खानापूर

हेस्कॉम कर्मचाऱ्यांच्या मागणीला अंजलीताईंचा तातडीने प्रतिसाद; तालुक्याला 45 लाईनमन | ಹೆಸ್ಕಾಂ ನೌಕರರ ಮನವಿಗೆ ಅಂಜಲಿತಾಯಿಯವರ ತಕ್ಷಣದ ಸ್ಪಂದನೆ; ತಾಲೂಕಿಗೆ 45 ಲೈನ್‌ಮ್ಯಾನ್‌ಗಳು

खानापूर : खानापूरच्या माजी आमदार तथा एआयसीसी सचिव डॉ. अंजलीताई हेमंत निंबाळकर यांच्या पाठपुराव्यामुळे खानापूर तालुक्याला 45 ज्युनियर पॉवरमन (लाईनमन) मिळाल्याची माहिती समोर आली आहे.
काही दिवसांपूर्वी खानापूर तालुक्यातील हेस्कॉमचे कर्मचारी रायगड येथे अंजलीताई निंबाळकर यांची भेट घेण्यासाठी गेले होते. यावेळी तालुक्यात लाईनमनची मोठी कमतरता असून, तब्बल 43 लाईनमनची पदे रिक्त असल्याची माहिती कर्मचाऱ्यांनी अंजलीताईंना दिली.

कर्मचाऱ्यांची समस्या समजून घेत अंजलीताईंनी तत्काळ दोन दूरध्वनी केले. यापैकी एक फोन हेस्कॉमच्या व्यवस्थापकीय संचालक वैशाली मॅडम यांना, तर दुसरा फोन ऊर्जामंत्र्यांना केला. ऊर्जामंत्री त्यावेळी अन्य कामात व्यस्त असल्याने त्यांनी फोन घेतला नाही. मात्र, सुमारे 20 ते 25 मिनिटांनी मंत्र्यांनी अंजलीताईंना परत फोन केला.
यावेळी अंजलीताईंनी तालुक्यातील लाईनमनच्या कमतरतेचा मुद्दा मंत्र्यांच्या निदर्शनास आणून दिला. तसेच, हेस्कॉमच्या एमडींशी याबाबत चर्चा केली असून, आपणही एमडींशी एकदा यासंदर्भात बोलावे, अशी विनंती त्यांनी मंत्र्यांना केली.
यानंतर खानापूर तालुक्याला 45 ज्युनियर पॉवरमन उपलब्ध करून देण्यात आल्याची आनंदाची बातमी समोर आली आहे.
या संदर्भात कर्मचारी संतोष राठोड यांनी आज ही आनंदाची बातमी दिली. तसेच, या कामासाठी अंजलीताई निंबाळकर यांची भेट घेऊन त्यांचे आभार व्यक्त करणार असल्याचे त्यांनी सांगितले. अंजलीताई खानापूरला आल्यानंतर त्यांची भेट घेण्यासाठी जाणार असल्याचेही कर्मचाऱ्यांनी सांगितले.
अंजलीताईंना भेटलेल्या कर्मचाऱ्यांमध्ये संतोष राठोड, उदय मादर, हरीश कड्डूगोल, गंगाधर चावळगी, भरतेश नागणूर, अनिल पुजारी, आसिफ अत्तर आणि बसवराज हवालद यांचा समावेश होता.

