खानापूर श्री महालक्ष्मी शुगर्सकडून (लैला) उसाला प्रतिटन 4 हजार रुपये दर जाहीर; चार हप्त्यांत होणार भुगतान | ಖಾನಾಪುರ ಶ್ರೀ ಮಹಾಲಕ್ಷ್ಮೀ ಶುಗರ್ಸ್ನಿಂದ ಕಬ್ಬಿಗೆ ಪ್ರತಿ ಟನ್ಗೆ ₹4,000 ದರ ಘೋಷಣೆ; ನಾಲ್ಕು ಹಂತಗಳಲ್ಲಿ ಹಣ ಪಾವತಿ
खानापूरवार्ता
खानापूर, ता. २३ : सन २०२६-२७ च्या ऊस गाळप हंगामासाठी खानापूर श्री महालक्ष्मी शुगर्स कारखान्याने ऊस उत्पादक शेतकऱ्यांना प्रतिटन ४ हजार रुपये दर जाहीर केला आहे. या रकमेचे भुगतान चार हप्त्यांत करण्यात येणार असल्याची माहिती कारखान्याचे व्यवस्थापकीय संचालक सदानंद पाटील यांनी पत्रकार परिषदेत दिली.

कारखान्याने जाहीर केलेल्या दरानुसार, पहिल्या हप्त्यात प्रतिटन ४०० रुपये, दुसऱ्या हप्त्यात ३ हजार ४०० रुपये, तिसऱ्या हप्त्यात १०० रुपये आणि चौथ्या व अंतिम हप्त्यात १०० रुपये असे एकूण प्रतिटन ४ हजार रुपये शेतकऱ्यांना मिळणार आहेत.
पहिल्या हप्त्याची प्रतिटन ४०० रुपयांची रक्कम शेतकऱ्यांच्या खात्यावर दररोज जमा करण्यात येणार आहे. दुसऱ्या हप्त्याची प्रतिटन ३ हजार ४०० रुपयांची रक्कम दर १५ दिवसांनी जमा केली जाणार आहे. तिसऱ्या हप्त्याचे प्रतिटन १०० रुपये गणेश चतुर्थी सणाच्या वेळी, तर चौथ्या व अंतिम हप्त्याचे प्रतिटन १०० रुपये नंतर अदा करण्यात येणार आहेत.
दरम्यान, सरासरी साखरेचा दर प्रतिकिलो ५० रुपयांपेक्षा अधिक असल्यास अंतिम हप्त्याची रक्कम २०२७-२८ चा गाळप हंगाम सुरू होण्यापूर्वी अदा करण्यात येणार असल्याचे कारखाना व्यवस्थापनाने स्पष्ट केले आहे.
खानापूर परिसरातील सर्व ऊस उत्पादक शेतकरी बांधवांनी सन २०२६-२७ च्या गाळप हंगामात आपला संपूर्ण ऊस खानापूर श्री महालक्ष्मी शुगर्स कारखान्याला पुरवठा करून सहकार्य करावे, असे आवाहन कारखाना व्यवस्थापनाकडून करण्यात आले आहे.
ऊस उत्पादक शेतकऱ्यांना प्रतिटन ४ हजार रुपये दर जाहीर झाल्याने यंदाच्या गाळप हंगामात कारखान्याच्या ऊस खरेदी व भुगतान व्यवस्थेकडे शेतकऱ्यांचे लक्ष लागले आहे.
