शिरोली-अबनाळी परिसरात हत्तींचा धुमाकूळ; केळी बागेचे मोठ्या प्रमाणावर नुकसान | ಶಿರೋಳಿ–ಆಬನಾಳಿಯಲ್ಲಿ ಕಾಡಾನೆಗಳ ಹಾವಳಿ; ಬಾಳೆ ತೋಟಕ್ಕೆ ಭಾರಿ ಹಾನಿ
खानापूर तालुकातील सहभागी मखर पाहण्यासाठी खालील लिंक वर क्लिक करा👇https://www.instagram.com/khanapurvarta?stkn=Z2xqcGx3YW90bzgx
खानापूर : खानापूर वन उपविभागात गेल्या आठवडाभरापासून हत्तींचा कळप ठाण मांडून असल्याने वन विभागाची चांगलीच तारांबळ उडाली आहे. हत्तींच्या कळपाला पुन्हा जंगलात हाकलण्यासाठी वन अधिकाऱ्यांकडून रात्रभर कोम्बिंग ऑपरेशन राबवले जात असतानाच, शिरोली- अबनाळी परिसरात रात्री हत्तींनी केळी बागेचे मोठ्या प्रमाणावर नुकसान केले.

हत्तींच्या कळपाने शेतात घुसून केळीची झाडे उन्मळून टाकली असून, बागेचे मोठे नुकसान झाले आहे. हत्तींच्या सततच्या संचारामुळे परिसरातील शेतकऱ्यांमध्ये भीतीचे वातावरण निर्माण झाले आहे.
खानापूर वन उपविभागातील पाली, हेम्मडगा, आबनाळी, डोंगरगाव आणि शिरोळीवाडा परिसरात हत्तींचा कळप फिरत असून, या कळपात सुमारे नऊ हत्ती असल्याचे वन विभागाच्या निदर्शनास आले आहे. हत्तींच्या हालचालींवर वन विभागाकडून ड्रोनच्या माध्यमातून तसेच वन कर्मचाऱ्यांची नियुक्ती करून लक्ष ठेवण्यात येत आहे.

पिकांचे नुकसान झालेल्या शेतकऱ्यांची माहिती गोळा करण्यात येत असून, नियमानुसार नुकसानभरपाई देण्यात येणार असल्याचे वन विभागाने सांगितले आहे. ग्रामस्थांनी हत्तींच्या जवळ जाऊ नये तसेच स्वतःहून त्यांना हाकलण्याचा प्रयत्न करू नये, असे आवाहन करण्यात आले आहे.
ಶಿರೋಳಿ–ಆಬನಾಳಿಯಲ್ಲಿ ಕಾಡಾನೆಗಳ ಹಾವಳಿ; ಬಾಳೆ ತೋಟಕ್ಕೆ ಭಾರಿ ಹಾನಿ
ಖಾನಾಪುರ: ಖಾನಾಪುರ ಅರಣ್ಯ ಉಪವಿಭಾಗದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ ವೇಳೆ ನಿರಂತರವಾಗಿ ಕಾಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ, ಶಿರೋಳಿ–ಆಬನಾಳಿ ಪ್ರದೇಶದಲ್ಲಿ ರಾತ್ರಿ ಕಾಡಾನೆಗಳು ಬಾಳೆ ತೋಟಕ್ಕೆ ವ್ಯಾಪಕ ಹಾನಿ ಮಾಡಿವೆ.
ಕಾಡಾನೆಗಳ ಹಿಂಡು ಹೊಲಕ್ಕೆ ನುಗ್ಗಿ ಬಾಳೆ ಗಿಡಗಳನ್ನು ತುಳಿದು, ಮುರಿದು ನಾಶಪಡಿಸಿದ್ದು, ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಕಾಡಾನೆಗಳ ನಿರಂತರ ಸಂಚಾರದಿಂದ ಈ ಭಾಗದ ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಖಾನಾಪುರ ಅರಣ್ಯ ಉಪವಿಭಾಗದ ಪಾಲಿ, ಹೆಮ್ಮಡಗಾ, ಆಬನಾಳಿ, ಡೋಂಗರ್ಗಾಂವ್ ಹಾಗೂ ಶಿರೋಳಿವಾಡಾ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದೆ. ಹಿಂಡಿನಲ್ಲಿ ಸುಮಾರು ಒಂಬತ್ತು ಕಾಡಾನೆಗಳಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದೆ.
ಕಾಡಾನೆಗಳನ್ನು ಕಾಡಿಗೆ ಮರಳಿ ಅಟ್ಟಲು ಅರಣ್ಯ ಅಧಿಕಾರಿಗಳು ರಾತ್ರಿ ವೇಳೆ ಕಾಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರೋನ್ಗಳ ಮೂಲಕ ಹಾಗೂ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಅವುಗಳ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.
ಬೆಳೆ ಹಾನಿಗೊಳಗಾದ ರೈತರ ಮಾಹಿತಿಯನ್ನು ಅರಣ್ಯ ಇಲಾಖೆ ಸಂಗ್ರಹಿಸುತ್ತಿದ್ದು, ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆಗಳು ಕಾಣಿಸಿಕೊಂಡಾಗ ಅವುಗಳ ಸಮೀಪ ಹೋಗುವುದು, ಗದ್ದಲ ಮಾಡುವುದು ಅಥವಾ ಸ್ವಯಂಪ್ರೇರಿತವಾಗಿ ಅವುಗಳನ್ನು ಓಡಿಸಲು ಪ್ರಯತ್ನಿಸುವುದು ಬೇಡ ಎಂದು ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಮನವಿ ಮಾಡಿದೆ.
