दहावीत बाजी मारणाऱ्या दिव्याला शिक्षणाधिकाऱ्यांचे 50 हजारांचे बक्षीस | ಜಂಟಿ ಪ್ರಥಮ ಸ್ಥಾನ ಪಡೆದ ದಿವ್ಯಾಳಿಗೆ ಬಿಇಒ ರಾಮಪ್ಪ ಅವರಿಂದ ೫೦ ಸಾವಿರ ರೂ. ಪ್ರಶಸ್ತಿ
खानापूर : फेरमूल्यांकनात एसएसएलसी परीक्षेत ६२५ पैकी ६२५ गुण मिळवून राज्यात संयुक्त प्रथम क्रमांक पटकावल्याबद्दल तालुक्यातील झुंजवाड येथील विद्यार्थिनी दिव्या प्रदीप देसाई हिचा विशेष सत्कार करण्यात आला. बिडी येथील होलिक्रॉस इंग्रजी माध्यम शाळेत आयोजित समारंभात गटशिक्षणाधिकारी (बीईओ) पी. रामप्पा यांच्या हस्ते तिला ५० हजार रुपयांचा धनादेश व पारितोषिक देऊन गौरविण्यात आले.
दिव्याला सुरुवातीच्या निकालात राज्यात द्वितीय क्रमांक मिळाला होता. मात्र, तिच्या गुणवत्तेवर विश्वास दाखवत गटशिक्षणाधिकारी पी. रामप्पा यांनी फेरमूल्यांकनात राज्यात प्रथम आल्यास ५० हजारांचे बक्षीस देण्याचे आश्वासन दिले होते. दिव्याने हे यश साध्य करताच रामप्पा यांनी आपला शब्द पूर्ण केला. चिकाटी आणि सातत्यपूर्ण अभ्यासाच्या जोरावर दिव्याने मिळवलेल्या या यशामुळे खानापूर तालुक्याच्या शिरपेचात मानाचा तुरा रोवला गेला आहे. या प्रसंगी दिव्याचे आई-वडील, बीआरसी तुळशीदास मोरे, शंकर कमार, संतोष नाईक, शाळेचे मुख्याध्यापक आणि शिक्षक उपस्थित होते.
ಖಾನಾಪುರ: ಎಸ್‌ಎಸ್‌ಎಲ್‌ಸಿ ಮರುಮೌಲ್ಯೀಕರಣದಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಜಂಟಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಜುಂಜವಾಡ ಗ್ರಾಮದ ವಿದ್ಯಾರ್ಥಿನಿ ದಿವ್ಯಾ ಪ್ರದೀಪ್ ದೇಸಾಯಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಬಿದಿಯ ಹೋಲಿಕ್ರಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪಿ. ರಾಮಪ್ಪ ಅವರು ದಿವ್ಯಾಳಿಗೆ ೫೦ ಸಾವಿರ ರೂಪಾಯಿಗಳ ಚೆಕ್ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಆರಂಭಿಕ ಫಲಿತಾಂಶದಲ್ಲಿ ದಿವ್ಯಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಆದರೆ ಆಕೆಯ ಪ್ರತಿಭೆಯನ್ನು ಗುರುತಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಪ್ಪ ಅವರು, ಮರುಮೌಲ್ಯೀಕರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ ೫೦ ಸಾವಿರ ರೂ. ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದರು. ದಿವ್ಯಾ ಈ ಸಾಧನೆ ಮಾಡುತ್ತಿದ್ದಂತೆ ರಾಮಪ್ಪ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ದಿವ್ಯಾಳ ಪರಿಶ್ರಮ ಮತ್ತು ಸತತ ಅಭ್ಯಾಸದ ಬಲದಿಂದ ಲಭಿಸಿದ ಈ ಯಶಸ್ಸು ಖಾನಾಪುರ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಕೀರ್ತಿ ತಂದಿದೆ. ಈ ಸಂದರ್ಭದಲ್ಲಿ ದಿವ್ಯಾಳ ಪೋಷಕರು, ಬಿಆರ್‌ಸಿ ತುಳಸಿದಾಸ್ ಮೋರೆ, ಶಂಕರ್ ಕಮಾರ್, ಸಂತೋಷ್ ನಾಯಕ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

