उद्या खानापूर शांतिनिकेतन शाळेत मखर सजावट स्पर्धा 2026 चा बक्षीस वितरण समारंभ | ಗೃಹ ಮಖರ ಅಲಂಕಾರ ಸ್ಪರ್ಧೆ 2026ರ ಬಹುಮಾನ ವಿತರಣಾ ಸಮಾರಂಭ ನಾಳೆ
खानापूर : गणेशोत्सवानिमित्त खानापूरवार्ता आयोजित व लोकप्रिय आमदार श्री. विठ्ठलराव हलगेकर पुरस्कृत ‘घरगुती मखर सजावट स्पर्धा 2026’ उत्साहात पार पडली. या स्पर्धेला खानापूर तालुक्यातील नागरिकांकडून गावागावातून उत्स्फूर्त प्रतिसाद मिळाला असून 130 हून अधिक कुटुंबांनी सहभाग नोंदविला..
स्पर्धेला ग्रामीण भागातून अपेक्षेपेक्षा मोठा प्रतिसाद मिळाल्याने सहभागी स्पर्धकांची संख्या लक्षात घेऊन स्पर्धेच्या काही नियम व नियोजनात बदल करण्यात आले आहेत. ग्रामीण आणि शहरी भागातील सहभागींची संख्या वेगळी असल्याने त्यानुसार स्पर्धेचे वर्गीकरण व मूल्यांकन प्रक्रिया करण्यात आली आहे.
स्पर्धेतील विजेत्यांची निवड केवळ लाईक, शेअर किंवा व्ह्यूजच्या आधारे करण्यात आलेली नाही. मखर सजावटीची कल्पकता, कलाकुसर, आकर्षकता, पर्यावरणपूरकता, धार्मिक-सांस्कृतिक संदेश आणि एकूण सादरीकरण या विविध बाबींचा विचार करून परीक्षकांकडून मूल्यांकन करण्यात आले.
या स्पर्धेतील विजेत्यांचा बक्षीस वितरण समारंभ उद्या, शनिवार दि. 26 सप्टेंबर रोजी दुपारी 3 वाजता शांतिनिकेतन शाळा, खानापूर येथे आयोजित करण्यात आला आहे.
या कार्यक्रमात विजेत्या स्पर्धकांनाआमदार विठ्ठलराव हलगेकर यांच्या हस्ते बक्षिसे व ट्रॉफी देऊन गौरविण्यात येणार आहे. तसेच स्पर्धेत सहभागी झालेल्या सर्व कुटुंबांच्या आणि स्पर्धकांच्या कलागुणांचे कौतुक करण्यात येणार आहे.
स्पर्धेत सहभागी झालेल्या सर्व कुटुंबांनी व स्पर्धकांनी बक्षिसे स्वीकारण्यासाठी वेळेवर उपस्थित राहावे आणि मोठ्या संख्येने उपस्थित राहून कार्यक्रमाची शोभा वाढवावी, असे आवाहन खानापूरवार्तातर्फे करण्यात आले आहे.
स्थळ : शांतिनिकेतन शाळा, खानापूर
दिनांक : शनिवार, 26 सप्टेंबर 2025
वेळ : दुपारी 3 वाजता
ಗೃಹ ಮಖರ ಅಲಂಕಾರ ಸ್ಪರ್ಧೆ 2026ರ ಬಹುಮಾನ ವಿತರಣಾ ಸಮಾರಂಭ ನಾಳೆ
ಗ್ರಾಮೀಣ ಭಾಗದಿಂದ 110ಕ್ಕೂ ಹೆಚ್ಚು, ನಗರದಿಂದ 15 ಸ್ಪರ್ಧಾರ್ಥಿಗಳ ಭಾಗವಹಿಸುವಿಕೆ
ಖಾನಾಪುರ : ಗಣೇಶೋತ್ಸವದ ಅಂಗವಾಗಿ ಖಾನಾಪುರವಾರ್ತಾ ಆಯೋಜನೆಯಲ್ಲಿ ಹಾಗೂ ಜನಪ್ರಿಯ ಶಾಸಕ ಶ್ರೀ ವಿಠ್ಠಲರಾವ್ ಹಲಗೇಕರ ಅವರ ಪ್ರಾಯೋಜಕತ್ವದಲ್ಲಿ ನಡೆದ ‘ಗೃಹ ಮಖರ ಅಲಂಕಾರ ಸ್ಪರ್ಧೆ 2026’ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ಪರ್ಧೆಗೆ ಖಾನಾಪುರ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದಿಂದ 110ಕ್ಕೂ ಹೆಚ್ಚು ಹಾಗೂ ನಗರ ಪ್ರದೇಶದಿಂದ 15 ಸ್ಪರ್ಧಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಮನೆಗಳಲ್ಲಿ ಗಣಪತಿ ಮೂರ್ತಿಗೆ ಆಕರ್ಷಕ ಮಖರ ಅಲಂಕಾರ ಮಾಡುವ ಕುಟುಂಬಗಳು, ಯುವಕರು ಹಾಗೂ ಗಣೇಶ ಭಕ್ತರ ಕಲಾ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಅತ್ಯುತ್ತಮ ಕಲಾಕೃತಿಗಳಿಗೆ ತಾಲೂಕು ಮಟ್ಟದಲ್ಲಿ ಗುರುತನ್ನು ನೀಡುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿತ್ತು.
