खानापूर

खानापूर-जांबोटी मार्गावर कचरा व डुकरांचा वावर वाढला; अपघातात युवकाचा हात मोडला | ರಸ್ತೆ ಬದಿಯ ಕಸದಿಂದ ಹಂದಿಗಳ ಹಾವಳಿ; ಅಪಘಾತದಲ್ಲಿ ಯುವಕನ ಕೈ ಮುರಿತ

खानापूर : जांबोटीहून खानापूरकडे येताना शनाया पाल्म्सच्या पुढे पुलावर डुकरांमुळे झालेल्या अपघातात एका युवकाचा उजवा हात फ्रॅक्चर झाला आहे. शनिवारी, दि. ८ ऑगस्ट रोजी दुपारी सुमारे ३.०५ वाजता हा अपघात घडला.

अपघातग्रस्त युवकाने दिलेल्या माहितीनुसार, पुलाजवळ रस्त्याच्या कडेला मोठ्या प्रमाणात कचरा साचलेला असून या ठिकाणी डुकरांचा वावर वाढला आहे. अपघाताच्या वेळी काही डुकरांना रस्त्याच्या एका बाजूने हाकलण्यात आले. त्यातील एका डुकराने अचानक त्यांच्या वाहनाला धडक दिल्याने दुचाकी रस्त्यावर कोसळली. वाहनाचा वेग कमी असल्याने मोठा अनर्थ टळला. मात्र, या अपघातात युवकाच्या उजव्या हाताला गंभीर दुखापत होऊन फ्रॅक्चर झाले, तर त्याच्यासोबत असलेल्या मित्राला सुदैवाने मोठी दुखापत झाली नाही.

या ठिकाणी यापूर्वीही वाहनांसमोर डुकरं आल्याच्या घटना घडल्याचे नागरिकांचे म्हणणे आहे. त्यामुळे भविष्यात अशा प्रकारचे अपघात होऊ नयेत, यासाठी पुलाजवळील कचरा तातडीने हटवून परिसराची स्वच्छता करावी आणि डुकरांचा रस्त्यावर होणारा वावर रोखण्यासाठी संबंधित प्रशासनाने ठोस उपाययोजना करावी, अशी मागणी करण्यात आली आहे.

तसेच रस्त्याच्या कडेला कचरा टाकू नये, परिसर स्वच्छ ठेवण्यासाठी नागरिकांनी सहकार्य करावे, असे आवाहन अपघातग्रस्त युवकाने केले आहे.

“जी वेळ माझ्यावर आली, ती इतरांवर येऊ देऊ नका. नागरिकांनी रस्त्याच्या कडेला कचरा टाकू नये आणि साचलेला कचरा प्रशासनाने तातडीने हटवावा,” असे आवाहन त्यांनी केले.

ರಸ್ತೆ ಬದಿಯ ಕಸದಿಂದ ಹಂದಿಗಳ ಹಾವಳಿ; ಅಪಘಾತದಲ್ಲಿ ಯುವಕನ ಕೈ ಮುರಿತ

ಖಾನಾಪುರ: ಜಾಂಬೋಟಿಯಿಂದ ಖಾನಾಪುರದತ್ತ ಬರುತ್ತಿದ್ದ ವೇಳೆ ಶನಯಾ ಪಾಮ್ಸ್‌ ಸಮೀಪ, ಛತ್ರಪತಿ ಶಿವಾಜಿ ಮಹಾರಾಜ ನಗರ ಬಳಿಯ ಸೇತುವೆ ಬಳಿ ಹಂದಿ ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಯುವಕನ ಬಲಗೈ ಮುರಿದ ಘಟನೆ ಶನಿವಾರ (ಆ. 8) ಮಧ್ಯಾಹ್ನ ನಡೆದಿದೆ.

ಆ. 8ರಂದು ಮಧ್ಯಾಹ್ನ ಸುಮಾರು 3.05ಕ್ಕೆ ಯುವಕ ತನ್ನ ಸ್ನೇಹಿತನೊಂದಿಗೆ ವಾಹನದಲ್ಲಿ ಜಾಂಬೋಟಿಯಿಂದ ಖಾನಾಪುರದತ್ತ ತೆರಳುತ್ತಿದ್ದಾಗ ಸೇತುವೆ ಬಳಿ ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಕಸದ ಪ್ರದೇಶದಿಂದ ಹಂದಿಗಳು ರಸ್ತೆಗೆ ಬಂದಿವೆ. ಈ ವೇಳೆ ಯಾರೋ ಹಂದಿಗಳನ್ನು ರಸ್ತೆಯ ಒಂದು ಬದಿಗೆ ಓಡಿಸಿದಾಗ, ಅವುಗಳಲ್ಲಿ ಒಂದು ಹಂದಿ ಏಕಾಏಕಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನ ರಸ್ತೆಗೆ ಬಿದ್ದಿದ್ದು, ಯುವಕನ ಬಲಗೈಗೆ ಗಂಭೀರ ಗಾಯವಾಗಿ ಫ್ರ್ಯಾಕ್ಚರ್‌ ಆಗಿದೆ. ವಾಹನದ ವೇಗ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಯುವಕನೊಂದಿಗೆ ಇದ್ದ ಸ್ನೇಹಿತನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಈ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಸ ಸಂಗ್ರಹವಾಗಿರುವುದರಿಂದ ಹಂದಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ವಾಹನಗಳ ಮುಂದೆ ಹಂದಿಗಳು ಅಡ್ಡ ಬಂದಿರುವ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ಬಳಿಯಿರುವ ಕಸವನ್ನು ತಕ್ಷಣ ತೆರವುಗೊಳಿಸಿ, ರಸ್ತೆ ಬದಿಯಲ್ಲಿ ಕಸ ಹಾಕುವುದನ್ನು ತಡೆಯಬೇಕು. ಜೊತೆಗೆ ಹಂದಿಗಳು ರಸ್ತೆಗೆ ಬಾರದಂತೆ ಸೂಕ್ತ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

“ನನಗೆ ಎದುರಾದ ಪರಿಸ್ಥಿತಿ ಬೇರೆಯವರಿಗೆ ಎದುರಾಗದಿರಲಿ. ಸಾರ್ವಜನಿಕರು ರಸ್ತೆ ಬದಿಯಲ್ಲಿ ಕಸ ಹಾಕದೆ ಸಹಕರಿಸಬೇಕು ಹಾಗೂ ಈಗಾಗಲೇ ಸಂಗ್ರಹವಾಗಿರುವ ಕಸವನ್ನು ಸಂಬಂಧಪಟ್ಟವರು ತೆರವುಗೊಳಿಸಬೇಕು,” ಎಂದು ಅಪಘಾತಕ್ಕೊಳಗಾದ ಯುವಕ ಮನವಿ ಮಾಡಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या