ಖಾನಾಪುರ ಶ್ರೀ ಮಹಾಲಕ್ಷ್ಮೀ ಶುಗರ್ಸ್ನಿಂದ ಕಬ್ಬಿಗೆ ಪ್ರತಿ ಟನ್ಗೆ ₹4,000 ದರ ಘೋಷಣೆ; ನಾಲ್ಕು ಹಂತಗಳಲ್ಲಿ ಹಣ ಪಾವತಿ
ಖಾನಾಪುರ ವಾರ್ತೆ
ಖಾನಾಪುರ, ನ. 23: 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗಾಗಿ ಖಾನಾಪುರ ಶ್ರೀ ಮಹಾಲಕ್ಷ್ಮೀ ಶುಗರ್ಸ್ ಕಾರ್ಖಾನೆಯು ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹4,000 ದರ ನೀಡುವುದಾಗಿ ಘೋಷಿಸಿದೆ. ಈ ಮೊತ್ತವನ್ನು ನಾಲ್ಕು ಹಂತಗಳಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಖಾನೆ ಘೋಷಿಸಿರುವ ದರದ ಪ್ರಕಾರ, ಮೊದಲ ಹಂತದಲ್ಲಿ ಪ್ರತಿ ಟನ್ಗೆ ₹400, ಎರಡನೇ ಹಂತದಲ್ಲಿ ₹3,400, ಮೂರನೇ ಹಂತದಲ್ಲಿ ₹100 ಹಾಗೂ ನಾಲ್ಕನೇ ಮತ್ತು ಅಂತಿಮ ಹಂತದಲ್ಲಿ ₹100 ಪಾವತಿಸಲಾಗುವುದು. ಈ ಮೂಲಕ ಒಟ್ಟು ಪ್ರತಿ ಟನ್ಗೆ ₹4,000 ದೊರೆಯಲಿದೆ.
ಮೊದಲ ಹಂತದ ₹400 ಹಣವನ್ನು ರೈತರ ಖಾತೆಗಳಿಗೆ ಪ್ರತಿದಿನ ಜಮಾ ಮಾಡಲಾಗುವುದು. ಎರಡನೇ ಹಂತದ ₹3,400 ಮೊತ್ತವನ್ನು ಪ್ರತಿ 15 ದಿನಗಳಿಗೊಮ್ಮೆ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು. ಮೂರನೇ ಹಂತದ ₹100 ಹಣವನ್ನು ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಹಾಗೂ ನಾಲ್ಕನೇ ಮತ್ತು ಅಂತಿಮ ಹಂತದ ₹100 ಹಣವನ್ನು ನಂತರ ಪಾವತಿಸಲಾಗುವುದು ಎಂದು ತಿಳಿಸಲಾಗಿದೆ.
ಇದಲ್ಲದೆ, ಸಕ್ಕರೆಯ ಸರಾಸರಿ ಮಾರಾಟ ದರ ಪ್ರತಿ ಕೆ.ಜಿ.ಗೆ ₹50ಕ್ಕಿಂತ ಹೆಚ್ಚಾದಲ್ಲಿ ಅಂತಿಮ ಹಂತದ ಹಣವನ್ನು 2027-28ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಮುನ್ನ ಪಾವತಿಸಲಾಗುವುದು ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದೆ.
ಖಾನಾಪುರ ಸುತ್ತಮುತ್ತಲಿನ ಎಲ್ಲ ಕಬ್ಬು ಬೆಳೆಗಾರರು 2026-27ನೇ ಸಾಲಿನ ಹಂಗಾಮಿನಲ್ಲಿ ತಮ್ಮ ಸಂಪೂರ್ಣ ಕಬ್ಬನ್ನು ಖಾನಾಪುರ ಶ್ರೀ ಮಹಾಲಕ್ಷ್ಮೀ ಶುಗರ್ಸ್ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕೆಂದು ಕಾರ್ಖಾನೆ ಆಡಳಿತ ಮಂಡಳಿ ಮನವಿ ಮಾಡಿದೆ.
ಕಬ್ಬಿಗೆ ಪ್ರತಿ ಟನ್ಗೆ ₹4,000 ದರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹಂಗಾಮಿನಲ್ಲಿ ರೈತರು ಮತ್ತು ಕಾರ್ಖಾನೆಯ ನಡುವಿನ ಕಬ್ಬು ಪೂರೈಕೆ ಹಾಗೂ ಹಣ ಪಾವತಿ ಪ್ರಕ್ರಿಯೆಯತ್ತ ಎಲ್ಲರ ಗಮನ ಹರಿದಿದೆ.