खानापूर

आयफोनसाठी तरुणाने डोंगरावरून उडी घेतली; वाचवण्यासाठी गेले आई-वडील, तिघांचाही दरीत पडून मृत्यू | ಐಫೋನ್‌ಗಾಗಿ ಯುವಕ ಬೆಟ್ಟದಿಂದ ಜಿಗಿಯಲು ಮುಂದಾದ; ರಕ್ಷಿಸಲು ಹೋದ ತಂದೆ-ತಾಯಿ ಸೇರಿ ಮೂವರೂ ಕಂದಕಕ್ಕೆ ಬಿದ್ದು ಸಾವು

छत्रपती संभाजीनगर : आयफोनचे थकलेले हप्ते, वडिलांसोबतचे सततचे वाद आणि त्यातून निर्माण झालेल्या मानसिक तणावामुळे एका १७ वर्षीय तरुणाने खवड्या डोंगरावरून उडी घेण्याचा प्रयत्न केला. मुलाला वाचवण्यासाठी आई-वडिलांनीही डोंगराच्या कड्यावर धाव घेतली. मात्र, त्याला वाचवण्याच्या प्रयत्नात तिघेही सुमारे १५० ते २०० फूट खोल दरीत कोसळले. या दुर्दैवी घटनेत तिघांचाही मृत्यू झाला.

मृत तरुणाचे नाव कुणाल चांदगुडे असे असून त्याचे वडील मुरलीधर चांदगुडे असल्याचे समोर आले आहे. चांदगुडे कुटुंब मूळचे अंबड तालुक्यातील धनगर पिंपळवाडी येथील असून गेल्या सुमारे १८ वर्षांपासून छत्रपती संभाजीनगर शहरात वास्तव्यास होते. कुणालने नुकताच अकरावीमध्ये प्रवेश घेतला होता. दहावीच्या परीक्षेत त्याने तब्बल ९२ टक्के गुण मिळवले होते. डॉक्टर होण्याचे त्याचे स्वप्न होते.

मिळालेल्या माहितीनुसार, गेल्या काही दिवसांपासून कुणालचे वडिलांसोबत वारंवार वाद होत होते. वडील खर्चासाठी पैसे देत नसल्याची आणि मोबाइलचे हप्ते थकल्याची खंत त्याच्या मनात होती. शुक्रवारी दुपारी तो खवड्या डोंगरावर पोहोचला आणि आत्महत्या करण्याच्या उद्देशाने कड्यावर गेला.

घटनेची माहिती मिळताच पोलिस, स्थानिक नागरिक आणि त्याची आई घटनास्थळी पोहोचले. कुणालला खाली येण्यासाठी आईने जिवाच्या आकांताने विनवणी केली. त्याला समजावताना ती म्हणाली, “मी आताच मंगळसूत्र काढून टाकते, तुझ्या वडिलांना सोडून देते आणि तुझ्यासोबत येते; पण मला सोडून जाऊ नकोस.” मुलाने मात्र आपले आयुष्य संपवण्याचा निर्णय घेतल्याचे सांगत आईला प्रतिसाद दिला.

कुणालने त्याच्याकडील आयफोन, हातातील घड्याळ आणि गळ्यातील चांदीची साखळी काढून खाली फेकली होती. पोलिस आणि स्थानिक नागरिक सुमारे पाऊण तास त्याची समजूत काढण्याचा प्रयत्न करत होते. दरम्यान, त्याचे मन काहीसे बदलत असल्याचे दिसत होते आणि तो शांत झाला होता.

मात्र, कुणालला वाचवण्यासाठी त्याचे वडील पुन्हा डोंगरावर गेले. त्यांनी कुणालला पकडण्याचा प्रयत्न केला. त्यावेळी दोघांचाही तोल गेला आणि ते दरीत कोसळले. त्यानंतर आईनेही त्यांच्यामागे जाण्याचा प्रयत्न केला आणि काही क्षणांत संपूर्ण कुटुंबच दरीत कोसळले.

घटनेच्या वेळी अनेक नागरिक घटनास्थळी उपस्थित होते. एकीकडे पोलिस, मित्र आणि ग्रामस्थ कुणालचा जीव वाचवण्यासाठी प्रयत्न करत होते, तर दुसरीकडे काही जण या घटनेचे सोशल मीडियावर ‘लाइव्ह’ प्रक्षेपण करत होते. या प्रकरणाचा तपास सुरू असल्याचे पोलिस निरीक्षक रामेश्वर गाडे यांनी सांगितले.

