गर्लगुंजी, सिंगीनकोप मराठी शाळांना युवा समितीकडून शैक्षणिक साहित्य वाटप | ಗರ್ಲಗುಂಜಿ, ಸಿಂಗೀನಕೊಪ್ಪ ಶಾಲೆಗಳಿಗೆ ಯುವ ಸಮಿತಿಯಿಂದ ಶೈಕ್ಷಣಿಕ ಸಾಮಗ್ರಿ ವಿತರಣೆ
खानापूर : महाराष्ट्र एकीकरण युवा समिती, खानापूर आणि राज्य मराठी विकास संस्था, मुंबई यांच्या संयुक्त विद्यमाने खानापूर तालुक्यातील गर्लगुंजी आणि सिंगीनकोप येथील मराठी प्राथमिक शाळांमध्ये विद्यार्थ्यांना शैक्षणिक साहित्याचे वितरण करण्यात आले.

गर्लगुंजी येथील मराठी प्राथमिक शाळेत आयोजित कार्यक्रमाच्या अध्यक्षस्थानी ग्रामपंचायत सदस्य हणमंत मेलगे होते. यावेळी बोलताना सामाजिक कार्यकर्ते तथा माजी एसडीएमसी सदस्य संजय पाटील आणि मऱ्यापा पाखरे यांनी, “मराठी शाळा टिकल्या तरच मराठी भाषा टिकेल. त्यामुळे मराठी शाळांच्या संवर्धनासाठी सर्वांनी एकत्रितपणे प्रयत्न करणे गरजेचे आहे,” असे मत व्यक्त केले.

यावेळी माजी जि.पं. सदस्या लक्ष्मी पाटील, मार्केटिंग सोसायटी नंदगडचे गोपाळराव पाटील, ता.पं.सदस्य पांडुरंग सावंत, माजी एसडीएमसी सदस्य संजय पाटील, मऱ्यापा पाखरे, ग्रामपंचायत सदस्य संतोष पाटील, माउली सोसायटीचे सुनील पाटील, ग्रामपंचायत सदस्य कृष्णा कुंभार, शिवाजी कोलकार, सुरेश मेलगे, संतोष पाटील आणि गोकुल चौगुले आदी उपस्थित होते. उपस्थितांनी युवा समितीच्या या उपक्रमाचे तसेच युवा कार्यकर्त्यांच्या प्रयत्नांचे कौतुक केले.
त्यानंतर युवा समितीच्या कार्यकर्त्यांनी सिंगीनकोप येथील मराठी प्राथमिक शाळेलाही भेट देऊन विद्यार्थ्यांना शैक्षणिक साहित्याचे वितरण केले. विद्यार्थ्यांना अंकलिपी पुस्तिका, वह्या, पेन, पेन्सिल किट तसेच इतर आवश्यक शैक्षणिक साहित्य देण्यात आले.
गेल्या नऊ वर्षांपासून महाराष्ट्र एकीकरण युवा समितीच्या माध्यमातून सीमाभागातील मातृभाषेतून शिक्षण घेणाऱ्या विद्यार्थ्यांना शैक्षणिक साहित्याचे वाटप करण्यात येत आहे. मराठी शाळांमध्ये विद्यार्थ्यांनी प्रवेश घ्यावा, त्यांना प्रोत्साहन मिळावे आणि मराठी शाळांमधील विद्यार्थीसंख्या वाढविण्यासाठी सकारात्मक वातावरण निर्माण व्हावे, या उद्देशाने हा उपक्रम सातत्याने राबविला जात असल्याचे श्री. पाटील, शुभम कांबळे आणि आदित्य कांबळे यांनी सांगितले.
यावेळी पत्रकार सुहास पाटील यांच्यासह दोन्ही शाळांतील शिक्षक, एसडीएमसी सदस्य आणि ग्रामस्थ उपस्थित होते.
या उपक्रमात महाराष्ट्र एकीकरण युवा समिती, खानापूरचे श्री. पाटील, शुभम कांबळे, आदित्य कांबळे, सुदेश घाडी, मुकेश गुरव, साईनाथ मळीक, कृष्णा खांबले, श्रीहरी पाटील, तुषार देसाई, तन्मय हुंदरे, श्रेयस निटूरकर, आकाश घाडी आदी कार्यकर्त्यांनी सहभाग घेतला.
मराठी शाळांचे संवर्धन, विद्यार्थ्यांना प्रोत्साहन आणि मातृभाषेतील शिक्षणाला बळ देण्याच्या उद्देशाने युवा समितीचा हा उपक्रम सीमाभागात सुरू आहे.