ಅಂಜಲಿತಾಯಿಯವರ ಎರಡು ದೂರವಾಣಿ ಕರೆಗಳ ಫಲ; ಖಾನಾಪುರ ತಾಲೂಕಿಗೆ 45 ಜೂನಿಯರ್ ಪವರ್‌ಮ್ಯಾನ್‌ಗಳು
ಖಾನಾಪುರ : ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರ ತ್ವರಿತ ಪ್ರಯತ್ನದ ಫಲವಾಗಿ ಖಾನಾಪುರ ತಾಲೂಕಿಗೆ 45 ಜೂನಿಯರ್ ಪವರ್‌ಮ್ಯಾನ್‌ಗಳು (ಲೈನ್‌ಮ್ಯಾನ್‌ಗಳು) ಲಭ್ಯವಾಗಿದ್ದಾರೆ.
ಕೆಲವು ದಿನಗಳ ಹಿಂದೆ ಖಾನಾಪುರ ತಾಲೂಕಿನ ಹೆಸ್ಕಾಂ ಇಲಾಖೆಯ ನೌಕರರಾದ ಸಂತೋಷ್ ರಾಥೋಡ್, ಉದಯ್ ಮದಾರ್, ಹರೀಶ್ ಕಡ್ಡುಗೋಳ್, ಗಂಗಾಧರ್ ಚಾವಳಗಿ, ಭರತೇಶ್ ನಾಗನೂರ್, ಅನಿಲ್ ಪುಜೇರಿ, ಆಸಿಫ್ ಅತ್ತಾರ್ ಹಾಗೂ ಬಸವರಾಜ್ ಹವಾಲದ್ ಅವರು ರಾಯಗಡದಲ್ಲಿ ಅಂಜಲಿತಾಯಿ ನಿಂಬಾಳ್ಕರ್ ಅವರನ್ನು ಭೇಟಿ ಮಾಡಿದ್ದರು.
ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಲೈನ್‌ಮ್ಯಾನ್‌ಗಳ ತೀವ್ರ ಕೊರತೆ ಇದ್ದು, ಸುಮಾರು 43 ಲೈನ್‌ಮ್ಯಾನ್‌ಗಳ ಹುದ್ದೆಗಳು ಖಾಲಿ ಇರುವುದಾಗಿ ನೌಕರರು ಅಂಜಲಿತಾಯಿಯವರ ಗಮನಕ್ಕೆ ತಂದಿದ್ದರು.
ನೌಕರರ ಸಮಸ್ಯೆಯನ್ನು ಆಲಿಸಿದ ಅಂಜಲಿತಾಯಿಯವರು ತಕ್ಷಣವೇ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಮೇಡಂ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಬಳಿಕ ಇಂಧನ ಸಚಿವರಿಗೂ ಕರೆ ಮಾಡಿದರು. ಸಚಿವರು ಆರಂಭದಲ್ಲಿ ಬೇರೆ ಕಾರ್ಯದಲ್ಲಿ ನಿರತರಾಗಿದ್ದರಿಂದ ಕರೆ ಸ್ವೀಕರಿಸದಿದ್ದರೂ, ಸುಮಾರು 20–25 ನಿಮಿಷಗಳ ಬಳಿಕ ಮರಳಿ ಕರೆ ಮಾಡಿದರು.
ಈ ವೇಳೆ ಅಂಜಲಿತಾಯಿಯವರು ತಾಲೂಕಿನಲ್ಲಿ ಲೈನ್‌ಮ್ಯಾನ್‌ಗಳ ಕೊರತೆಯಿರುವ ವಿಷಯವನ್ನು ಸಚಿವರ ಗಮನಕ್ಕೆ ತಂದರು. ಅಲ್ಲದೆ, ಈ ಕುರಿತು ಹೆಸ್ಕಾಂ ಎಂಡಿಯವರೊಂದಿಗೆ ಮಾತನಾಡಿರುವುದಾಗಿ ತಿಳಿಸಿ, ತಾವು ಕೂಡ ಎಂಡಿಯವರೊಂದಿಗೆ ಒಮ್ಮೆ ಮಾತನಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಅಂಜಲಿತಾಯಿಯವರ ಈ ತ್ವರಿತ ಪ್ರಯತ್ನದ ಬಳಿಕ ಖಾನಾಪುರ ತಾಲೂಕಿಗೆ 45 ಜೂನಿಯರ್ ಪವರ್‌ಮ್ಯಾನ್‌ಗಳನ್ನು ನೀಡಿರುವ ಸಂತಸದ ಸುದ್ದಿ ಹೊರಬಿದ್ದಿದೆ.
ಈ ಕುರಿತು ಹೆಸ್ಕಾಂ ನೌಕರ ಸಂತೋಷ್ ರಾಥೋಡ್ ಅವರು ಇಂದು ಮಾಹಿತಿ ಹಂಚಿಕೊಂಡಿದ್ದು, ಅಂಜಲಿತಾಯಿ ನಿಂಬಾಳ್ಕರ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಂಜಲಿತಾಯಿಯವರು ಖಾನಾಪುರಕ್ಕೆ ಬಂದಾಗ ಅವರನ್ನು ಭೇಟಿ ಮಾಡಲು ತೆರಳುವುದಾಗಿ ನೌಕರರು ಹೇಳಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या