खानापूरची दिव्या देसाई राज्यात दुसरी; 10 वी परीक्षेत 99.94% गुणांसह मिळवले दैदिप्यमान यश! | ಖಾನಾಪುರದ ದಿವ್ಯಾ ದೇಸಾಯಿಗೆ ರಾಜ್ಯಕ್ಕೆ ಎರಡನೇ ರ್ಯಾಂಕ್: 99.94% ಅಂಕಗಳೊಂದಿಗೆ ಐತಿಹಾಸಿಕ ಸಾಧನೆ!
खानापूर: कर्नाटक शालांत परीक्षा मंडळाने (SSLC) आज दहावीचा निकाल जाहीर केला असून, यामध्ये बेळगाव जिल्ह्यासह खानापूर तालुक्याचे नाव सुवर्ण अक्षरात कोरले गेले आहे. खानापूर तालुक्यातील झुंजवाड (के.एन.) येथील दिव्या प्रदीप देसाई या विद्यार्थिनीने 625 पैकी 624 गुण ( 99.94% ) मिळवून कर्नाटक राज्यात द्वितीय क्रमांक पटकावला आहे.
शेतकरी कुटुंबातील कन्या ठरली ‘गुणवंत’
दिव्या ही एका सामान्य शेतकरी कुटुंबातील मुलगी आहे. तिचे वडील प्रदीप देसाई हे कर्नाटक विकास ग्रामीण बँकेत (नंदगड) पिग्मी कलेक्टर म्हणून कार्यरत आहेत, तर आई कसबा नंदगड ग्रामपंचायतीच्या माजी अध्यक्षा आहेत. दिव्याचे आजोबा स्वर्गीय जे. बी. देसाई हे निवृत्त मुख्याध्यापक होते. घरातूनच शिक्षणाचा वारसा लाभलेल्या दिव्याने आपल्या यशाने कुटुंबाच्या शिरपेचात मानाचा तुरा रोवला आहे.
होली क्रॉस शाळेचे नाव उज्ज्वल
दिव्या ही बिडी येथील ‘होली क्रॉस इंग्रजी माध्यमिक शाळेची’ विद्यार्थिनी आहे. शाळेच्या मुख्याध्यापकांनी तिचे कौतुक करताना सांगितले की, दिव्या सुरुवातीपासूनच अभ्यासात अत्यंत हुशार आणि शिस्तप्रिय आहे. केवळ दिव्याच नव्हे, तर याच शाळेची अनुष्का रघुनाथ देसाई (621 गुण) ही तालुक्यात दुसरी आली आहे.
खानापूर तालुक्याचा निकाल व ‘टॉप टेन’ विद्यार्थी
यंदा खानापूर तालुक्याचा निकाल 95.94% लागला असून मागील वर्षाच्या तुलनेत निकालात १० टक्क्यांची वाढ झाली आहे. तालुक्यातील इतर यशस्वी विद्यार्थी पुढीलप्रमाणे:
१. दिव्या देसाई: ६२४ गुण (राज्यात दुसरी)
२. अनुष्का देसाई: ६२१ गुण
३. स्पंदना कोडचवाड: ६२० गुण (संगोळी रायण्णा शाळा, नंदगड)
४. स्फूर्ती अक्की: ६१९ गुण
५. अर्पणा चौलगी, प्रज्ञा काद्रोळी, साक्षी हल्लूर: प्रत्येकी ६१८ गुण
दिव्या देसाईच्या या अभूतपूर्व यशाबद्दल संपूर्ण खानापूर तालुक्यातून तिच्यावर अभिनंदनाचा वर्षाव होत आहे. एका ग्रामीण भागातील मुलीने राज्यातून दुसरा क्रमांक मिळवल्याने ग्रामीण भागातील विद्यार्थ्यांसाठी ती प्रेरणास्थान ठरली आहे.
ಖಾನಾಪುರದ ದಿವ್ಯಾ ದೇಸಾಯಿಗೆ ರಾಜ್ಯಕ್ಕೆ ಎರಡನೇ ರ್ಯಾಂಕ್: 99.94% ಅಂಕಗಳೊಂದಿಗೆ ಐತಿಹಾಸಿಕ ಸಾಧನೆ!
ಖಾನಾಪುರ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು ಪ್ರಕಟಿಸಿದ ಎಸ್ಎಸ್ಎಲ್ಸಿ (SSLC) ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೀರ್ತಿ ರಾಜ್ಯಮಟ್ಟದಲ್ಲಿ ರಾರಾಜಿಸಿದೆ. ತಾಲೂಕಿನ ಜುಂಜ್ವಾಡ (ಕೆ.ಎನ್) ಗ್ರಾಮದ ದಿವ್ಯಾ ಪ್ರದೀಪ್ ದೇಸಾಯಿ 625ಕ್ಕೆ 624 ಅಂಕಗಳನ್ನು (ಶೇ. 99.94) ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ.