ಗರ್ಲಗುಂಜಿ, ಸಿಂಗೀನಕೊಪ್ಪ ಮರಾಠಿ ಶಾಲೆಗಳಿಗೆ ಯುವ ಸಮಿತಿಯಿಂದ ಶೈಕ್ಷಣಿಕ ಸಾಮಗ್ರಿ ವಿತರಣೆ
ಖಾನಾಪುರ : ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ, ಖಾನಾಪುರ ಹಾಗೂ ರಾಜ್ಯ ಮರಾಠಿ ಅಭಿವೃದ್ಧಿ ಸಂಸ್ಥೆ, ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ತಾಲೂಕಿನ ಗರ್ಲಗುಂಜಿ ಹಾಗೂ ಸಿಂಗೀನಕೊಪ್ಪ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಗರ್ಲಗುಂಜಿ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಹನುಮಂತ ಮೇಲಗೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಎಸ್‌ಡಿಎಂಸಿ ಸದಸ್ಯ ಸಂಜಯ ಪಾಟೀಲ ಮತ್ತು ಮರ್ಯಪ್ಪ ಪಾಖರೆ ಅವರು, “ಮರಾಠಿ ಶಾಲೆಗಳು ಉಳಿದರೆ ಮಾತ್ರ ಮರಾಠಿ ಭಾಷೆಯೂ ಉಳಿಯುತ್ತದೆ. ಆದ್ದರಿಂದ ಮರಾಠಿ ಶಾಲೆಗಳ ಸಂರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯೆ ಲಕ್ಷ್ಮೀ ಪಾಟೀಲ, ನಂದಗಡ ಮಾರ್ಕೆಟಿಂಗ್ ಸೊಸೈಟಿಯ ಗೋಪಾಳರಾವ್ ಪಾಟೀಲ, ತಾ.ಪಂ. ಸದಸ್ಯ ಪಾಂಡುರಂಗ ಸಾವಂತ್, ಮಾಜಿ ಎಸ್‌ಡಿಎಂಸಿ ಸದಸ್ಯ ಸಂಜಯ ಪಾಟೀಲ, ಮರ್ಯಪ್ಪ ಪಾಖರೆ, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಪಾಟೀಲ, ಮೌಲಿ ಸೊಸೈಟಿಯ ಸುನೀಲ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಕುಂಭಾರ, ಶಿವಾಜಿ ಕೋಲಕಾರ, ಸುರೇಶ ಮೇಲಗೆ, ಸಂತೋಷ ಪಾಟೀಲ, ಗೋಕೂಳ ಚೌಗುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಸ್ಥಿತರಿದ್ದ ಗಣ್ಯರು ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯ ಶೈಕ್ಷಣಿಕ ಉಪಕ್ರಮವನ್ನು ಹಾಗೂ ಯುವ ಕಾರ್ಯಕರ್ತರ ಪ್ರಯತ್ನವನ್ನು ಶ್ಲಾಘಿಸಿದರು. ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕ ವೃಂದವೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಯುವ ಸಮಿತಿಯ ಕಾರ್ಯಕರ್ತರು ಸಿಂಗೀನಕೊಪ್ಪ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ಅಂಕಲಿಪಿ ಪುಸ್ತಕಗಳು, ನೋಟ್‌ಬುಕ್‌ಗಳು, ಪೆನ್, ಪೆನ್ಸಿಲ್ ಕಿಟ್ ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಳೆದ ಒಂಬತ್ತು ವರ್ಷಗಳಿಂದ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯ ವತಿಯಿಂದ ಗಡಿ ಭಾಗದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮರಾಠಿ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶವನ್ನು ಉತ್ತೇಜಿಸುವುದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪೂರಕ ವಾತಾವರಣ ನಿರ್ಮಿಸುವುದು ಹಾಗೂ ಮಾತೃಭಾಷೆಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಶ್ರೀ ಪಾಟೀಲ, ಶುಭಂ ಕಾಂಬಳೆ ಹಾಗೂ ಆದಿತ್ಯ ಕಾಂಬಳೆ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸುಹಾಸ ಪಾಟೀಲ ಸೇರಿದಂತೆ ಎರಡೂ ಶಾಲೆಗಳ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ, ಖಾನಾಪುರದ ಶ್ರೀ ಪಾಟೀಲ, ಶುಭಂ ಕಾಂಬಳೆ, ಆದಿತ್ಯ ಕಾಂಬಳೆ, ಸುದೇಶ ಘಾಡಿ, ಮುಕೇಶ ಗುರ್ವ, ಸಾಯಿನಾಥ ಮಳೀಕ, ಕೃಷ್ಣ ಖಾಂಬಳೆ, ಶ್ರೀಹರಿ ಪಾಟೀಲ, ತುಷಾರ ದೇಸಾಯಿ, ತನ್ಮಯ ಹುಂದರೆ, ಶ್ರೇಯಸ್ ನಿಟೂರಕರ ಹಾಗೂ ಆಕಾಶ ಘಾಡಿ ಸೇರಿದಂತೆ ಹಲವು ಯುವ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