गेल्या वर्षीही याच डोंगरावर आला होता कुणाल

पोलिसांच्या माहितीनुसार, कुणाल गेल्या वर्षीही याच डोंगरावर आत्महत्या करण्याच्या उद्देशाने आला होता. त्यावेळी एमआयडीसी वाळूज आणि चिकलठाणा पोलिसांनी त्याची समजूत काढून त्याला सुरक्षितपणे खाली उतरवले होते. मात्र, वर्षभरानंतर त्याने पुन्हा याच डोंगराचा मार्ग धरला.

घरातील लाडका कुत्रा कुटुंबाची वाट पाहत राहिला

चांदगुडे कुटुंब चार महिन्यांपूर्वी देवळाई परिसर सोडून झाल्टा फाटा परिसरातील एकदंतनगर येथे भाड्याच्या घरात राहायला आले होते. तिघांचाही त्यांच्या पाळीव कुत्र्यावर खूप जीव होता. तिघांच्या मृत्यूनंतर घरात एकटाच राहिलेला हा कुत्रा मात्र आपले कुटुंब पुन्हा घरी येईल, या आशेने वाट पाहत राहिला. खिडकीतून रस्त्याकडे नजर लावून बसलेल्या या मुक्या जीवाला पाहून स्थानिक नागरिकांचेही मन हेलावून गेले.

या घटनेमुळे तरुणांमधील वाढता मानसिक ताण, कौटुंबिक मतभेद आणि क्षुल्लक कारणांवरून टोकाचे पाऊल उचलण्याची प्रवृत्ती पुन्हा अधोरेखित झाली आहे.

ಐಫೋನ್‌ಗಾಗಿ ಯುವಕ ಬೆಟ್ಟದಿಂದ ಜಿಗಿಯಲು ಮುಂದಾದ; ರಕ್ಷಿಸಲು ಹೋದ ತಂದೆ-ತಾಯಿ ಸೇರಿ ಮೂವರೂ ಕಂದಕಕ್ಕೆ ಬಿದ್ದು ಸಾವು

ಛತ್ರಪತಿ ಸಂಭಾಜಿನಗರ: ಐಫೋನ್‌ನ ಬಾಕಿ ಕಂತುಗಳು, ತಂದೆಯೊಂದಿಗೆ ನಿರಂತರವಾಗಿದ್ದ ಜಗಳ ಹಾಗೂ ಅದರಿಂದ ಉಂಟಾದ ಮಾನಸಿಕ ಒತ್ತಡದಿಂದಾಗಿ 17 ವರ್ಷದ ಯುವಕನೊಬ್ಬ ಖವಡ್ಯಾ ಬೆಟ್ಟದಿಂದ ಜಿಗಿಯಲು ಮುಂದಾದ ಘಟನೆ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಮಗನನ್ನು ರಕ್ಷಿಸಲು ತಂದೆ-ತಾಯಿ ಬೆಟ್ಟದ ಅಂಚಿಗೆ ಧಾವಿಸಿದರು. ಆದರೆ, ಮಗನನ್ನು ರಕ್ಷಿಸುವ ಪ್ರಯತ್ನದಲ್ಲಿ ಮೂವರೂ ಸುಮಾರು 150ರಿಂದ 200 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಮೃತ ಯುವಕನನ್ನು ಕುಣಾಲ್ ಚಾಂದಗುಡೆ ಎಂದು ಗುರುತಿಸಲಾಗಿದ್ದು, ಅವರ ತಂದೆಯ ಹೆಸರು ಮುರಳೀಧರ್ ಚಾಂದಗುಡೆ ಎಂದು ತಿಳಿದುಬಂದಿದೆ. ಚಾಂದಗುಡೆ ಕುಟುಂಬ ಮೂಲತಃ ಅಂಬಡ್ ತಾಲ್ಲೂಕಿನ ಧನಗರ್ ಪಿಂಪಳವಾಡಿ ಗ್ರಾಮದವರು. ಕಳೆದ ಸುಮಾರು 18 ವರ್ಷಗಳಿಂದ ಅವರು ಛತ್ರಪತಿ ಸಂಭಾಜಿನಗರ ನಗರದಲ್ಲಿ ವಾಸವಾಗಿದ್ದರು. ಕುಣಾಲ್ ಇತ್ತೀಚೆಗಷ್ಟೇ 11ನೇ ತರಗತಿಗೆ ಪ್ರವೇಶ ಪಡೆದಿದ್ದ. 10ನೇ ತರಗತಿ ಪರೀಕ್ಷೆಯಲ್ಲಿ ಆತ ಶೇ.92ರಷ್ಟು ಅಂಕ ಗಳಿಸಿದ್ದ. ವೈದ್ಯನಾಗಬೇಕು ಎಂಬುದು ಆತನ ಕನಸಾಗಿತ್ತು.

