खानापूर

खानापूरचा बकरी बाजार गर्दीने फुलला; काही काळ वाहतूक कोंडी, 5 कोटींच्या उलाढालीचा अंदाज | ಖಾನಾಪುರದ ಮೇಕೆ ಮಾರುಕಟ್ಟೆಯಲ್ಲಿ ಭಾರೀ ಜನಸ್ತೋಮ; ಕೆಲಕಾಲ ಸಂಚಾರ ದಟ್ಟಣೆ, ₹5 ಕೋಟಿಗೂ ಅಧಿಕ ವಹಿವಾಟಿನ ಅಂದಾಜು

खानापूर : गणेश चतुर्थीदरम्यान साजऱ्या होणाऱ्या ऋषिपंचमीच्या पारंपरिक प्रथेसाठी बकऱ्यांची खरेदी-विक्री करण्यासाठी रविवारी दुपारच्या सुमारास खानापूर शहरातील मरियम्मा मंदिरासमोर भरलेल्या बकरी बाजारात मोठी गर्दी झाली. खानापूर तालुक्यासह परिसरातील विविध गावांमधून नागरिक, शेतकरी आणि पशुपालक मोठ्या संख्येने बाजारात दाखल झाले होते.

दुपारच्या वेळी बाजार परिसरात बकऱ्यांची खरेदी-विक्री मोठ्या प्रमाणात सुरू होती. विक्रीसाठी आणलेल्या बकऱ्यांमुळे बाजार परिसर गजबजून गेला होता. खरेदीदारांकडून बकऱ्यांची पाहणी करून दर ठरवले जात होते.

बाजारातील वाढलेल्या गर्दीमुळे मरियम्मा मंदिर परिसरासह शहरातील काही रस्त्यांवर काही काळ वाहतूक कोंडी झाली. बकऱ्या घेऊन आलेली वाहने, दुचाकी आणि चारचाकी वाहनांमुळे वाहतुकीवर परिणाम झाला.

५ कोटींच्या उलाढालीचा अंदाज

गणेश चतुर्थीदरम्यान साजऱ्या होणाऱ्या ऋषिपंचमीच्या पारंपरिक प्रथेमुळे दरवर्षी खानापूरचा हा बकरी बाजार मोठ्या प्रमाणात भरतो. यंदाही बाजारात मोठ्या संख्येने बकऱ्यांची खरेदी-विक्री झाली असून, सुमारे ५ कोटी रुपयांची उलाढाल झाल्याचा अंदाज व्यक्त केला जात आहे. अधिकृत आकडेवारी उपलब्ध झाल्यानंतरच अचूक उलाढाल स्पष्ट होणार आहे.

शेतकरी, पशुपालक, व्यापारी आणि खरेदीदार यांच्या मोठ्या उपस्थितीमुळे दुपारच्या वेळी बाजार परिसरात उत्साहाचे वातावरण पाहायला मिळाले.

ಖಾನಾಪುರದ ಮೇಕೆ ಮಾರುಕಟ್ಟೆಯಲ್ಲಿ ಭಾರೀ ಜನಸ್ತೋಮ; ಕೆಲಕಾಲ ಸಂಚಾರ ದಟ್ಟಣೆ, ₹5 ಕೋಟಿಗೂ ಅಧಿಕ ವಹಿವಾಟಿನ ಅಂದಾಜು

ಖಾನಾಪುರ : ಗಣೇಶ ಚತುರ್ಥಿಯ ಸಂದರ್ಭದಲ್ಲಿ ಆಚರಿಸಲಾಗುವ ಋಷಿಪಂಚಮಿಯ ಸಾಂಪ್ರದಾಯಿಕ ಆಚರಣೆಗಾಗಿ ಮೇಕೆಗಳ ಖರೀದಿ–ಮಾರಾಟ ನಡೆಸಲು ಭಾನುವಾರ ಮಧ್ಯಾಹ್ನ ಖಾನಾಪುರ ಪಟ್ಟಣದ ಮರಿಯಮ್ಮ ದೇವಸ್ಥಾನದ ಎದುರು ನಡೆದ ಮೇಕೆ ಮಾರುಕಟ್ಟೆಯಲ್ಲಿ ಭಾರೀ ಜನಸ್ತೋಮ ಕಂಡುಬಂತು.

ಖಾನಾಪುರ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು, ಪಶುಸಂಗೋಪಕರು, ವ್ಯಾಪಾರಿಗಳು ಹಾಗೂ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿದ್ದರು. ಮಾರಾಟಕ್ಕಾಗಿ ತರಲಾಗಿದ್ದ ಮೇಕೆಗಳಿಂದ ಮಾರುಕಟ್ಟೆ ಪ್ರದೇಶ ಸಂಪೂರ್ಣ ಗಿಜಿಗುಡುತ್ತಿತ್ತು. ಖರೀದಿದಾರರು ಮೇಕೆಗಳನ್ನು ಪರಿಶೀಲಿಸಿ ಬೆಲೆ ನಿಗದಿಪಡಿಸುತ್ತಿದ್ದ ದೃಶ್ಯ ಕಂಡುಬಂತು.

ಕೆಲಕಾಲ ಸಂಚಾರ ದಟ್ಟಣೆ

ಮಾರುಕಟ್ಟೆಯಲ್ಲಿ ಹೆಚ್ಚಾದ ಜನಸಂದಣಿಯಿಂದ ಮರಿಯಮ್ಮ ದೇವಸ್ಥಾನ ಸುತ್ತಮುತ್ತಲಿನ ರಸ್ತೆಗಳು ಹಾಗೂ ಪಟ್ಟಣದ ಕೆಲವು ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಮೇಕೆಗಳನ್ನು ಸಾಗಿಸಲು ಬಂದ ವಾಹನಗಳು, ದ್ವಿಚಕ್ರ ಹಾಗೂ ನಾಲ್ಕುಚಕ್ರ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿತು.

₹5 ಕೋಟಿಗೂ ಅಧಿಕ ವಹಿವಾಟಿನ ಅಂದಾಜು

ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆಯುವ ಋಷಿಪಂಚಮಿಯ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಖಾನಾಪುರದ ಈ ಮೇಕೆ ಮಾರುಕಟ್ಟೆ ಭರ್ಜರಿಯಾಗಿ ನಡೆಯುತ್ತದೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆಗಳ ಖರೀದಿ–ಮಾರಾಟ ನಡೆದಿದ್ದು, ಸುಮಾರು ₹5 ಕೋಟಿಯಷ್ಟು ವಹಿವಾಟು ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಅಧಿಕೃತ ಅಂಕಿಅಂಶಗಳು ಲಭ್ಯವಾದ ಬಳಿಕ ನಿಖರ ವಹಿವಾಟಿನ ಚಿತ್ರಣ ಸ್ಪಷ್ಟವಾಗಲಿದೆ.

ರೈತರು, ಪಶುಸಂಗೋಪಕರು, ವ್ಯಾಪಾರಿಗಳು ಹಾಗೂ ಖರೀದಿದಾರರ ಭಾರೀ ಉಪಸ್ಥಿತಿಯಿಂದ ಮಧ್ಯಾಹ್ನದ ವೇಳೆಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या