खानापूर

बिदरभावी महालक्ष्मी जत्रेची पूर्वतयारी सभा; आमदार हलगेकर यांच्या हस्ते रस्त्याचे भूमिपूजन | ಬಿದರಭಾವಿ ಮಹಾಲಕ್ಷ್ಮೀ ಜಾತ್ರೆಯ ಪೂರ್ವಭಾವಿ ಸಭೆ; ಶಾಸಕ ಹಲಗೇಕರ್ ಅವರಿಂದ ರಸ್ತೆ ಭೂಮಿಪೂಜೆ

बिदरभावी: पुढील वर्षी (२०२७) मे महिन्यात होणाऱ्या श्री महालक्ष्मी जत्रेच्या पार्श्वभूमीवर गावातील मराठी शाळेत पूर्वतयारी सभा झाली. अध्यक्षस्थानी आमदार विठ्ठलराव हलगेकर होते. तालुका पंचायत अधिकारी रमेश मेस्त्री, जत्रा कमिटीचे अध्यक्ष व सदस्य, पंच कमिटी आणि ग्रामस्थ मोठ्या संख्येने उपस्थित होते. या वेळी आमदारांच्या हस्ते गावातील नूतन रस्त्याचे भूमिपूजन झाले. त्यांनी प्रत्येक गल्लीत जाऊन रस्त्यांची पाहणी केली आणि ग्रामस्थांच्या समस्या जाणून घेतल्या.

मार्गदर्शन करताना आमदार हलगेकर म्हणाले की, जत्रेच्या चार ते सहा महिने आधी अशा सभा घेतल्यास शासकीय कामे वेळेत आणि दर्जेदार पूर्ण होतात. देवलत्ती ते बिदरभावी डांबरी रस्त्याचे काम हाती घेतले असून तो पूर्ण झाल्यावर बेळगावसाठी थेट बससेवा सुरू होण्यास मदत होईल. पारिश्वाड ते बिदरभावी रस्ताही प्राधान्याने पूर्ण केला जाईल. पूर्वी पावसाळ्यात बिदरभावी आणि तोपीनकट्टीचा संपर्क तुटायचा, पण आता रस्ते जोडले गेले आहेत, असेही ते म्हणाले.

मलप्रभा नदीतून १३६ खेड्यांना पाणी देणाऱ्या ५०० कोटींच्या बहुग्राम योजनेचे काम अंतिम टप्प्यात असून पुढील महिन्यात चाचणी होऊन मार्चपर्यंत उद्घाटन होईल, ज्यामुळे बिदरभावीचा पाणीप्रश्न कायमचा सुटेल, असे त्यांनी सांगितले. तोपर्यंत जत्रेसाठी तातडीने नवीन बोअरवेल मारण्याच्या सूचना त्यांनी दिल्या. जत्रेच्या काळात वाढणारा वीजभार लक्षात घेता महावितरणला निवेदन देऊन जादा क्षमतेचे ट्रान्सफॉर्मर बसवले जातील आणि जुने खांब बदलले जातील. नरेगा योजनेतून गावातील कामे करून निधीचा योग्य वापर करण्याचे आवाहनही त्यांनी केले.

जत्रा केवळ उत्सवापुरती मर्यादित न राहता गावाचा विकास आणि ग्रामस्थांची एकजूट वाढवणारी ठरावी, असे सांगत मंदिर रंगरंगोटी व इतर कामांसाठी वैयक्तिक आर्थिक मदत करण्याचे आश्वासन आमदारांनी दिले.

ग्रामस्थ आणि जत्रा उत्सव समितीच्या वतीने आमदारांना निवेदन देण्यात आले. त्यात देवलत्ती–बिदरभावी व पारिश्वाड–बिदरभावी रस्ते तयार करणे, तोपीनकट्टी–बिदरभावी दरम्यानच्या खराब पुलाची दुरुस्ती, अंकलगी रोडवरील २०० फूट कच्चा रस्ता पूर्ण करून पथदिवे बसवणे, गावाभोवतालच्या चक्कर लाईनचे सी.सी. काम व रुंदीकरण, तसेच जुने सी.सी. व शेतवडीतील रस्ते करणे या मागण्या आहेत. मंदिर सुधारणेअंतर्गत लक्ष्मी मंदिर दुरुस्ती व सुशोभीकरण, मारुती मंदिर व विठ्ठल-रखुमाई मंदिराच्या कळसाचे काम, तसेच जैमकोट रोडवरील स्थळ देव व कलमेश्वर मंदिराकडे जाणारे प्रत्येकी २०० फूट रस्ते करण्याची मागणी केली आहे. याशिवाय नियमित व मुबलक पाणीपुरवठा, जुने वीज खांब व लोंबकळणाऱ्या तारांची दुरुस्ती, नवीन घरांना वीजजोडणी, गटारे व सांडपाणी व्यवस्थापन आणि गावाच्या प्रवेशद्वारावर कमान उभारण्याची मागणीही करण्यात आली.


