ್ಥಿ ನಿಂಗಪ್ಪ ಪಾಟೀಲ ಅವರಿಗೆ ಹಾಗೂ ಎರಡನೇ ಆದ್ಯತೆಯ ಮತವನ್ನು ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಚುನಾವಣಾ ಫಲಿತಾಂಶ ಪ್ರಕಟವಾದ ಕೇವಲ ಹತ್ತು ನಿಮಿಷಗಳಲ್ಲಿ ಒಂದು ಕನ್ನಡ ಸುದ್ದಿ ವಾಹಿನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ನಕಲಿ ಚಿತ್ರ ಬಳಸಿ ತಾವು ಕ್ರಾಸ್ ವೋಟಿಂಗ್ ಮಾಡಿದ್ದೇನೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಯಿತು. ಬಳಿಕ ಸತ್ಯ ತಿಳಿದ ಕೂಡಲೇ ಆ ಪೋಸ್ಟ್ ಅನ್ನು ಕೆಲವೇ ನಿಮಿಷಗಳಲ್ಲಿ ಅಳಿಸಲಾಯಿತು. ಆದರೆ ಅದರ ಸ್ಕ್ರೀನ್‌ಶಾಟ್‌ಗಳನ್ನು ಉಳಿಸಿಕೊಂಡು ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹರಿಬಿಡಲಾಗುತ್ತಿದ್ದು, ಖಾನಾಪುರ ತಾಲೂಕಿನಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಹಾಗೂ ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ರೀತಿಯ ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ ಎಂದು ಹಲಗೇಕರ ದೂರಿದರು.
“ನಾನು ಹುಟ್ಟಿನಿಂದಲೇ ಹಿಂದೂವಾಗಿದ್ದು, ಹಿಂದೂತ್ವದ ಪರವಾಗಿ ಹೋರಾಡುವ ಕಾರ್ಯಕರ್ತನು. ಸರ್ಕಾರಿ ಸೇವೆಯಲ್ಲಿದ್ದಾಗಲೂ ಭಾರತೀಯ ಜನತಾ ಪಕ್ಷದೊಂದಿಗೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಪಕ್ಷ ನನ್ನ ಮೇಲಿನ ವಿಶ್ವಾಸದಿಂದ ಟಿಕೆಟ್ ನೀಡಿದೆ. ಹಣ ಅಥವಾ ಯಾವುದೇ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ,” ಎಂದು ಅವರು ಹೇಳಿದರು.
ಖಾನಾಪುರದ ಜನತೆ 92 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ರಾಜಕೀಯವಾಗಿ ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕಾರಣ ವಿರೋಧಿಗಳು ಇಂತಹ ಕೀಳುಮಟ್ಟದ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
“ಇದು ನನ್ನೊಬ್ಬನ ಅವಮಾನವಲ್ಲ, ನನಗೆ ಮತ ನೀಡಿದ 92 ಸಾವಿರ ಮತದಾರರ ಅವಮಾನವೂ ಹೌದು,” ಎಂದು ಹೇಳಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಹಾಗೂ ದಾರಿತಪ್ಪಿಸುವ ಸುದ್ದಿಗಳಿಗೆ ಬಲಿಯಾಗದೆ, ಸತ್ಯಾಂಶವನ್ನು ಪರಿಶೀಲಿಸಿ ಮಾತ್ರ ಸುದ್ದಿ ಪ್ರಕಟಿಸುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದರು.
