खानापूर शिवाजीनगर शाळेचे निवृत्त शिक्षक बी. टी. गडाद यांचे निधन | ಖಾನಾಪುರ ಶಿವಾಜಿನಗರ ಶಾಲೆಯ ನಿವೃತ್ತ ಶಿಕ್ಷಕ ಬಿ. ಟಿ. ಗಡದ್ ನಿಧನ
खानापूर, दि. 23 जून : खानापूर येथील शिवाजीनगर शाळेचे निवृत्त शिक्षक बी. टी. गडाद यांचे निधन झाले. त्यांच्या निधनाने शैक्षणिक, सामाजिक व मित्रपरिवारात हळहळ व्यक्त होत आहे.
मूळचे बैलहोंगल येथील असलेले आणि सध्या विद्यानगर खानापूर येथे वास्तव्यास असलेले गडाद यांनी अनेक वर्षे शिक्षक म्हणून सेवा बजावत विद्यार्थ्यांच्या जडणघडणीत महत्त्वाचे योगदान दिले. त्यांच्या शांत, मनमिळावू आणि विद्यार्थिप्रिय स्वभावामुळे ते सर्वांच्या आदरास पात्र ठरले होते.
त्यांच्या पश्चात पत्नी, मुलगी, आई, भाऊ तसेच मोठा परिवार आहे. सरकारी उच्च प्बैलहोंगलराथमिक कन्नड शाळेच्या शिक्षिका श्रीमती गडाद या त्यांच्या पत्नी होत.
बी. टी. गडाद यांच्या निधनाची वार्ता समजताच माजी विद्यार्थी, शिक्षकवर्ग व नागरिकांकडून शोक व्यक्त करण्यात आला. त्यांच्या पार्थिवावर आज त्यांच्या मूळ गावी बैलहोंगल येथे अंत्यसंस्कार करण्यात आले.
ಖಾನಾಪುರ ಶಿವಾಜಿನಗರ ಶಾಲೆಯ ನಿವೃತ್ತ ಶಿಕ್ಷಕ ಬಿ. ಟಿ. ಗಡದ್ ನಿಧನ
ಖಾನಾಪುರ, ಜೂನ್ 23: ಖಾನಾಪುರದ ಶಿವಾಜಿನಗರ ಶಾಲೆಯ ನಿವೃತ್ತ ಶಿಕ್ಷಕರಾದ ಬಿ. ಟಿ. ಗಡಾದ ಅವರು ನಿಧನರಾದರು. ಅವರ ನಿಧನದಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಸ್ನೇಹಿತರ ವಲಯದಲ್ಲಿ ದುಃಖದ ಛಾಯೆ ಆವರಿಸಿದೆ.
ಮೂಲತಃ ಬೈಲಹೊಂಗಲದವರಾಗಿದ್ದ ಹಾಗೂ ಪ್ರಸ್ತುತ ಖಾನಾಪುರದ ವಿದ್ಯಾನಗರದಲ್ಲಿ ವಾಸವಾಗಿದ್ದ ಗಡಾದ ಅವರು ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಶಾಂತ, ಸೌಮ್ಯ ಹಾಗೂ ವಿದ್ಯಾರ್ಥಿ ಪ್ರಿಯ ಸ್ವಭಾವದಿಂದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
ಅವರ ಅಗಲಿಕೆಯಿಂದ ಪತ್ನಿ, ಪುತ್ರಿ, ತಾಯಿ, ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಪತ್ನಿ ಶ್ರೀಮತಿ ಗಡಾದ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿ. ಟಿ. ಗಡಾದ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಳೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ನಾಗರಿಕರು ಸಂತಾಪ ವ್ಯಕ್ತಪಡಿಸಿದರು. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಂದು ಅವರ ಸ್ವಗ್ರಾಮವಾದ ಬೈಲಹೊಂಗಲದಲ್ಲಿ ನೆರವೇರಿಸಲಾಯಿತು.

