1 जून शाळा प्रवेशोत्सव उत्साहात साजरा करा, सर्व पायाभूत सुविधा तपासा: जि.प. सीईओ राहुल शिंदे | ಶಾಲೆ ಮತ್ತು ಅಂಗನವಾಡಿಗಳ ಮೂಲಸೌಕರ್ಯ ಪರಿಶೀಲನೆಗೆ ಸೂಚನೆ: ಜಿಪಂ ಸಿಇಒ ರಾಹುಲ್ ಶಿಂಧೆ
कोणतेही मूल शाळेबाहेर राहणार नाही याची दक्षता घ्या
बेळगाव: शाळा आणि अंगणवाड्या पुन्हा सुरू होत असल्याच्या पार्श्वभूमीवर, जिल्ह्यातील सर्व शाळा आणि अंगणवाड्यांमधील पायाभूत सुविधांची संबंधित अधिकाऱ्यांनी पाहणी करून आवश्यक त्या सोयीसुविधा उपलब्ध करून द्याव्यात, अशी सूचना जिल्हा पंचायत मुख्य कार्यकारी अधिकारी (सीईओ) राहुल शिंदे यांनी दिली.
जिल्हा पंचायत सभागृहात शाळा आणि अंगणवाडी प्रवेशोत्सवाच्या संदर्भात आयोजित विविध विभागांच्या जिल्हा व तालुकास्तरीय व्हिडिओ कॉन्फरन्स बैठकीच्या अध्यक्षस्थानावरून ते बोलत होते.
शाळा आणि अंगणवाडीच्या आतील व बाहेरील परिसराची स्वच्छता करण्यावर भर द्यावा. अन्नधान्य साठवणूक कक्ष स्वच्छ ठेवावा. खाद्यपदार्थांच्या गुणवत्तेची तपासणी करावी. पिण्याचे पाणी, वीज यांसह इतर पायाभूत सुविधा पुरवाव्यात, असे निर्देश त्यांनी दिले.
इमारतींच्या स्थितीची पाहणी करा:
सर्व ग्रामपंचायती, स्थानिक स्वराज्य संस्था आणि महानगरपालिकांच्या हद्दीतील शाळा व अंगणवाडी इमारतींच्या स्थितीची संबंधित विभागाच्या अधिकाऱ्यांनी पावसाळा सुरू होण्यापूर्वी पाहणी करावी. गरज पडल्यास पर्यायी इमारतीत स्थलांतर करण्याची कार्यवाही करावी आणि मुलांच्या सुरक्षिततेला प्राधान्य द्यावे, असे निर्देश त्यांनी दिले.
शाळा आणि अंगणवाड्यांना पुरवल्या जाणाऱ्या पिण्याच्या पाण्याची ‘एफटीके’ (FTK) किटद्वारे तपासणी करूनच ते पुरवावे. तसेच, शाळांच्या आसपास असणाऱ्या धोकादायक वीज तारा किंवा विजेचे दिवे त्वरित स्थलांतरित करावेत, असेही त्यांनी सांगितले.
मुलांच्या उपस्थितीकडे लक्ष द्या:
1 जून रोजी सर्व शाळांमध्ये ‘शाळा प्रवेशोत्सव’ उत्साहात साजरा करावा. कोणतेही मूल शाळेपासून वंचित राहणार नाही याची दक्षता घ्यावी. शाळेबाहेर असलेल्या मुलांना समजावून पुन्हा शाळेत आणण्याचे काम करावे. अंगणवाडीमध्ये महिन्याचा तिसरा शनिवार आणि शाळांमध्ये महिन्याचा चौथा शनिवार पालकांची सभा अनिवार्यपणे घ्यावी, अशा सूचना त्यांनी दिल्या.
वसतिगृहांच्या सुरक्षिततेला प्राधान्य द्या:
सर्व वसतिगृहांमध्ये आवश्यक त्या पायाभूत सुविधा उपलब्ध करून द्याव्यात. मुलांच्या सुरक्षिततेवर विशेष भर देऊन आवश्यक सुरक्षा रक्षक आणि सीसीटीव्ही कॅमेरे बसवावेत. मागील वर्षाप्रमाणे यावर्षीही संध्याकाळी मुलांसाठी ऑनलाइन वर्ग घ्यावेत, असे निर्देशही त्यांनी दिले.
वनमहोत्सव साजरा करा:
सर्व शाळा, अंगणवाड्या आणि सरकारी कार्यालयांमध्ये वृक्षारोपण करून ‘वनमहोत्सव’ मोठ्या उत्साहात साजरा करावा. तसेच, मुलांना पर्यावरणाबद्दल जागरूक करावे, असे आवाहन त्यांनी केले.
