खानापूर

तेरेगाळी क्रॉसजवळ जामगाव–खानापूर बसचा अपघात; जुन्या बसेसच्या वापरावर नागरिकांची नाराजी | ತೆರೆಗಾಳಿ ಕ್ರಾಸ್ ಬಳಿ ಜಾಮಗಾಂವ್–ಖಾನಾಪುರ ಬಸ್ ಅಪಘಾತ; ಹಳೆಯ ಬಸ್‌ಗಳ ಬಳಕೆಗೆ ನಾಗರಿಕರ ಆಕ್ರೋಶ

खानापूर : जामगावहून खानापूरच्या दिशेने येणाऱ्या बसचा आज सकाळी तेरेगाळी क्रॉसजवळ अपघात झाला. एका वळणावर बस येत असताना रस्त्यावर पडलेल्या खड्ड्यामुळे चालकाचे नियंत्रण सुटले आणि बस रस्त्याच्या बाजूला असलेल्या गटारात जाऊन अडकली. या अपघातात बसच्या एका बाजूचे नुकसान झाले आहे.

रस्त्यावरील खड्ड्यामुळे चालकाचे नियंत्रण सुटल्याचा प्राथमिक अंदाज आहे. बस गटारात गेल्याने घटनास्थळी काही काळ भीतीचे वातावरण निर्माण झाले होते. मात्र, सुदैवाने या अपघातात कोणत्याही प्रवाशाला दुखापत झाली नाही.

जामगाव–हेम्माडगा परिसरात रस्त्यांची दुरवस्था

जामगाव तसेच हेम्माडगा परिसरातील रस्त्यांची स्थिती अनेक ठिकाणी अत्यंत खराब असून, रस्त्यावर मोठमोठे खड्डे पडलेले आहेत. त्याचबरोबर हा परिसर मोठ्या प्रमाणात जंगलमय व डोंगराळ असल्याने अनेक ठिकाणी रस्ते अरुंद आणि वळणावळणाचे आहेत. त्यामुळे या मार्गावर वाहन चालवताना विशेष काळजी घ्यावी लागते.

जुन्या बसेस ग्रामीण मार्गांवर सोडण्याबाबत नाराजी

अशा खराब आणि खड्डेमय रस्त्यांवर जुन्या व खराब स्थितीतील बसेस सोडल्या जात असल्याबद्दल नागरिकांमध्ये नाराजी आहे. या मार्गावर दररोज विद्यार्थी, नोकरदार, शेतकरी तसेच ग्रामीण भागातील नागरिक मोठ्या प्रमाणात बससेवेचा वापर करतात.

खड्डेमय आणि धोकादायक रस्त्यांवर जुन्या बसेस धावत असल्याने प्रवाशांच्या सुरक्षिततेचा प्रश्न निर्माण होत आहे. त्यामुळे खानापूर आगाराने ग्रामीण भागातील मार्गांसाठी जुन्या बसेसऐवजी चांगल्या स्थितीतील व सुरक्षित बसेस उपलब्ध करून द्याव्यात, अशी मागणी नागरिकांकडून करण्यात येत आहे.

आजच्या अपघातात सुदैवाने कोणतीही जीवितहानी झाली नसली, तरी या घटनेने रस्त्यांची दुरवस्था आणि जुन्या बसेसचा प्रश्न पुन्हा एकदा ऐरणीवर आणला आहे. भविष्यात मोठी दुर्घटना घडण्यापूर्वी खानापूर आगार आणि संबंधित प्रशासनाने याची गांभीर्याने दखल घेण्याची गरज आहे.

जामगाव व हेम्माडगा परिसरातील धोकादायक खड्डे तातडीने बुजवावेत, रस्त्यांची आवश्यक दुरुस्ती करावी आणि या मार्गावर चांगल्या स्थितीतील बसेसच सोडाव्यात, अशी मागणी प्रवासी व नागरिकांनी केली आहे.

आज सुदैवाने मोठा अनर्थ टळला; मात्र प्रशासनाने या घटनेकडे इशारा म्हणून पाहून प्रवाशांच्या सुरक्षिततेसाठी तातडीने योग्य उपाययोजना करणे गरजेचे आहे.

ತೆರೆಗಾಳಿ ಕ್ರಾಸ್ ಬಳಿ ಜಾಮಗಾಂವ್–ಖಾನಾಪುರ ಬಸ್ ಅಪಘಾತ; ಹಳೆಯ ಬಸ್‌ಗಳ ಬಳಕೆಗೆ ನಾಗರಿಕರ ಆಕ್ರೋಶ

ರಸ್ತೆ ಗುಂಡಿನಿಂದ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಬಸ್; ಗ್ರಾಮೀಣ ಮಾರ್ಗಗಳಿಗೆ ಉತ್ತಮ ಸ್ಥಿತಿಯ ಬಸ್‌ಗಳನ್ನು ನೀಡುವಂತೆ ಆಗ್ರಹ

ಖಾನಾಪುರ : ಜಾಮಗಾಂವ್‌ನಿಂದ ಖಾನಾಪುರದ ಕಡೆಗೆ ಬರುತ್ತಿದ್ದ ಬಸ್ ಇಂದು ಬೆಳಗ್ಗೆ ತೆರೆಗಾಳಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಬಸ್ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಗುಂಡಿನಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಪರಿಣಾಮ ಬಸ್‌ನ ಒಂದು ಬದಿಗೆ ಹಾನಿಯಾಗಿದೆ.