ಸ್ಪರ್ಧೆಗೆ ನಿರೀಕ್ಷೆಗಿಂತ ಹೆಚ್ಚಿನ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ, ಭಾಗವಹಿಸಿದ ಸ್ಪರ್ಧಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಸ್ಪರ್ಧೆಯ ಕೆಲವು ನಿಯಮಗಳು ಹಾಗೂ ಸ್ಪರ್ಧೆಯ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಂದ ಭಾಗವಹಿಸಿದ ಸ್ಪರ್ಧಾರ್ಥಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇರುವುದರಿಂದ, ಅದಕ್ಕೆ ಅನುಗುಣವಾಗಿ ವರ್ಗೀಕರಣ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ರೂಪಿಸಲಾಗಿದೆ.
ಸ್ಪರ್ಧೆಯ ವಿಜೇತರನ್ನು ಲೈಕ್, ಶೇರ್ ಅಥವಾ ವೀಕ್ಷಣೆಗಳ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗಿಲ್ಲ. ಮಖರ ಅಲಂಕಾರದ ಸೃಜನಶೀಲತೆ, ಕಲಾತ್ಮಕತೆ, ಆಕರ್ಷಕತೆ, ಪರಿಸರ ಸ್ನೇಹಿ ಅಂಶಗಳು, ಧಾರ್ಮಿಕ-ಸಾಂಸ್ಕೃತಿಕ ಸಂದೇಶ ಹಾಗೂ ಒಟ್ಟಾರೆ ಪ್ರಸ್ತುತಪಡಿಸುವಿಕೆಯಂತಹ ವಿವಿಧ ಅಂಶಗಳನ್ನು ಪರಿಗಣಿಸಿ ತೀರ್ಪುಗಾರರು ಮೌಲ್ಯಮಾಪನ ಮಾಡಿದ್ದಾರೆ.
ಸ್ಪರ್ಧೆಯ ವಿಜೇತರ ಬಹುಮಾನ ವಿತರಣಾ ಸಮಾರಂಭವು ನಾಳೆ, ಶನಿವಾರ ಸೆಪ್ಟೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ಖಾನಾಪುರದ ಶಾಂತಿನಿಕೇತನ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಜೇತ ಸ್ಪರ್ಧಾರ್ಥಿಗಳಿಗೆ ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಟುಂಬಗಳು ಮತ್ತು ಸ್ಪರ್ಧಾರ್ಥಿಗಳ ಕಲಾ ಪ್ರತಿಭೆಯನ್ನು ಅಭಿನಂದಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕುಟುಂಬಗಳು ಹಾಗೂ ಸ್ಪರ್ಧಾರ್ಥಿಗಳು ತಮ್ಮ ಬಹುಮಾನಗಳನ್ನು ಸ್ವೀಕರಿಸಲು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಾಗಿ ಕಾರ್ಯಕ್ರಮದ ಮೆರುಗು ಹೆಚ್ಚಿಸಬೇಕು ಎಂದು ಖಾನಾಪುರವಾರ್ತಾ ವತಿಯಿಂದ ಮನವಿ ಮಾಡಲಾಗಿದೆ.
ಸ್ಥಳ : ಶಾಂತಿನಿಕೇತನ ಶಾಲೆ, ಖಾನಾಪುರ
ದಿನಾಂಕ : ಶನಿವಾರ, ಸೆಪ್ಟೆಂಬರ್ 26, 2026
ಸಮಯ : ಮಧ್ಯಾಹ್ನ 3 ಗಂಟೆ