ಕಳೆದ ಕೆಲವು ದಿನಗಳಿಂದ ಕುಣಾಲ್ ತನ್ನ ತಂದೆಯೊಂದಿಗೆ ಪದೇಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ತಂದೆ ಖರ್ಚಿಗೆ ಹಣ ನೀಡುತ್ತಿಲ್ಲ ಮತ್ತು ಮೊಬೈಲ್‌ನ ಕಂತುಗಳು ಬಾಕಿಯಾಗಿವೆ ಎಂಬ ಬೇಸರವೂ ಆತನಲ್ಲಿತ್ತು. ಶುಕ್ರವಾರ ಮಧ್ಯಾಹ್ನ ಆತ ಖವಡ್ಯಾ ಬೆಟ್ಟಕ್ಕೆ ತೆರಳಿ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೆಟ್ಟದ ಅಂಚಿಗೆ ಹೋಗಿದ್ದ.

ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಸ್ಥಳೀಯರು ಮತ್ತು ಆತನ ತಾಯಿ ಸ್ಥಳಕ್ಕೆ ಧಾವಿಸಿದರು. ಕೆಳಗೆ ಬರುವಂತೆ ತಾಯಿ ಮಗನಿಗೆ ಕಣ್ಣೀರಿಟ್ಟು ಮನವಿ ಮಾಡಿದರು. ಮಗನನ್ನು ಸಮಾಧಾನಪಡಿಸುವ ವೇಳೆ, “ನಾನು ಈಗಲೇ ಮಂಗಳಸೂತ್ರ ತೆಗೆದುಹಾಕುತ್ತೇನೆ. ನಿನ್ನ ತಂದೆಯನ್ನು ಬಿಟ್ಟುಬಿಡುತ್ತೇನೆ, ನಿನ್ನೊಂದಿಗೆ ಬರುತ್ತೇನೆ; ಆದರೆ ನನ್ನನ್ನು ಬಿಟ್ಟು ಹೋಗಬೇಡ” ಎಂದು ತಾಯಿ ಕಣ್ಣೀರಿನಿಂದ ಬೇಡಿಕೊಂಡರು.

ಆದರೆ ಕುಣಾಲ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆತ ತನ್ನ ಬಳಿಯಿದ್ದ ಐಫೋನ್, ಕೈಗಡಿಯಾರ ಮತ್ತು ಕುತ್ತಿಗೆಯಲ್ಲಿದ್ದ ಬೆಳ್ಳಿಯ ಸರವನ್ನು ತೆಗೆದು ಕೆಳಗೆ ಎಸೆದಿದ್ದ. ಪೊಲೀಸರು ಮತ್ತು ಸ್ಥಳೀಯರು ಸುಮಾರು 45 ನಿಮಿಷಗಳ ಕಾಲ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಕುಣಾಲ್ ಸ್ವಲ್ಪ ಶಾಂತನಾಗಿದ್ದ ಹಾಗೂ ಆತನ ಮನಸ್ಥಿತಿಯಲ್ಲೂ ಬದಲಾವಣೆ ಕಂಡುಬಂದಿತ್ತು ಎನ್ನಲಾಗಿದೆ.

ಆದರೆ, ಮಗನನ್ನು ರಕ್ಷಿಸಲು ಆತನ ತಂದೆ ಮತ್ತೆ ಬೆಟ್ಟದ ಮೇಲಕ್ಕೆ ತೆರಳಿದರು. ಅವರು ಕುಣಾಲ್‌ನನ್ನು ಹಿಡಿಯಲು ಪ್ರಯತ್ನಿಸಿದಾಗ ಇಬ್ಬರಿಗೂ ಆಯತಪ್ಪಿ ಕಂದಕಕ್ಕೆ ಬಿದ್ದರು. ಬಳಿಕ ತಾಯಿಯೂ ಅವರ ಹಿಂದೆ ಹೋಗಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಕುಟುಂಬವೇ ಕಂದಕಕ್ಕೆ ಬಿದ್ದು ಮೃತಪಟ್ಟಿತು.

