खानापुरात दर महिन्याला 15 ते 16 कोटींचा थेट लाभ; पंचहमी योजनांमुळे सर्वसामान्यांना मोठा दिलासा: डॉ. अंजलीताई निंबाळकर | ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಖಾನಾಪುರ ತಾಲೂಕಿಗೆ ಕಳೆದ ೩ ವರ್ಷಗಳಲ್ಲಿ ೫೫೦ ಕೋಟಿ ರೂ. ನೇರ ಲಾಭ: ಡಾ. ಅಂಜಲಿತಾಯಿ ನಿಂಬಾಳ್ಕರ್
खानापूर: काँग्रेस सरकारने दिलेल्या आश्वासनांनुसार राज्यभरात लागू केलेल्या ‘पंचहमी’ गॅरंटी योजनांचा थेट फायदा राज्यातील गरीब महिला, सामान्य नागरिक, शेतकरी आणि कामगार वर्गाला मिळत आहे. एकट्या खानापूर तालुक्यात गेल्या तीन वर्षांत या योजनांच्या माध्यमातून ५५० ते ६०० कोटी रुपयांचा थेट आर्थिक लाभ जनतेच्या खात्यात आणि दैनंदिन जीवनात जमा झाला आहे, असा दावा माजी आमदार तथा AICC सचिव डॉ. अंजलीताई हेमंत निंबाळकर यांनी केला आहे.
योजनांच्या आकडेवारीबाबत माहिती देताना त्यांनी सांगितले की, खानापूर तालुक्यातील सुमारे ६३ हजार महिलांना ‘गृहलक्ष्मी’ योजनेअंतर्गत दरमहा प्रत्येकी २,००० रुपये मिळत आहेत. यामुळे केवळ या एकाच योजनेतून तालुक्यात दरमहा तब्बल १२.५० कोटी रुपये येत आहेत. याशिवाय, ‘गृहज्योती’ योजनेमुळे मोफत व सवलतीच्या विजेपोटी तालुक्यातील जनतेची दरमहा १.५० ते २ कोटी रुपयांची बचत होत आहे. महिलांसाठी मोफत बसप्रवास (‘शक्ती’ योजना) आणि सवलतीचे मोफत राशन (‘अन्नभाग्य’ योजना) यांमुळे जनतेला मोठा आर्थिक दिलासा मिळाला आहे.
एकंदरीत विचार केल्यास, खानापूर तालुक्यात दर महिन्याला सुमारे १५ ते १६ कोटी रुपयांची थेट मदत पोहोचत आहे. गेल्या ३६ महिन्यांचा (३ वर्षे) हिशोब पाहिल्यास हा निधी ढोबळमानाने ५५० ते ६०० कोटी रुपयांच्या घरात जातो, असे त्यांनी स्पष्ट केले.
या वेळी विरोधी पक्षांवर निशाणा साधताना डॉ. निंबाळकर म्हणाल्या, “काँग्रेस जे बोलते, ते करून दाखवते. आमचे सरकार थेट जनतेच्या हिताचे काम करत आहे. दुसरीकडे, राम मंदिराच्या नावाने जनतेकडून गोळा केलेल्या देणग्यांच्या पैशांबाबतही अनेक गंभीर प्रश्न उपस्थित होत असून जनतेला आता लबाडी कोणाची आहे ते स्पष्ट कळू लागले आहे.”
तसेच, “स्वातंत्र्यापासून काँग्रेसने धरणे, शाळा, वीज, पाणी, हरित आणि संगणक क्रांती घडवून देशाचा विकास केला. परंतु, सध्याच्या सत्ताधाऱ्यांचे लक्ष देशाच्या हितापेक्षा आपल्या उद्योगपती मित्रांना (अदानी-अंबानी) मदत करण्यावरच जास्त आहे. त्यामुळे सामान्य जनतेने वेळीच सावध होण्याची गरज आहे,” असे आवाहनही त्यांनी केले.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಖಾನಾಪುರ ತಾಲೂಕಿಗೆ ಕಳೆದ ೩ ವರ್ಷಗಳಲ್ಲಿ ೫೫೦ ಕೋಟಿ ರೂ. ನೇರ ಲಾಭ: ಡಾ. ಅಂಜಲಿತಾಯಿ ನಿಂಬಾಳ್ಕರ್
ಖಾನಾಪುರ: ಕಾಂಗ್ರೆಸ್ ಸರ್ಕಾರವು ನೀಡಿದ ಭರವಸೆಯಂತೆ ರಾಜ್ಯಾದ್ಯಂತ ಜಾರಿಗೆ ತಂದಿರುವ ‘ಪಂಚ ಗ್ಯಾರಂಟಿ’ ಯೋಜನೆಗಳಿಂದ ಬಡ ಮಹಿಳೆಯರು, ಸಾಮಾನ್ಯ ಜನತೆ, ರೈತರು ಮತ್ತು ಕಾರ್ಮಿಕ ವರ್ಗಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಗುತ್ತಿದೆ. ಕೇವಲ ಖಾನಾಪುರ ತಾಲೂಕ ಒಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಳ ಮೂಲಕ ಸುಮಾರು ೫೫೦ ರಿಂದ ೬೦೦ ಕೋಟಿ ರೂಪಾಯಿಗಳ ನೇರ ಲಾಭ ಜನರಿಗೆ ತಲುಪಿದೆ ಎಂದು ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.