ಕನ್ನಡ

ಬಿದರಭಾವಿ ಮಹಾಲಕ್ಷ್ಮೀ ಜಾತ್ರೆಯ ಪೂರ್ವಭಾವಿ ಸಭೆ; ಶಾಸಕ ಹಲಗೇಕರ್ ಅವರಿಂದ ರಸ್ತೆ ಭೂಮಿಪೂಜೆ

ಬಿದರಭಾವಿ: ಮುಂದಿನ ವರ್ಷ (೨೦೨೭) ಮೇ ತಿಂಗಳಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮೀ ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದ ಮರಾಠಿ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶಾಸಕ ವಿಠ್ಠಲರಾವ್ ಹಲಗೇಕರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧಿಕಾರಿ ರಮೇಶ ಮೇಸ್ತ್ರಿ, ಜಾತ್ರಾ ಸಮಿತಿ ಅಧ್ಯಕ್ಷರು, ಸದಸ್ಯರು, ಪಂಚ ಸಮಿತಿ ಹಾಗೂ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಶಾಸಕರು ಗ್ರಾಮದ ನೂತನ ರಸ್ತೆಗೆ ಭೂಮಿಪೂಜೆ ನೆರವೇರಿಸಿದರು. ಪ್ರತಿ ಗಲ್ಲಿಗೂ ಭೇಟಿ ನೀಡಿ ರಸ್ತೆಗಳನ್ನು ಪರಿಶೀಲಿಸಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಮಾರ್ಗದರ್ಶನ ನೀಡಿದ ಶಾಸಕ ಹಲಗೇಕರ್, ಜಾತ್ರೆಗೆ ನಾಲ್ಕರಿಂದ ಆರು ತಿಂಗಳ ಮೊದಲೇ ಇಂತಹ ಸಭೆ ನಡೆಸಿದರೆ ಸರ್ಕಾರಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಗುಣಮಟ್ಟದಿಂದ ಪೂರ್ಣಗೊಳಿಸಬಹುದು ಎಂದರು. ದೇವಲತ್ತಿ–ಬಿದರಭಾವಿ ಡಾಂಬರ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪೂರ್ಣಗೊಂಡ ನಂತರ ಬೆಳಗಾವಿಗೆ ನೇರ ಬಸ್ ಸೇವೆ ಆರಂಭಕ್ಕೆ ಸಹಕಾರಿಯಾಗಲಿದೆ. ಪಾರಿಶ್ವಾಡ–ಬಿದರಭಾವಿ ರಸ್ತೆಯನ್ನೂ ಆದ್ಯತೆಯ ಮೇಲೆ ಪೂರ್ಣಗೊಳಿಸಲಾಗುವುದು. ಮಳೆಗಾಲದಲ್ಲಿ ಕೆಸರಿನಿಂದ ಬಿದರಭಾವಿ ಮತ್ತು ತೋಪಿನಕಟ್ಟಿ ಸಂಪರ್ಕ ಕಡಿತವಾಗುತ್ತಿತ್ತು; ಈಗ ರಸ್ತೆಗಳನ್ನು ಜೋಡಿಸಲಾಗಿದೆ ಎಂದು ಅವರು ಹೇಳಿದರು.