ಘಟನೆಯ ವೇಳೆ ಸ್ಥಳದಲ್ಲಿ ಸಾಕಷ್ಟು ಜನರು ಸೇರಿದ್ದರು. ಒಂದು ಕಡೆ ಪೊಲೀಸರು, ಸ್ನೇಹಿತರು ಮತ್ತು ಗ್ರಾಮಸ್ಥರು ಕುಣಾಲ್‌ನ ಜೀವ ಉಳಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಲೈವ್’ ಮಾಡುತ್ತಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರಾಮೇಶ್ವರ ಗಾಡೆ ತಿಳಿಸಿದ್ದಾರೆ.

ಕಳೆದ ವರ್ಷವೂ ಇದೇ ಬೆಟ್ಟಕ್ಕೆ ಬಂದಿದ್ದ ಕುಣಾಲ್

ಪೊಲೀಸರ ಮಾಹಿತಿಯ ಪ್ರಕಾರ, ಕುಣಾಲ್ ಕಳೆದ ವರ್ಷವೂ ಇದೇ ಬೆಟ್ಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಂದಿದ್ದ. ಆಗ ಎಂಐಡಿಸಿ ವಾಳುಜ್ ಮತ್ತು ಚಿಖಲಠಾಣಾ ಪೊಲೀಸರು ಆತನನ್ನು ಸಮಾಧಾನಪಡಿಸಿ ಸುರಕ್ಷಿತವಾಗಿ ಕೆಳಗೆ ಕರೆತಂದಿದ್ದರು. ಆದರೆ ಒಂದು ವರ್ಷದ ಬಳಿಕ ಆತ ಮತ್ತೆ ಇದೇ ಬೆಟ್ಟಕ್ಕೆ ಬಂದಿದ್ದಾನೆ. ಆತ ಮನೆಯಿಂದ ಬೆಟ್ಟದವರೆಗೆ ಯಾರೊಂದಿಗೆ ಬಂದಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮನೆಯಲ್ಲಿ ಮುದ್ದಿನ ನಾಯಿಯೊಂದೇ ಉಳಿದುಕೊಂಡಿತು

ಚಾಂದಗುಡೆ ಕುಟುಂಬ ನಾಲ್ಕು ತಿಂಗಳ ಹಿಂದೆ ದೇವಳಾಯಿ ಪ್ರದೇಶವನ್ನು ಬಿಟ್ಟು ಜಾಲ್ಟಾ ಫಾಟಾ ಪ್ರದೇಶದ ಏಕದಂತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಭಿಸಿತ್ತು. ಕುಟುಂಬದ ಮೂವರಿಗೂ ತಮ್ಮ ಸಾಕು ನಾಯಿಯ ಮೇಲೆ ಅಪಾರ ಪ್ರೀತಿ ಇತ್ತು. ಮೂವರ ಸಾವಿನ ಬಳಿಕ ಮನೆಯಲ್ಲಿ ಒಂಟಿಯಾಗಿ ಉಳಿದ ನಾಯಿ ಮಾತ್ರ ತನ್ನ ಕುಟುಂಬ ಮರಳಿ ಮನೆಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಲೇ ಇತ್ತು. ಕಿಟಕಿಯ ಬಳಿ ಕುಳಿತು ರಸ್ತೆಯತ್ತ ನೋಡುತ್ತಿದ್ದ ಆ ಮೂಕ ಪ್ರಾಣಿಯನ್ನು ಕಂಡು ಸ್ಥಳೀಯರ ಮನವೂ ಕರಗಿತು.

ಈ ಘಟನೆ ಯುವಕರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಕೌಟುಂಬಿಕ ಭಿನ್ನಾಭಿಪ್ರಾಯಗಳು ಮತ್ತು ಕ್ಷುಲ್ಲಕ ಕಾರಣಗಳಿಂದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಪಾಯದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या