खानापूर

व्यसनमुक्ती आणि स्वच्छतेवर भर: स्वातंत्र्यदिन बैठकीत आमदार हलगेकरांचे महत्त्वाचे निर्णय | ವ್ಯಸನಮುಕ್ತಿ ಹಾಗೂ ಸ್ವಚ್ಛತೆಗೆ ಆದ್ಯತೆ: ಸ್ವಾತಂತ್ರ್ಯ ದಿನದ ಸಭೆಯಲ್ಲಿ ಶಾಸಕ ಹಲಗೆಕರ ಪ್ರಮುಖ ನಿರ್ಧಾರಗಳು

खानापूर: 15 ऑगस्टच्या स्वातंत्र्यदिनाच्या पार्श्वभूमीवर खानापूर तहसील कार्यालयात विशेष पूर्वतयारी बैठकीचे आयोजन करण्यात आले होते. तालुकाभरात स्वातंत्र्यदिन अत्यंत उत्साहात, शिस्तबद्ध पद्धतीने आणि सर्वसामान्यांच्या सहभागाने साजरा व्हावा, या उद्देशाने बैठकीत विविध सरकारी विभागांमधील समन्वय आणि आवश्यक तयारीबाबत सविस्तर चर्चा करण्यात आली. या बैठकीला आमदार विठ्ठल हलगेकर, माजी आमदार दिगंबरराव पाटील, विविध सरकारी विभागांचे अधिकारी, पोलीस अधिकारी, स्थानिक सामाजिक संस्थांचे प्रतिनिधी, समाजसेवक व नागरिक मोठ्या संख्येने उपस्थित होते.

बैठकीला संबोधित करताना आमदार विठ्ठल हलगेकर म्हणाले की, स्वातंत्र्यदिन हा आपल्या देशाच्या अभिमानाचे प्रतीक आहे. त्यामुळे तालुक्यातील सर्व शाळा, महाविद्यालये, शासकीय कार्यालये, ग्रामपंचायती, नगरपंचायती व इतर संस्थांमध्ये हा राष्ट्रीय सण अत्यंत उत्साहात साजरा केला गेला पाहिजे. प्रशासन आणि नागरिकांनी एकमेकांच्या सहकार्याने काम करून हा कार्यक्रम यशस्वी करावा, असे आवाहन त्यांनी केले. या बैठकीत विविध सामाजिक आणि विकासात्मक मुद्द्यांवर अत्यंत महत्त्वाचे निर्णय घेण्यात आले.
भूगर्भातील पाण्याची पातळी खालावत असल्याने विद्यार्थ्यांमध्ये जलसाक्षरता वाढवण्यासाठी नगरपंचायत शाळांमध्ये ‘रेन वॉटर हार्वेस्टिंग’वर (पावसाचे पाणी साठवण) आधारित स्पर्धा आयोजित करून विजेत्यांना पारितोषिके देण्याचे ठरले. तसेच, १५ ऑगस्ट ते २६ जानेवारी या कालावधीत निवृत्त झालेल्या माजी सैनिकांचा स्वातंत्र्यदिनी शासकीय पातळीवर सत्कार केला जाईल; यासाठी तलाठी व पीडीओ (PDO) यांच्यामार्फत माहिती गोळा करण्याचे निर्देश देण्यात आले. यासोबतच, एसएसएलसी (SSLC) परीक्षेत राज्यस्तरावर यश मिळवलेल्या विद्यार्थिनीचा आणि १००% निकाल लावणाऱ्या शाळांतील गुणवंत विद्यार्थ्यांचा विशेष सत्कार करण्याचा निर्णय घेण्यात आला.
शासनाच्या २० दिवसांच्या व्यसनमुक्ती अभियानांतर्गत शाळा, महाविद्यालये आणि बसस्थानकांभोवती तंबाखू, गुटखा व इतर अंमली पदार्थांच्या बेकायदेशीर विक्रीवर तातडीने बंदी घालण्याचे निर्देश पोलीस प्रशासनाला देण्यात आले. स्वातंत्र्यदिनाचे औचित्य साधून शहरातील मुख्य रस्ते, गटारे आणि कचरा संकलन केंद्रांची विशेष स्वच्छता करून “स्वच्छ व सुंदर खानापूर” अभियान प्रभावीपणे राबवण्याचे ठरले. तसेच, रस्त्यांवरील अस्ताव्यस्त पार्किंगवर कडक कारवाई करून वाहतूक कोंडीमुक्त शिस्त आणण्याचे आदेश देण्यात आले.
विद्यार्थ्यांमध्ये स्वातंत्र्यलढा, देशभक्तांचे योगदान आणि राष्ट्रीय मूल्यांबद्दल जनजागृती करण्यासाठी स्वातंत्र्यदिनाच्या कार्यक्रमात वक्त्यांना ५ ते १० मिनिटांचे व्याख्यान देण्याची संधी उपलब्ध करून देण्याचा सल्ला देण्यात आला. रस्ते व इतर विकासकामामांमुळे नागरिकांना होणारा त्रास कमी करण्यासाठी संबंधित विभागांनी तातडीने तात्पुरत्या उपाययोजना कराव्यात, असे स्पष्ट करण्यात आले. बैठकीच्या शेवटी, सर्व विभागांनी आपापसांत उत्तम समन्वय राखून १५ ऑगस्टचा स्वातंत्र्यदिन अत्यंत उत्साहात आणि शिस्तबद्धतेने साजरा करण्याचा संकल्प करत बैठकीची सांगता करण्यात आली.

ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿ ಸಿದ್ಧತೆಗೆ ಶಾಸಕ ವಿಠ್ಠಲ ಹಲಗೆಕರ ಕರೆ: ಖಾನಾಪುರದಲ್ಲಿ ಪೂರ್ವಭಾವಿ ಸಭೆ ಸಂಪನ್ನ
ಖಾನಾಪುರ: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ತಾಲೂಕಾದ್ಯಂತ ಸ್ವಾತಂತ್ರ್ಯ ದಿನವನ್ನು ಅತ್ಯಂತ ಉತ್ಸಾಹ, ಶಿಸ್ತು ಹಾಗೂ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಆಚರಿಸುವ ಉದ್ದೇಶದಿಂದ ಅಗತ್ಯ ಸಿದ್ಧತೆಗಳು, ವಿವಿಧ ಇಲಾಖೆಗಳ ನಡುವಿನ ಸಮನ್ವಯ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಶಾಸಕ ವಿಠ್ಠಲ ಹಲಗೆಕರ, ಮಾಜಿ ಶಾಸಕ ದಿಗಂಬರರಾವ್ ಪಾಟೀಲ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೆಕರ ಅವರು, ಸ್ವಾತಂತ್ರ್ಯ ದಿನವು ದೇಶದ ಗೌರವದ ಸಂಕೇತವಾಗಿದ್ದು, ತಾಲೂಕಿನ ಎಲ್ಲಾ ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು, ನಗರ ಪಂಚಾಯಿತಿ ಹಾಗೂ ವಿವಿಧ ಸಂಸ್ಥೆಗಳಲ್ಲಿ ಈ ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿದರು. ಆಡಳಿತ ಮತ್ತು ಸಾರ್ವಜನಿಕರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು. ಈ ಸಭೆಯಲ್ಲಿ ತಾಲೂಕಿನ ಪ್ರಮುಖ ಸಾಮಾಜಿಕ ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಲಸಾಕ್ಷರತೆ ಬೆಳೆಸಲು ನಗರ ಪಂಚಾಯಿತಿ ಶಾಲೆಗಳಲ್ಲಿ ‘ರೇನ್ ಹಾರ್ವೆಸ್ಟಿಂಗ್’ ಕುರಿತು ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲು ತೀರ್ಮಾನಿಸಲಾಯಿತು. ಹಾಗೆಯೇ ಆಗಸ್ಟ್ 15ರಿಂದ ಜನವರಿ 26ರ ಅವಧಿಯಲ್ಲಿ ನಿವೃತ್ತರಾದ ಮಾಜಿ ಸೈನಿಕರನ್ನು ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರದ ವತಿಯಿಂದ ಸನ್ಮಾನಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು (ತಲಾಟಿ) ಹಾಗೂ ಪಿಡಿಒಗಳ ಮೂಲಕ ಮಾಹಿತಿ ಸಂಗ್ರಹಿಸಲು ಸೂಚಿಸಲಾಯಿತು. ಜೊತೆಗೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಹಾಗೂ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲು ತೀರ್ಮಾನಿಸಲಾಯಿತು.
ಸರ್ಕಾರದ 20 ದಿನಗಳ ವ್ಯಸನಮುಕ್ತ ಅಭಿಯಾನದ ಭಾಗವಾಗಿ ಶಾಲೆ, ಕಾಲೇಜು ಹಾಗೂ ಬಸ್ ನಿಲ್ದಾಣಗಳ ಸುತ್ತಮುತ್ತ ತಂಬಾಕು, ಗುಟ್ಕಾ ಮತ್ತು ಮಾದಕ ವಸ್ತುಗಳ ಅಕ್ರಮ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಯಿತು. ಸ್ವಾತಂತ್ರ್ಯ ದಿನದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆ, ಚರಂಡಿ ಹಾಗೂ ಕಸ ಸಂಗ್ರಹ ಕೇಂದ್ರಗಳನ್ನು ವಿಶೇಷವಾಗಿ ಸ್ವಚ್ಛಗೊಳಿಸಿ “ಸ್ವಚ್ಛ ಮತ್ತು ಸುಂದರ ಖಾನಾಪುರ” ಅಭಿಯಾನವನ್ನು ಜಾರಿಗೊಳಿಸಲು ತೀರ್ಮಾನಿಸಲಾಯಿತು. ಜೊತೆಗೆ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಅಸ್ತವ್ಯಸ್ತ ವಾಹನ ನಿಲುಗಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ರಾಷ್ಟ್ರೀಯ ಮೌಲ್ಯಗಳ ಕುರಿತು ಅರಿವು ಮೂಡಿಸಲು ಗಣ್ಯರಿಗೆ 5 ರಿಂದ 10 ನಿಮಿಷಗಳ ಕಾಲ ಉಪನ್ಯಾಸ ನೀಡಲು ಅವಕಾಶ ಕಲ್ಪಿಸುವಂತೆ ಸಲಹೆ ನೀಡಲಾಯಿತು. ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಕಡಿಮೆ ಮಾಡಲು ಸಂಬಂಧಿಸಿದ ಇಲಾಖೆಗಳು ತಕ್ಷಣ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಲಾಯಿತು. ಅಂತಿಮವಾಗಿ, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಖಾನಾಪುರ ತಾಲೂಕಿನಲ್ಲಿ ಸ್ಮರಣೀಯವಾಗಿ ಆಚರಿಸುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯಗೊಂಡಿತು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या