ಮಲಪ್ರಭಾ ನದಿಯಿಂದ ೧೩೬ ಹಳ್ಳಿಗಳಿಗೆ ನೀರು ಪೂರೈಸುವ ₹೫೦೦ ಕೋಟಿ ಮೊತ್ತದ ಬಹುಗ್ರಾಮ ಯೋಜನೆ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಪ್ರಾಯೋಗಿಕ ಪರೀಕ್ಷೆ ನಡೆದು ಮಾರ್ಚ್ ವೇಳೆಗೆ ಉದ್ಘಾಟನೆಯಾಗಲಿದೆ; ಇದರಿಂದ ಬಿದರಭಾವಿಯ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದರು. ಅಲ್ಲಿಯವರೆಗೆ ಜಾತ್ರೆಗಾಗಿ ತುರ್ತಾಗಿ ಹೊಸ ಕೊಳವೆಬಾವಿ ಕೊರೆಸಲು ಸೂಚಿಸಿದರು. ಜಾತ್ರೆಯ ವೇಳೆ ಹೆಚ್ಚುವ ವಿದ್ಯುತ್ ಹೊರೆಯನ್ನು ಗಮನಿಸಿ ಹೆಸ್ಕಾಂಗೆ ಮನವಿ ಸಲ್ಲಿಸಿ ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಿ, ಹಳೆಯ ಕಂಬಗಳನ್ನು ಬದಲಾಯಿಸಲಾಗುವುದು. ನರೇಗಾ ಯೋಜನೆಯಡಿ ಗ್ರಾಮದ ಕಾಮಗಾರಿಗಳನ್ನು ಕೈಗೊಂಡು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆಯೂ ಕರೆ ನೀಡಿದರು.

ಜಾತ್ರೆ ಕೇವಲ ಉತ್ಸವಕ್ಕೆ ಸೀಮಿತವಾಗದೆ ಗ್ರಾಮದ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಒಗ್ಗಟ್ಟನ್ನು ಹೆಚ್ಚಿಸುವಂತಿರಬೇಕು ಎಂದ ಶಾಸಕರು, ದೇವಸ್ಥಾನದ ಬಣ್ಣ ಹಚ್ಚುವುದು ಸೇರಿದಂತೆ ಇತರ ಕೆಲಸಗಳಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು.

ಗ್ರಾಮಸ್ಥರು ಮತ್ತು ಜಾತ್ರಾ ಉತ್ಸವ ಸಮಿತಿಯ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ದೇವಲತ್ತಿ–ಬಿದರಭಾವಿ ಹಾಗೂ ಪಾರಿಶ್ವಾಡ–ಬಿದರಭಾವಿ ರಸ್ತೆ ನಿರ್ಮಾಣ, ತೋಪಿನಕಟ್ಟಿ–ಬಿದರಭಾವಿ ನಡುವಿನ ಹಾಳಾದ ಸೇತುವೆ ದುರಸ್ತಿ, ಅಂಕಲಗಿ ರಸ್ತೆಯ ೨೦೦ ಅಡಿ ಕಚ್ಚಾ ರಸ್ತೆ ಪೂರ್ಣಗೊಳಿಸಿ ಬೀದಿ ದೀಪ ಅಳವಡಿಕೆ, ಗ್ರಾಮದ ಸುತ್ತಲಿನ ರಿಂಗ್ ರಸ್ತೆಯ ಸಿ.ಸಿ. ಕಾಮಗಾರಿ ಮತ್ತು ಅಗಲೀಕರಣ, ಹಳೆಯ ಸಿ.ಸಿ. ಹಾಗೂ ಹೊಲದ ರಸ್ತೆಗಳ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಲಕ್ಷ್ಮೀ ದೇವಸ್ಥಾನ ದುರಸ್ತಿ ಮತ್ತು ಸುಂದರೀಕರಣ, ಮಾರುತಿ ಹಾಗೂ ವಿಠ್ಠಲ–ರಖುಮಾಯಿ ದೇವಸ್ಥಾನ ಕಳಸ ಕಾರ್ಯ, ಜೈಮಕೋಟ ರಸ್ತೆಯ ಸ್ಥಳ ದೇವ ಮತ್ತು ಕಲಮೇಶ್ವರ ದೇವಸ್ಥಾನಗಳಿಗೆ ತಲಾ ೨೦೦ ಅಡಿ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಲಾಗಿದೆ. ಇದರ ಜೊತೆಗೆ ನಿಯಮಿತ ಮತ್ತು ಸಮೃದ್ಧ ನೀರು ಪೂರೈಕೆ, ಹಳೆಯ ವಿದ್ಯುತ್ ಕಂಬ ಮತ್ತು ನೇತಾಡುವ ತಂತಿಗಳ ದುರಸ್ತಿ, ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ, ಚರಂಡಿ ದುರಸ್ತಿ ಮತ್ತು ತ್ಯಾಜ್ಯ ನೀರು ನಿರ್ವಹಣೆ ಹಾಗೂ ಗ್ರಾಮದ ಪ್ರವೇಶದ್ವಾರದಲ್ಲಿ ಸ್ವಾಗತ ಕಮಾನು ನಿರ್ಮಾಣಕ್ಕೂ ಮನವಿ ಮಾಡಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या