खानापूर तालुक्यात रस्त्यांची दयनीय अवस्था; चिखल, खड्ड्यांमुळे नागरिक त्रस्त, गणेशोत्सवापूर्वी तात्पुरती डागडुजी करा | ಖಾನಾಪುರ ತಾಲೂಕಿನ ಹಲವು ರಸ್ತೆಗಳು ಕೆಸರುಮಯ; ಗುಂಡಿಗಳಿಂದ ವಾಹನ ಸವಾರರು ಪರದಾಟ
ಗಣೇಶೋತ್ಸವಕ್ಕೂ ಮುನ್ನ ತಾತ್ಕಾಲಿಕ ದುರಸ್ತಿ ಮಾಡಿ
खानापूर : प्रतिनिधी
पावसामुळे खानापूर तालुक्यातील अनेक गावांमधील रस्त्यांची अवस्था अत्यंत खराब झाली असून, सर्वत्र चिखल आणि खड्ड्यांचे साम्राज्य पसरले आहे. खराब रस्त्यांमुळे नागरिक, वाहनचालक आणि विद्यार्थ्यांना मोठ्या अडचणींचा सामना करावा लागत आहे.

खानापूर शहरातील हेस्कॉम कार्यालय ते रुमेवाडी क्रॉसपर्यंतचा रस्ता सध्या अत्यंत खराब झाला असून, या मार्गावर मोठमोठे खड्डे पडले आहेत. पावसाचे पाणी खड्ड्यांमध्ये साचल्याने वाहनचालकांना जीव मुठीत धरून प्रवास करावा लागत आहे.
याशिवाय तिवोली पूल ते तिवोली गाव रस्ता, तोराळी-गवळीवाडी रस्ता, मनतुर्ग हालात्री ब्रिज रस्ता यांसह तालुक्यातील अनेक प्रमुख रस्त्यांची अवस्था गंभीर झाली आहे. काही ठिकाणी रस्ते चिखलमय झाले असून, काही मार्गांवरून प्रवास करणे धोकादायक बनले आहे. या रस्त्यांवर अपघात होण्याची शक्यता वाढली आहे.
मोदेकोप-खानापूर-जांबोटी मार्ग, पडलवाडी क्रॉस-हलसाल-माचीगड रस्ता, नेरसा-कोगळा मार्ग, कापोली-शिवठाण मार्ग अशा अनेक भागांमध्येही नागरिकांनी रस्त्यांच्या दुरवस्थेबाबत नाराजी व्यक्त केली आहे.

आगामी गणेशोत्सव काही दिवसांवर आला असून, गावागावांत उत्सवाची तयारी सुरू आहे. या काळात नागरिकांची आणि वाहनांची वर्दळ मोठ्या प्रमाणात वाढणार आहे. त्यामुळे कायमस्वरूपी रस्त्यांची कामे जेव्हा करायची तेव्हा करावीत, मात्र सध्या नागरिकांच्या सुरक्षेसाठी तातडीने खड्डे बुजवून, मुरूम टाकून आणि आवश्यक डागडुजी करून रस्ते वाहतुकीस योग्य करावेत, अशी मागणी नागरिकांकडून होत आहे.
या समस्येकडे लक्ष देऊन तातडीने उपाययोजना करण्याची मागणी नागरिकांनी खानापूर मतदारसंघाचे आमदार विठ्ठल हलगेकर यांच्याकडे केली आहे. पावसाळ्यात रस्त्यांमुळे होणारा त्रास आणि संभाव्य अपघात टाळण्यासाठी प्रशासनाने त्वरित पावले उचलावीत, अशी अपेक्षा व्यक्त होत आहे.
ಖಾನಾಪುರ ತಾಲೂಕಿನ ಹಲವು ರಸ್ತೆಗಳು ಕೆಸರುಮಯ; ಗುಂಡಿಗಳಿಂದ ವಾಹನ ಸವಾರರು ಪರದಾಟ
ಗಣೇಶೋತ್ಸವಕ್ಕೂ ಮುನ್ನ ತಾತ್ಕಾಲಿಕ ದುರಸ್ತಿ ಮಾಡಿ; ಶಾಸಕ ವಿಠ್ಠಲ ಹಲಗೇಕರ ಅವರಿಗೆ ಮನವಿ
ಖಾನಾಪುರ : ಪ್ರತಿನಿಧಿ
ಮಳೆಗಾಲದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಹಲವು ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಗಳಲ್ಲಿ ಕೆಸರು ಮತ್ತು ಗುಂಡಿಗಳೇ ಕಾಣಿಸುತ್ತಿವೆ. ಹದಗೆಟ್ಟ ರಸ್ತೆಗಳಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ.