ರೈತ ಕುಟುಂಬದ ಪ್ರತಿಭಾನ್ವಿತೆ
ದಿವ್ಯಾ ಅತ್ಯಂತ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದವಳು. ತಂದೆ ಪ್ರದೀಪ್ ದೇಸಾಯಿ ಅವರು ನಂದಗಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಕಸ್ಬಾ ನಂದಗಡ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆಯಾಗಿದ್ದಾರೆ. ದಿವ್ಯಾ ಅವರ ಅಜ್ಜ ದಿವಂಗತ ಜೆ. ಬಿ. ದೇಸಾಯಿ ಅವರು ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರು. ಶೈಕ್ಷಣಿಕ ವಾತಾವರಣವಿರುವ ಕುಟುಂಬದ ಬೆಂಬಲದೊಂದಿಗೆ ದಿವ್ಯಾ ಈ ಸಾಧನೆ ಮಾಡಿದ್ದಾಳೆ.
ವಿಷಯವಾರು ಅಂಕಗಳ ವಿವರ
ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ ದಿವ್ಯಾ ಮರಾಠಿ ಭಾಷಿಕಳಾಗಿದ್ದು, ಎಲ್ಲಾ ವಿಷಯಗಳಲ್ಲಿಯೂ ಅದ್ಭುತ ಸಾಧನೆ ಮಾಡಿದ್ದಾಳೆ:
- ಇಂಗ್ಲಿಷ್: 124/125
- ಕನ್ನಡ, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ: ತಲಾ 100ಕ್ಕೆ 100 ಅಂಕಗಳು
ಹೋಲಿ ಕ್ರಾಸ್ ಶಾಲೆಯ ಮುಕುಟಕ್ಕೆ ಮತ್ತೊಂದು ಗರಿ
ಬೀಡಿಯ ‘ಹೋಲಿ ಕ್ರಾಸ್ ಇಂಗ್ಲಿಷ್ ಮಾಧ್ಯಮ ಶಾಲೆ’ಯ ವಿದ್ಯಾರ್ಥಿನಿಯಾದ ದಿವ್ಯಾ, ಮೊದಲಿನಿಂದಲೂ ಅಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದಳು. ದಿವ್ಯಾ ಮಾತ್ರವಲ್ಲದೆ, ಇದೇ ಶಾಲೆಯ ಅನುಷ್ಕಾ ರಘುನಾಥ ದೇಸಾಯಿ (621 ಅಂಕ) ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಖಾನಾಪುರ ತಾಲೂಕಿನ ಟಾಪ್ ಟೆನ್ ಸಾಧಕರು
ಈ ವರ್ಷ ಖಾನಾಪುರ ತಾಲೂಕು ಒಟ್ಟಾರೆ ಶೇ. 95.94 ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷಕ್ಕಿಂತ ಶೇ. 10 ರಷ್ಟು ಸುಧಾರಣೆ ಕಂಡಿದೆ. ತಾಲೂಕಿನ ಅಗ್ರಗಣ್ಯ ಸಾಧಕರು:
- ದಿವ್ಯಾ ದೇಸಾಯಿ: 624 ಅಂಕ (ರಾಜ್ಯಕ್ಕೆ ದ್ವಿತೀಯ)
- ಅನುಷ್ಕಾ ದೇಸಾಯಿ: 621 ಅಂಕ
- ಸ್ಪಂದನ ಕೊಡಚವಾಡ: 620 ಅಂಕ (ಸಂಗೊಳ್ಳಿ ರಾಯಣ್ಣ ಶಾಲೆ, ನಂದಗಡ)
- ಸ್ಪೂರ್ತಿ ಅಕ್ಕಿ: 619 ಅಂಕ
- ಅಪರ್ಣಾ ಚೌಲಗಿ, ಪ್ರಜ್ಞಾ ಕಾದ್ರೋಳಿ, ಸಾಕ್ಷಿ ಹಳ್ಳೂರು: ತಲಾ 618 ಅಂಕ
ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವುದಕ್ಕೆ ಖಾನಾಪುರ ತಾಲೂಕಿನಾದ್ಯಂತ ಸಾರ್ವಜನಿಕರಿಂದ ಮತ್ತು ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