ರಸ್ತೆಯಲ್ಲಿದ್ದ ಗುಂಡಿನಿಂದ ಚಾಲಕನ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂಬುದು ಪ್ರಾಥಮಿಕ ಅಂದಾಜಾಗಿದೆ. ಬಸ್ ಚರಂಡಿಗೆ ಇಳಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

ಜಾಮಗಾಂವ್–ಹೆಮ್ಮಾಡಗಾ ಭಾಗದಲ್ಲಿ ರಸ್ತೆ ದುಸ್ಥಿತಿ

ಜಾಮಗಾಂವ್ ಹಾಗೂ ಹೆಮ್ಮಾಡಗಾ ಭಾಗದ ರಸ್ತೆಗಳು ಹಲವು ಕಡೆ ಗುಂಡಿಗಳಿಂದ ಕೂಡಿದ್ದು, ಕಿರಿದಾದ ಹಾಗೂ ತಿರುವುಗಳಿಂದ ಕೂಡಿವೆ. ಇದರ ಜೊತೆಗೆ ಈ ಪ್ರದೇಶವು ಹೆಚ್ಚಿನ ಪ್ರಮಾಣದಲ್ಲಿ ಅರಣ್ಯಮಯ ಹಾಗೂ ಗುಡ್ಡಗಾಡು ಪ್ರದೇಶವಾಗಿದ್ದು, ಹಲವು ಕಡೆ ರಸ್ತೆ ಪರಿಸ್ಥಿತಿ ಹದಗೆಟ್ಟಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.

ಗ್ರಾಮೀಣ ಮಾರ್ಗಗಳಲ್ಲಿ ಹಳೆಯ ಬಸ್‌ಗಳ ಬಳಕೆಗೆ ಆಕ್ರೋಶ

ಇಂತಹ ಗುಂಡಿಮಯ ಹಾಗೂ ಅಪಾಯಕಾರಿ ರಸ್ತೆಗಳ ಮೇಲೆ ಹಳೆಯ ಹಾಗೂ ಸೂಕ್ತ ಸ್ಥಿತಿಯಲ್ಲಿಲ್ಲದ ಬಸ್‌ಗಳನ್ನು ಸಂಚರಿಸಲಾಗುತ್ತಿದೆ ಎಂಬ ಬಗ್ಗೆ ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಈ ಮಾರ್ಗದಲ್ಲಿ ಪ್ರತಿದಿನ ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು ಸೇರಿದಂತೆ ಗ್ರಾಮೀಣ ಭಾಗದ ಹಲವಾರು ನಾಗರಿಕರು ಬಸ್ ಸೇವೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹಳೆಯ ಬಸ್‌ಗಳ ಬದಲಿಗೆ ಉತ್ತಮ ಸ್ಥಿತಿಯಲ್ಲಿರುವ ಹಾಗೂ ಸುರಕ್ಷಿತ ಬಸ್‌ಗಳನ್ನು ಗ್ರಾಮೀಣ ಮಾರ್ಗಗಳಿಗೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಇಂದಿನ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಘಟನೆ ರಸ್ತೆಯ ದುಸ್ಥಿತಿ ಹಾಗೂ ಗ್ರಾಮೀಣ ಮಾರ್ಗಗಳಲ್ಲಿ ಸಂಚರಿಸುವ ಹಳೆಯ ಬಸ್‌ಗಳ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ದೊಡ್ಡ ಅನಾಹುತ ಸಂಭವಿಸುವ ಮುನ್ನ ಖಾನಾಪುರ ಬಸ್ ಡಿಪೋ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಾಮಗಾಂವ್ ಹಾಗೂ ಹೆಮ್ಮಾಡಗಾ ಭಾಗದ ರಸ್ತೆಗಳಲ್ಲಿರುವ ಅಪಾಯಕಾರಿ ಗುಂಡಿಗಳನ್ನು ಕೂಡಲೇ ಮುಚ್ಚಿ ರಸ್ತೆ ದುರಸ್ತಿ ಮಾಡಬೇಕು. ಜೊತೆಗೆ ಈ ಮಾರ್ಗದಲ್ಲಿ ಉತ್ತಮ ಸ್ಥಿತಿಯ ಹಾಗೂ ಸುರಕ್ಷಿತ ಬಸ್‌ಗಳನ್ನು ಮಾತ್ರ ಸಂಚರಿಸುವಂತೆ ಮಾಡಬೇಕು ಎಂಬುದು ಪ್ರಯಾಣಿಕರು ಹಾಗೂ ನಾಗರಿಕರ ಪ್ರಮುಖ ಬೇಡಿಕೆಯಾಗಿದೆ.

ಇಂದು ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಸ್ತೆ ದುರಸ್ತಿ ಹಾಗೂ ಬಸ್‌ಗಳ ಸುರಕ್ಷತಾ ಸ್ಥಿತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನಹರಿಸಬೇಕಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या