खानापूर

जांबोटी येथे 65 लाखांच्या आयुष्मान आरोग्य मंदिराचे भूमिपूजन | ಜಾಂಬೋಟಿಯಲ್ಲಿ 65 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಭೂಮಿಪೂಜೆ

खानापूर (प्रतिनिधी) : पवित्र श्रावण महिन्याच्या अंतिम सोमवारचे औचित्य साधून खानापूर मतदारसंघाचे आमदार श्री. विठ्ठलराव सोमण्णा हलगेकर यांच्या शुभहस्ते जांबोटी (ता. खानापूर) येथे ‘आयुष्मान आरोग्य मंदिर’च्या नवीन दुमजली इमारतीचा भूमिपूजन सोहळा उत्साहात पार पडला

.

केंद्र व राज्य सरकारच्या 15 व्या वित्त आयोगाच्या आरोग्य योजनेअंतर्गत सुमारे 65 लाख रुपये खर्चून ही सुसज्ज इमारत उभारण्यात येणार आहे. दुमजली इमारतीच्या तळमजल्यावर अत्याधुनिक आरोग्य केंद्राची सुविधा उपलब्ध करून देण्यात येणार असून, पहिल्या मजल्यावर आरोग्य कर्मचाऱ्यांच्या निवासाची व्यवस्था करण्यात येणार आहे. त्यामुळे जांबोटी परिसरातील नागरिकांना अधिक चांगल्या आणि त्वरित आरोग्य सुविधा उपलब्ध होण्यास मदत होणार आहे.

खानापूर तालुक्यात 7 आयुष्मान आरोग्य मंदिरांना मंजुरी

भूमिपूजनानंतर उपस्थितांना संबोधित करताना आमदार विठ्ठलराव हलगेकर यांनी सांगितले की, पहिल्या टप्प्यात खानापूर तालुक्यासाठी एकूण 7 आयुष्मान आरोग्य मंदिरांना मंजुरी मिळाली आहे. यामध्ये मोदेकोप, जांबोटी, कंबारडा, चापोली, तोलगी आणि गंदीगुड्व्हा या गावांचा समावेश आहे. ग्रामीण भागातील नागरिकांना त्यांच्या परिसरातच दर्जेदार व त्वरित आरोग्य सेवा मिळावी, हा या योजनेमागील मुख्य उद्देश असल्याचे त्यांनी स्पष्ट केले.

कामाच्या गुणवत्तेकडे विशेष लक्ष देण्याच्या सूचना

इमारतीच्या बांधकामाच्या गुणवत्तेबाबत आमदार हलगेकर यांनी संबंधित कंत्राटदार श्री. मंजुनाथ बंदीवड्डर तसेच अधिकाऱ्यांना स्पष्ट सूचना दिल्या. शासकीय कामाचा दर्जा उत्तम आणि बांधकाम टिकाऊ असावे, जेणेकरून त्याचा लाभ नागरिकांना अनेक वर्षे मिळेल, याची दक्षता घेण्याचे आवाहन त्यांनी केले.

प्रमुखांची उपस्थिती

या कार्यक्रमास जिल्हा सरचिटणीस सौ. धनश्री सरदेसाई, तालुका सरचिटणीस श्री. मल्लाप्पा मारीहाळ, भाजप नेते श्री. दत्ता कदम, स्थानिक भाजप नेते दौलत कोलीकर, श्री. पवन गायकवाड, श्री. संजय पाटील, श्री. सुनील देसाई, शंकर गावडे, कृष्णा भरणकर, मंजुनाथ मुतगी, प्रभाकर शेंगाळे, मनोहर साखळकर, सुरेश बिर्जे यांच्यासह कंत्राटदार, आरोग्य विभागाचे अधिकारी आणि जांबोटी परिसरातील नागरिक मोठ्या संख्येने उपस्थित होते.

