तिओली येथे रस्त्यात पडलेल्या विद्युत तारेशी स्पर्श होऊन गाईचा मृत्यू, ग्रामस्थांत संताप
खानापूर: तालुक्यातील तिओली येथे आज, 3 एप्रिल रोजी सकाळी 10 च्या सुमारास विजेच्या तारेच्या स्पर्शाने एका गाईचा मृत्यू झाला. शेतकरी शिवाजी हेब्बाळकर यांनी गायीला चारण्यासाठी सोडले असता, गाय तिओली-गूंजी रस्त्यालगत पडलेल्या विद्युत प्रवाहित तारेशी संपर्कात आली आणि जागीच मृत्युमुखी पडली.

ही तार HESCOM च्या बेजबाबदार पणामुळे जमिनीवर पडली होती. त्यामुळे रस्त्यावरून ये-जा करणाऱ्या नागरिकांनाही धोका निर्माण झाला होता.
या दुर्घटनेत शिवाजी हेब्बाळकर यांचे अंदाजे 30 हजार रुपयांचे नुकसान झाले असून, त्यांनी HESCOM वीज विभागाकडे नुकसानभरपाईची मागणी केली आहे.
गावकऱ्यांनी या घटनेवर तीव्र संताप व्यक्त केला असून, वीज खात्याने तातडीने योग्य उपाययोजना कराव्यात, अशी मागणी केली आहे. विद्युत तारा आणि इतर पायाभूत सुविधा वेळोवेळी तपासल्या जात नसल्याने अशा घटना घडत असल्याचे नागरिकांचे म्हणणे आहे.
ತಿವೋಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಾಗಿ ಹಸು ಮೃತಪಟ್ಟ ಘಟನೆ – ರೈತರ ಆಕ್ರೋಶ
ಖಾನಾಪುರ ತಾಲ್ಲೂಕಿನ ತಿವೋಲಿ ಗ್ರಾಮದಲ್ಲಿ ಎಪ್ರಿಲ್ 3ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿದ್ಯುತ್ ತಂತಿಯ ಸ್ಪರ್ಶದಿಂದ ಒಂದು ಹಸು ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಶಿವಾಜಿ ಹೆಬ್ಬಾಳಕರ ಅವರು ತಮ್ಮ ಹಸುವನ್ನು ಮೇಯಿಸಲು ಬಿಟ್ಟಿದ್ದರು. ಆದರೆ, ತಿಯೋಳಿ-ಗುಂಜಿ ರಸ್ತೆಯ ಬಳಿ HESCOM ವಿದ್ಯುತ್ ಕಂಬದಿಂದ ತಂತಿ ತುಂಡಾಗಿ ಬಿದ್ದು, ಅದು ವಿದ್ಯುತ್ ಪ್ರವಹಿಸುತ್ತಿತ್ತು. ಅದಕ್ಕೆ ಸ್ಪರ್ಶವಾದ ಹಸು ಸ್ಥಳದಲ್ಲಿಯೇ ಮೃತಪಟ್ಟಿದೆ.
ಈ ಅವಘಡದಿಂದ ಶಿವಾಜಿ ಹೆಬ್ಬಾಳಕರ ಅವರಿಗೆ ಸುಮಾರು ₹30,000 ನಷ್ಟ ಉಂಟಾಗಿದೆ. ಇದಕ್ಕಾಗಿ ಅವರು HESCOM ವಿದ್ಯುತ್ ಇಲಾಖೆಯು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಘಟನೆಯಿಂದ ಗ್ರಾಮಸ್ಥರು ಕೋಪಗೊಂಡಿದ್ದು, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸುತ್ತಿದ್ದಾರೆ. ವಿದ್ಯುತ್ ತಂತಿಗಳು ಮತ್ತು ಮೂಲಸೌಕರ್ಯಗಳ ನಿಯಮಿತ ಪರಿಶೀಲನೆ ಇಲ್ಲದೆ ಇದಂಥ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಇಲಾಖೆಯು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.