ಯೋಜನೆಗಳ ವಿವರ ನೀಡಿದ ಅವರು, ಖಾನಾಪುರ ತಾಲೂಕಿನ ಸುಮಾರು ೬೩ ಸಾವಿರ ಮಹಿಳೆಯರಿಗೆ ‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳು ತಲಾ ೨,೦೦೦ ರೂಪಾಯಿ ಸಿಗುತ್ತಿದೆ. ಅಂದರೆ, ಈ ಒಂದೇ ಯೋಜನೆಯಿಂದ ತಾಲೂಕಿಗೆ ಪ್ರತಿ ತಿಂಗಳು ಅಂದಾಜು ೧೨.೫೦ ಕೋಟಿ ರೂಪಾಯಿ ಹರಿದುಬರುತ್ತಿದೆ. ಇದರೊಂದಿಗೆ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯಿಂದ ತಾಲೂಕಿನ ಜನರಿಗೆ ಮಾಸಿಕ ೧.೫೦ ರಿಂದ ೨ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (‘ಶಕ್ತಿ’ ಯೋಜನೆ) ಮತ್ತು ಉಚಿತ ಪಡಿತರ (‘ಅನ್ನಭಾಗ್ಯ’ ಯೋಜನೆ) ಸೌಲಭ್ಯಗಳಿಂದಲೂ ಬಡ ಕುಟುಂಬಗಳಿಗೆ ಆರ್ಥಿಕ ನೆರವು ಸಿಕ್ಕಿದೆ.
ಒಟ್ಟಾರೆಯಾಗಿ, ಖಾನಾಪುರ ತಾಲೂಕಿಗೆ ಪ್ರತಿ ತಿಂಗಳು ಸುಮಾರು ೧೫ ರಿಂದ ೧೬ ಕೋಟಿ ರೂಪಾಯಿಗಳ ನೇರ ಲಾಭ ಸಿಗುತ್ತಿದ್ದು, ಕಳೆದ ೩೬ ತಿಂಗಳುಗಳ (೩ ವರ್ಷ) ಲೆಕ್ಕಾಚಾರ ನೋಡಿದರೆ ಒಟ್ಟು ೫೫೦ ರಿಂದ ೬೦೦ ಕೋಟಿ ರೂಪಾಯಿ ನೇರವಾಗಿ ತಾಲೂಕಿನ ಜನರ ಕೈಸೇರಿದೆ ಎಂದು ಅವರು ಹೇಳಿದರು.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಡಾ. ನಿಂಬಾಳ್ಕರ್, “ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ನಮ್ಮ ಸರ್ಕಾರ ಜನರಿಗೆ ನೇರ ಲಾಭ ನೀಡುತ್ತಿದ್ದರೆ, ಇನ್ನೊಂದೆಡೆ ರಾಮಮಂದಿರದ ದೇಣಿಗೆ ಹಣದ ವಿಷಯದಲ್ಲೂ ಅನೇಕ ಗಂಭೀರ ಪ್ರಶ್ನೆಗಳು ಎದ್ದಿವೆ. ಯಾರು ವಂಚನೆ ಮಾಡುತ್ತಿದ್ದಾರೆ ಎಂಬುದು ಈಗ ಜನರಿಗೆ ಅರ್ಥವಾಗುತ್ತಿದೆ,” ಎಂದರು.
ಮುಂದುವರಿದು, “ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಶಾಲೆಗಳು, ವಿದ್ಯುತ್, ನೀರಾವರಿ, ಹಸಿರು ಕ್ರಾಂತಿ ಮತ್ತು ಕಂಪ್ಯೂಟರ್ ಕ್ರಾಂತಿಯ ಮೂಲಕ ದೇಶವನ್ನು ಅಭಿವೃದ್ಧಿಪಡಿಸಿತು. ಆದರೆ ಇಂದಿನ ಆಡಳಿತಗಾರರು ದೇಶದ ಹಿತಾಸಕ್ತಿಗಿಂತ ತಮ್ಮ ಉದ್ಯಮಿ ಸ್ನೇಹಿತರಾದ ಅದಾನಿ-ಅಂಬಾನಿ ಅವರಿಗೆ ಸಹಾಯ ಮಾಡುವುದರಲ್ಲೇ ನಿರತರಾಗಿದ್ದಾರೆ. ಹೀಗಾಗಿ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಳ್ಳಬೇಕು,” ಎಂದು ಕರೆ ನೀಡಿದರು.