ಜಾಂಬೋಟಿಯಲ್ಲಿ 65 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಭೂಮಿಪೂಜೆ

ಖಾನಾಪುರ (ಪ್ರತಿನಿಧಿ) : ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಖಾನಾಪುರ ಮತಕ್ಷೇತ್ರದ ಶಾಸಕ ಶ್ರೀ ವಿಠ್ಠಲರಾವ್ ಸೋಮಣ್ಣಾ ಹಳಗೇಕರ ಅವರ ಶುಭಹಸ್ತದಿಂದ ಜಾಂಬೋಟಿ (ತಾ. ಖಾನಾಪುರ) ಗ್ರಾಮದಲ್ಲಿ ನೂತನ ‘ಆಯುಷ್ಮಾನ್ ಆರೋಗ್ಯ ಮಂದಿರ’ದ ದ್ವಿಮಹಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ 15ನೇ ಹಣಕಾಸು ಆಯೋಗದ ಆರೋಗ್ಯ ಯೋಜನೆಯಡಿ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಈ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ದ್ವಿಮಹಡಿ ಕಟ್ಟಡದ ನೆಲ ಮಹಡಿಯಲ್ಲಿ ಅತ್ಯಾಧುನಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ಮೇಲಿನ ಮಹಡಿಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ನರ್ಸ್‌ಗಳ ವಸತಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದ ಜಾಂಬೋಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಮತ್ತು ತ್ವರಿತ ಆರೋಗ್ಯ ಸೇವೆ ದೊರೆಯಲಿದೆ.

ಖಾನಾಪುರ ತಾಲೂಕಿನಲ್ಲಿ 7 ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಮಂಜೂರು

ಭೂಮಿಪೂಜೆ ಬಳಿಕ ಮಾತನಾಡಿದ ಶಾಸಕ ವಿಠ್ಠಲರಾವ್ ಹಳಗೇಕರ, ಮೊದಲ ಹಂತದಲ್ಲಿ ಖಾನಾಪುರ ತಾಲೂಕಿಗೆ ಒಟ್ಟು 7 ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು. ಮೋದೇಕೋಪ, ಜಾಂಬೋಟಿ, ಕಂಬಾರಡ, ಚಾಪೋಲಿ, ತೋಲಗಿ ಹಾಗೂ ಗಂದಿಗುಡ್ವಾ ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಗ್ರಾಮೀಣ ಭಾಗದ ಜನರಿಗೆ ತಮ್ಮ ಪ್ರದೇಶದಲ್ಲಿಯೇ ಉತ್ತಮ ಹಾಗೂ ತ್ವರಿತ ಆರೋಗ್ಯ ಸೇವೆ ದೊರೆಯಬೇಕು ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಸೂಚನೆ

ಕಟ್ಟಡ ನಿರ್ಮಾಣದ ಗುಣಮಟ್ಟದ ಕುರಿತು ಮಾತನಾಡಿದ ಶಾಸಕ ಹಳಗೇಕರ ಅವರು ಗುತ್ತಿಗೆದಾರ ಶ್ರೀ ಮಂಜುನಾಥ ಬಂಡಿವಡ್ಡರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಯ ಗುಣಮಟ್ಟವನ್ನು ಉತ್ತಮವಾಗಿ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸರ್ಕಾರಿ ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಇದರಿಂದ ಮುಂದಿನ ಹಲವು ವರ್ಷಗಳ ಕಾಲ ಸಾರ್ವಜನಿಕರಿಗೆ ಇದರ ಪ್ರಯೋಜನ ದೊರೆಯುವಂತಾಗಬೇಕು ಎಂದು ಹೇಳಿದರು.

ಪ್ರಮುಖರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೌ. ಧನಶ್ರೀ ಸರದೇಸಾಯಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಮಲ್ಲಪ್ಪ ಮಾರಿಹಾಳ, ಬಿಜೆಪಿ ಮುಖಂಡ ಶ್ರೀ ದತ್ತಾ ಕದಂ, ಸ್ಥಳೀಯ ಬಿಜೆಪಿ ಮುಖಂಡ ದೌಲತ್ ಕೋಳಿಕರ, ಶ್ರೀ ಪವನ ಗಾಯಕವಾಡ, ಶ್ರೀ ಸಂಜಯ ಪಾಟೀಲ, ಶ್ರೀ ಸುನೀಲ ದೇಸಾಯಿ, ಶಂಕರ ಗಾವಡೆ, ಕೃಷ್ಣಾ ಭರಣಕರ, ಮಂಜುನಾಥ ಮುತಗಿ, ಪ್ರಭಾಕರ ಶೆಂಗಾಳೆ, ಮನೋಹರ ಸಾಖಳಕರ, ಸುರೇಶ ಬಿರ್ಜೆ ಸೇರಿದಂತೆ ಗುತ್ತಿಗೆದಾರರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या