ಖಾನಾಪುರ ಪಟ್ಟಣದ ಹೆಸ್ಕಾಂ ಕಚೇರಿಯಿಂದ ರುಮೇವಾಡಿ ಕ್ರಾಸ್‌ವರೆಗೆ ಇರುವ ರಸ್ತೆ ಅತ್ಯಂತ ಹದಗೆಟ್ಟ ಸ್ಥಿತಿಯಲ್ಲಿದ್ದು, ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಮಳೆಯ ನೀರು ಗುಂಡಿಗಳಲ್ಲಿ ನಿಂತಿರುವುದರಿಂದ ವಾಹನ ಸಂಚಾರ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಭೀತಿ ಎದುರಿಸುತ್ತಿದ್ದಾರೆ.
ಇದರ ಜೊತೆಗೆ ತಿವೋಳಿ ಸೇತುವೆಯಿಂದ ತಿವೋಳಿ ಗ್ರಾಮದವರೆಗಿನ ರಸ್ತೆ, ತೋರಾಳಿ-ಗೋಳ್ಯಾಳಿ ರಸ್ತೆ, ಮಂತುರ್ಗಾ-ಹಲಾತ್ರಿ ಬ್ರಿಡ್ಜ್ ರಸ್ತೆ ಸೇರಿದಂತೆ ತಾಲೂಕಿನ ಹಲವು ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕೆಲವು ಕಡೆ ರಸ್ತೆಗಳು ಕೆಸರುಮಯವಾಗಿದ್ದು, ಸಂಚಾರವೇ ಕಷ್ಟಕರವಾಗಿದೆ. ಈ ಮಾರ್ಗಗಳಲ್ಲಿ ಅಪಘಾತದ ಅಪಾಯವೂ ಹೆಚ್ಚಾಗಿದೆ.
ಅದೇ ರೀತಿ ಮೋದೇಕೊಪ್ಪ-ಖಾನಾಪುರ-ಜಾಂಬೋಟಿ ರಸ್ತೆ, ಪಡಲವಾಡಿ ಕ್ರಾಸ್-ಹಲಸಾಲ-ಮಾಚಿಗಡ ರಸ್ತೆ, ನೇಸರ-ಕೋಂಗಾಳ ರಸ್ತೆ, ಕಾಪೋಳಿ-ಶಿವಠಾಣ ರಸ್ತೆ ಸೇರಿದಂತೆ ಹಲವು ಗ್ರಾಮೀಣ ರಸ್ತೆಗಳ ದುಸ್ಥಿತಿಯ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಗಣೇಶೋತ್ಸವ ಆರಂಭವಾಗಲಿದ್ದು, ಗ್ರಾಮಗಳಲ್ಲಿ ಸಿದ್ಧತೆಗಳು ಜೋರಾಗಿವೆ. ಈ ಸಂದರ್ಭದಲ್ಲಿ ಜನರ ಓಡಾಟ ಮತ್ತು ವಾಹನ ಸಂಚಾರ ಹೆಚ್ಚಾಗಲಿದೆ. ಆದ್ದರಿಂದ ಶಾಶ್ವತ ರಸ್ತೆ ಕಾಮಗಾರಿಗಳನ್ನು ನಂತರ ಕೈಗೊಳ್ಳಬಹುದು, ಆದರೆ ಸದ್ಯಕ್ಕೆ ಜನರ ಸುರಕ್ಷತೆ ದೃಷ್ಟಿಯಿಂದ ಗುಂಡಿಗಳನ್ನು ಮುಚ್ಚಿ, ಮಣ್ಣು ಹಾಕಿ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಈ ಕುರಿತು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ನಾಗರಿಕರು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರಲ್ಲಿ ಮನವಿ ಮಾಡಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳಿಂದ ಉಂಟಾಗುತ್ತಿರುವ ತೊಂದರೆ ಮತ್ತು ಅಪಘಾತದ ಅಪಾಯವನ್ನು ತಪ್ಪಿಸಲು ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
