खानापूर

गोधोळी क्रॉसजवळ दुचाकी झाडावर आदळली; रोजगार हमी योजनेच्या मजुराचा मृत्यू | ಗೋಧೋಳಿ ಕ್ರಾಸ್ ಬಳಿ ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ; ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕ ಸಾವು

खानापूर : तालुक्यातील बाळगुंद येथे रोजगार हमी योजनेच्या कामासाठी गेलेल्या एका मजुराचा दुचाकी अपघातात दुर्दैवी मृत्यू झाल्याची घटना शनिवारी घडली. संजय गणपती सुतार (रा. बाळगुंद) असे मृत्यू झालेल्या मजुराचे नाव आहे. गणेश चतुर्थीच्या पूर्वसंध्येला घडलेल्या या घटनेने परिसरात हळहळ व्यक्त होत आहे.

मिळालेल्या माहितीनुसार, गोधोळी ग्रामपंचायतीअंतर्गत बाळगुंद येथे रोजगार हमी योजनेच्या कामाला नेहमीप्रमाणे सुरुवात झाली होती. संजय सुतार हे सकाळी कामासाठी उपस्थित झाले होते. त्यांनी कामाच्या ठिकाणी आवश्यक फोटोही दिला होता. मात्र, त्यानंतर त्यांना अचानक डोकेदुखीचा त्रास जाणवू लागला.

कामाच्या ठिकाणी प्राथमिक उपचार करून त्यांना डॉक्टरांकडे जाण्याचा सल्ला देण्यात आला. त्यानंतर संजय सुतार हे आपल्या दुचाकीवरून डॉक्टरांकडे गेले. उपचार घेऊन परत येत असताना गोधोळी क्रॉसजवळ त्यांच्या दुचाकीची रस्त्यालगतच्या झाडाला जोरदार धडक झाली. या अपघातात त्यांचा जागीच मृत्यू झाला.

दरम्यान, नंदगड येथे सुरू असलेल्या प्रजासत्ताक आंदोलनाच्या कार्यक्रमात उपस्थित असलेल्या अधिकारी वर्गाला या घटनेची माहिती मिळताच तालुका पंचायत कार्यकारी अधिकारी रमेश मैत्री, सहाय्यक अधिकारी तसेच ग्रामपंचायत विकास अधिकारी हनुमंत पाटील यांनी घटनास्थळी भेट देऊन पाहणी केली.

या घटनेची नोंद नंदगड पोलिस ठाण्यात करण्यात आली असून, पोलिसांकडून पुढील तपास सुरू आहे. तसेच रोजगार हमी योजनेचे वरिष्ठ प्रोजेक्ट डायरेक्टर गंगाधर यांनीही घटनास्थळी भेट देऊन पाहणी केली.

रोजगार हमी योजनेच्या कामासाठी आलेल्या मजुराचा दुर्दैवी अपघाती मृत्यू झाल्याने ग्रामस्थ व कामगार वर्गातून शोक व्यक्त करण्यात येत आहे. मृताच्या कुटुंबीयांना शासनाच्या नियमानुसार रोजगार हमी योजनेतून योग्य ती नुकसानभरपाई मिळावी, अशी मागणी ग्रामस्थ व कामगार वर्गातून करण्यात येत आहे.

ಗೋಧೋಳಿ ಕ್ರಾಸ್ ಬಳಿ ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ; ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕ ಸಾವು

ಗಣೇಶ ಚತುರ್ಥಿಯ ಮುನ್ನಾದಿನ ದುರ್ಘಟನೆ; ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹ

ಖಾನಾಪುರ: ತಾಲೂಕಿನ ಬಾಳಗೋಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೊಬ್ಬ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಶನಿವಾರ ಸಂಭವಿಸಿದೆ. ಸಂಜಯ ಗಣಪತಿ ಸುತಾರ (ಬಾಳಗೋಂದ) ಮೃತ ಕಾರ್ಮಿಕ ಎಂದು ತಿಳಿದುಬಂದಿದೆ. ಗಣೇಶ ಚತುರ್ಥಿಯ ಮುನ್ನಾದಿನ ನಡೆದ ಈ ಘಟನೆಯಿಂದ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಗೋಧೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಗೋಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಎಂದಿನಂತೆ ಆರಂಭಗೊಂಡಿತ್ತು. ಸಂಜಯ ಸುತಾರ ಅವರು ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದರು. ಕೆಲಸದ ಸ್ಥಳದಲ್ಲಿ ಅಗತ್ಯವಿರುವ ಫೋಟೋ ಕೂಡ ನೀಡಿದ್ದರು. ಆದರೆ ನಂತರ ಅವರಿಗೆ ಏಕಾಏಕಿ ತಲೆನೋವು ಕಾಣಿಸಿಕೊಂಡಿತ್ತು.

ಕೆಲಸದ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವೈದ್ಯರ ಬಳಿಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಸಂಜಯ ಸುತಾರ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ವೈದ್ಯರ ಬಳಿಗೆ ತೆರಳಿದ್ದರು. ಚಿಕಿತ್ಸೆ ಪಡೆದು ಮರಳಿ ಬರುತ್ತಿದ್ದ ವೇಳೆ ಗೋಧೋಳಿ ಕ್ರಾಸ್ ಬಳಿ ಅವರ ದ್ವಿಚಕ್ರ ವಾಹನವು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ನಂದಗಡದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೈತ್ರಿ, ಸಹಾಯಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನೆಯ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಹಿರಿಯ ಪ್ರಾಜೆಕ್ಟ್ ಡೈರೆಕ್ಟರ್ ಗಂಗಾಧರ ಅವರೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೊಬ್ಬ ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ಗ್ರಾಮಸ್ಥರು ಹಾಗೂ ಕಾರ್ಮಿಕ ವರ್ಗದಿಂದ ಸಂತಾಪ ವ್ಯಕ್ತವಾಗಿದೆ. ಮೃತ ಕಾರ್ಮಿಕನ ಕುಟುಂಬಕ್ಕೆ ಸರ್ಕಾರದ ನಿಯಮಾನುಸಾರ ಉದ್ಯೋಗ ಖಾತ್ರಿ ಯೋಜನೆಯಡಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಹಾಗೂ ಕಾರ್ಮಿಕರು ಆಗ್ರಹಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या