खानापूर

खानापूरमध्ये शिक्षक दिनानिमित्त भव्य रक्तदान शिबिर; नागरिकांचा उत्स्फूर्त प्रतिसाद | ಖಾನಾಪುರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ; ದಾನಿಗಳಿಂದ ಉತ್ಸಾಹಭರಿತ ಸ್ಪಂದನೆ

खानापूर : येत्या 5 सप्टेंबर शिक्षक दिनाचे औचित्य साधून खानापूर तालुक्यातील खानापूर शहर तसेच नंदगड येथील सामुदायिक आरोग्य केंद्रात भव्य रक्तदान शिबिराचे आयोजन करण्यात आले. आमदार विठ्ठल हलगेकर यांच्या उपस्थितीत झालेल्या या शिबिराला कर्मचारी, नागरिक तसेच रक्तदात्यांनी उत्स्फूर्त प्रतिसाद देत रक्तदान केले.

खानापूर शहरातील नगरपंचायतीच्या मंगल कार्यालयात आणि नंदगड सामुदायिक आरोग्य केंद्रात आयोजित या रक्तदान शिबिराचे उद्घाटन आमदार विठ्ठल हलगेकर यांच्या हस्ते करण्यात आले. यावेळी त्यांनी रक्तदात्यांचे कौतुक करून त्यांना प्रोत्साहन दिले.

तालुका आरोग्याधिकारी डॉ. महेश किवडसन्नवर यांनी सांगितले की, नागरिक आणि विद्यार्थ्यांमध्ये रक्तदानाचे महत्त्व पटवून देणे तसेच रक्तदानाबाबत जनजागृती निर्माण करणे हा शिबिराचा मुख्य उद्देश आहे. रक्ताची गरज असलेल्या रुग्णांना वेळेवर रक्त उपलब्ध व्हावे आणि रक्ताअभावी कोणाचाही जीव जाण्याची वेळ येऊ नये, यासाठी नियमित रक्तदानाची गरज असल्याचे त्यांनी स्पष्ट केले.

बेळगावी जिल्हा पंचायत मुख्य कार्यकारी अधिकारी राहुल शिंदे यांच्या मार्गदर्शन व प्रेरणेतून जिल्ह्यात मोठ्या प्रमाणात रक्तदाते नोंदणी करत असून, नॅशनल बुक ऑफ रेकॉर्ड्समधील विक्रम मोडण्याचा विश्वास त्यांनी व्यक्त केला.

रक्तदान हे सामाजिक बांधिलकीचे कार्य असून, अधिकाधिक नागरिकांनी पुढे येऊन रक्तदान करावे, असे आवाहन यावेळी करण्यात आले.


ಖಾನಾಪುರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ; ದಾನಿಗಳಿಂದ ಉತ್ಸಾಹಭರಿತ ಸ್ಪಂದನೆ

ಖಾನಾಪುರ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಖಾನಾಪುರ ತಾಲೂಕಿನಲ್ಲಿ ಖಾನಾಪುರ ಪಟ್ಟಣ ಹಾಗೂ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶಾಸಕ ವಿಠ್ಠಲ ಹಲಗೇಕರ ಅವರ ಉಪಸ್ಥಿತಿಯಲ್ಲಿ ನಡೆದ ಶಿಬಿರದಲ್ಲಿ ನೌಕರರು, ಸಾರ್ವಜನಿಕರು ಹಾಗೂ ರಕ್ತದಾನಿಗಳು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು.

ಖಾನಾಪುರ ಪಟ್ಟಣ ಪಂಚಾಯಿತಿಯ ಮಂಗಲ ಕಾರ್ಯಾಲಯ ಹಾಗೂ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಶಾಸಕ ವಿಠ್ಠಲ ಹಲಗೇಕರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ರಕ್ತದಾನಿಗಳಿಗೆ ಪ್ರೋತ್ಸಾಹ ನೀಡಿ, ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.

ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕಿವಡಸನ್ನವರ ಮಾತನಾಡಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಮತ್ತು ರಕ್ತದಾನದ ಬಗ್ಗೆ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಜಿಲ್ಲೆಯಲ್ಲಿ ಸಾವಿರಾರು ರಕ್ತದಾನಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆಯನ್ನು ಮುರಿಯುವ ವಿಶ್ವಾಸವಿದೆ ಎಂದು ಡಾ. ಮಹೇಶ್ ಕಿವಡಸನ್ನವರ ಹೇಳಿದರು.

ರಕ್ತದ ಕೊರತೆಯಿಂದ ಯಾವುದೇ ರೋಗಿಯ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಲು ನಿರಂತರವಾಗಿ ರಕ್ತದಾನ ನಡೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಈ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या