या बैठकीत जिल्हा पंचायत प्रकल्प संचालक रवी बंगारेप्पनावर, उपसचिव (विकास) बसवराज अडविमठ, नगरविकास कक्षाचे प्रकल्प संचालक मल्लिकार्जुन कलदगी यांच्यासह विविध विभागांचे जिल्हा व तालुकास्तरीय अधिकारी आणि कर्मचारी उपस्थित होते.
ಶಾಲೆ ಮತ್ತು ಅಂಗನವಾಡಿಗಳ ಮೂಲಸೌಕರ್ಯ ಪರಿಶೀಲನೆಗೆ ಸೂಚನೆ: ಜಿಪಂ ಸಿಇಒ ರಾಹುಲ್ ಶಿಂಧೆ
ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಿ; ಯಾವ ಮಗು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸಿ
ಬೆಳಗಾವಿ: ರಾಜ್ಯದಲ್ಲಿ ಶೈಕ್ಷಣಿಕ ವರ್ಷದ ಆರಂಭದ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲಾ ಶಾಲೆ ಮತ್ತು ಅಂಗನವಾಡಿಗಳಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಶಿಂಧೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಾಲಾ ಮತ್ತು ಅಂಗನವಾಡಿ ಪ್ರಾರಂಭೋತ್ಸವದ ಕುರಿತು ಆಯೋಜಿಸಿದ್ದ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆ ಮತ್ತು ಅಂಗನವಾಡಿಗಳ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಹಾರ ಪದಾರ್ಥಗಳ ದಾಸ್ತಾನು ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ, ಪೂರೈಕೆಯಾಗುವ ಆಹಾರದ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.
ಕಟ್ಟಡಗಳ ಸುರಕ್ಷತೆಗೆ ಆದ್ಯತೆ:
ಎಲ್ಲಾ ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಯನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ಪರಿಶೀಲಿಸಬೇಕು. ಕಟ್ಟಡಗಳು ಶಿಥಿಲವಾಗಿದ್ದರೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಬೇರೆ ಕಟ್ಟಡಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಶಾಲೆ ಮತ್ತು ಅಂಗನವಾಡಿಗಳಿಗೆ ಪೂರೈಕೆಯಾಗುವ ಕುಡಿಯುವ ನೀರನ್ನು ಎಫ್ಟಿಕೆ (FTK) ಕಿಟ್ ಮೂಲಕ ಪರೀಕ್ಷಿಸಬೇಕು. ಅಲ್ಲದೆ, ಶಾಲೆಗಳ ಸುತ್ತಮುತ್ತ ಇರುವ ಅಪಾಯಕಾರಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಕ್ಕಳ ಹಾಜರಾತಿ ಮತ್ತು ಪೋಷಕರ ಸಭೆ:
ಜೂನ್ 1ರಂದು ನಡೆಯಲಿರುವ ಶಾಲಾ ಪ್ರಾರಂಭೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಹಾಗೂ ಶಾಲಾಬಾಹ್ಯ ಮಕ್ಕಳನ್ನು ಮನವೊಲಿಸಿ ಶಾಲೆಗೆ ಸೇರಿಸುವ ಕಾರ್ಯವಾಗಬೇಕು. ಅಂಗನವಾಡಿಗಳಲ್ಲಿ ತಿಂಗಳ ಮೂರನೇ ಶನಿವಾರ ಹಾಗೂ ಶಾಲೆಗಳಲ್ಲಿ ತಿಂಗಳ ನಾಲ್ಕನೇ ಶನಿವಾರ ಕಡ್ಡಾಯವಾಗಿ ಪೋಷಕರ ಸಭೆ ನಡೆಸಬೇಕು ಎಂದು ತಿಳಿಸಿದರು.
ವಸತಿ ನಿಲಯಗಳ ಭದ್ರತೆ ಮತ್ತು ಆನ್ಲೈನ್ ತರಗತಿ:
ಎಲ್ಲಾ ವಸತಿ ನಿಲಯಗಳಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಳೆದ ಸಾಲಿನಂತೆ ಈ ವರ್ಷವೂ ಸಂಜೆಯ ವೇಳೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಮುಂದುವರಿಸಬೇಕು ಎಂದು ಸೂಚನೆ ನೀಡಿದರು.
ವನಮಹೋತ್ಸವ ಆಚರಣೆ:
ಪರಿಸರ ಜಾಗೃತಿಯ ಭಾಗವಾಗಿ ಶಾಲೆ, ಅಂಗನವಾಡಿ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವನಮಹೋತ್ಸವವನ್ನು ಸಸಿಗಳನ್ನು ನೆಡುವ ಮೂಲಕ ಅದ್ದೂರಿಯಾಗಿ ಆಚರಿಸಬೇಕು ಎಂದು ಕರೆ ನೀಡಿದರು.
ಈ ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಉಪ ಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

