कर्नाटक एसएसएलसी निकाल 2026 घोषित: विक्रमी 94.1% निकाल; किनारपट्टीवरील जिल्ह्यांची बाजी! | ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2026 ಪ್ರಕಟ: ದಾಖಲೆಯ 94.1% ಫಲಿತಾಂಶ; ಕರಾವಳಿ ಜಿಲ್ಲೆಗಳೇ ಫಸ್ಟ್!
बेंगळुरू: कर्नाटक शालेय परीक्षा आणि मूल्यमापन मंडळाने (KSEAB) आज (23 एप्रिल 2026) दहावीचा निकाल जाहीर केला आहे. राज्याचे शिक्षण मंत्री मधू बंगारप्पा यांनी पत्रकार परिषदेत माहिती दिली की, यावर्षी राज्यात एकूण 94.1% विद्यार्थी उत्तीर्ण झाले आहेत. गेल्या वर्षीच्या 80.04% निकालाच्या तुलनेत यंदा निकालात सुमारे 14% ची लक्षणीय वाढ झाली आहे.
निकालाची ठळक वैशिष्ट्ये:
- टॉकर्सची यादी: यावर्षी एकूण 7 विद्यार्थ्यांनी 625 पैकी 625 गुण मिळवून राज्यात प्रथम क्रमांक पटकावला आहे.
- मुलींची सरशी: दरवर्षीप्रमाणे यंदाही मुलींनीच बाजी मारली असून मुलींचा निकाल 96.18% लागला आहे, तर मुलांचा निकाल 91.94% इतका आहे.
- जिल्हानिहाय कामगिरी: दक्षिण कन्नड जिल्हा 98.4% निकालासह राज्यात पहिल्या क्रमांकावर आहे. उडुपी (98.18%) दुसऱ्या आणि उत्तर कन्नड (98.09%) तिसऱ्या क्रमांकावर आहे.
- ग्रामीण भागाची झेप: शहरी भागातील (93.20%) विद्यार्थ्यांच्या तुलनेत ग्रामीण भागातील (94.80%) विद्यार्थ्यांनी चांगली कामगिरी केली आहे.
बेळगाव आणि जिल्ह्यांची क्रमवारी:
बेळगाव जिल्ह्याने 94.75% निकालासह राज्यात 18 वा क्रमांक पटकावला आहे. शैक्षणिक जिल्हा चिकोडी 94.09% निकालासह 23 व्या स्थानावर आहे. विशेष म्हणजे, चिकोडीच्या अथणी तालुक्यातील ‘प्रार्थना’ या विद्यार्थिनीने 625 पैकी 625 गुण मिळवून राज्यातील टॉपर्समध्ये स्थान मिळवले आहे.
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2026 ಪ್ರಕಟ: ದಾಖಲೆಯ 94.1% ಫಲಿತಾಂಶ; ಕರಾವಳಿ ಜಿಲ್ಲೆಗಳೇ ಫಸ್ಟ್!
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಇಂದು (ಏಪ್ರಿಲ್ 23, 2026) ಹತ್ತನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಬಾರಿ ರಾಜ್ಯದಲ್ಲಿ ಒಟ್ಟು 94.1% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು. ಇದು ಕಳೆದ ವರ್ಷದ 80.04% ಫಲಿತಾಂಶಕ್ಕೆ ಹೋಲಿಸಿದರೆ ಸುಮಾರು 14% ರಷ್ಟು ಗಣನೀಯ ಏರಿಕೆಯಾಗಿದೆ.
ಫಲಿತಾಂಶದ ಪ್ರಮುಖ ಅಂಶಗಳು:
- ಟಾಪರ್ಸ್ ಪಟ್ಟಿ: ಈ ಬಾರಿ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
- ಹುಡುಗಿಯರದೇ ಮೇಲುಗೈ: ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 96.18% ರಷ್ಟು ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಬಾಲಕರ ಫಲಿತಾಂಶ 91.94% ದಾಖಲಾಗಿದೆ.
- ಜಿಲ್ಲಾವಾರು ಸಾಧನೆ: ದಕ್ಷಿಣ ಕನ್ನಡ ಜಿಲ್ಲೆಯು 98.4% ಫಲಿತಾಂಶದೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದರೆ, ಉಡುಪಿ (98.18%) ಎರಡನೇ ಹಾಗೂ ಉತ್ತರ ಕನ್ನಡ (98.09%) ಮೂರನೇ ಸ್ಥಾನ ಪಡೆದುಕೊಂಡಿವೆ.
- ಗ್ರಾಮೀಣ ಭಾಗದ ಸಾಧನೆ: ನಗರ ಪ್ರದೇಶದ (93.20%) ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ (94.80%) ವಿದ್ಯಾರ್ಥಿಗಳೇ ಉತ್ತಮ ಫಲಿತಾಂಶ ತೋರಿದ್ದಾರೆ.
ಬೆಳಗಾವಿ ಮತ್ತು ಜಿಲ್ಲಾವಾರು ರ್ಯಾಂಕಿಂಗ್:
ಬೆಳಗಾವಿ ಜಿಲ್ಲೆಯು 94.75% ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 18ನೇ ಸ್ಥಾನ ಪಡೆದಿದೆ. ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿಯು 94.09% ರೊಂದಿಗೆ 23ನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಚಿಕ್ಕೋಡಿಯ ಅಥಣಿ ತಾಲೂಕಿನ ‘ಪ್ರಾರ್ಥನಾ’ ಎಂಬ ವಿದ್ಯಾರ್ಥಿನಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ.
