खानापूर: नदीत पाय घसरून पडल्याने शेतकऱ्याचा दुर्दैवी मृत्यू; शेडेगाळी गावावर शोककळा | ಖಾನಾಪುರ: ನದಿಗೆ ಬಿದ್ದು ರೈತ ದುರ್ಮರಣ; ಶೆಡೇಗಾಳಿ ಗ್ರಾಮದಲ್ಲಿ ಶೋಕಸಾಗರ
खानापूर: शेतीला पाणी देण्यासाठी गेलेल्या एका 48 वर्षीय शेतकऱ्याचा नदीत बुडून मृत्यू झाल्याची हृदयद्रावक घटना खानापूर तालुक्यातील शेडेगाळी गावात शुक्रवारी (दि. 20) सकाळी घडली. देवाप्पा महादेव गुरव (वय 48) असे या दुर्दैवी शेतकऱ्याचे नाव आहे. या घटनेमुळे संपूर्ण परिसरात हळहळ व्यक्त होत आहे.
नेमकी घटना काय?
मिळालेल्या माहितीनुसार, देवाप्पा गुरव हे सकाळी आपल्या मुलासह शेतात पाणी सोडण्यासाठी गेले होते. मुलगा पंपसेट सुरू करून काही घरगुती कामासाठी घरी परतला होता. दरम्यान, वीजपुरवठा खंडित झाल्याने पंप बंद पडला. काही वेळाने वीज परत आल्यावर पंप पुन्हा सुरू करण्यासाठी देवाप्पा नदीकाठी गेले. मात्र, काठावर पाय घसरल्याने त्यांचा तोल गेला आणि ते थेट हालात्री नदीच्या खोल पात्रात पडले. त्यांना पोहता येत नसल्याने त्यांचा जागीच बुडून मृत्यू झाला.
असा लागला शोध
वडील बराच वेळ घरी न परतल्याने आणि मोबाईलला प्रतिसाद मिळत नसल्याने मुलाने शेतात धाव घेतली. तिथे शोध घेतला असता नदीकाठी पाय घसरल्याच्या खुणा दिसून आल्या. त्यानंतर तात्काळ ग्रामस्थांना आणि पोलिसांना पाचारण करण्यात आले. खानापूर पोलीस आणि अग्निशामक दलाच्या जवानांनी स्थानिक ग्रामस्थांच्या मदतीने तीन तास शोधमोहीम राबवली. अखेर दुपारी देवाप्पा यांचा मृतदेह बाहेर काढण्यात यश आले.
शोकाकुल वातावरणात अंत्यसंस्कार
खानापूर येथील प्राथमिक आरोग्य केंद्रात उत्तरीय तपासणी केल्यानंतर मृतदेह नातेवाईकांच्या स्वाधीन करण्यात आला. रात्री ९:०० वाजण्याच्या सुमारास शेडेगाळी गावात शोकाकुल वातावरणात त्यांच्यावर अंत्यसंस्कार करण्यात आले. देवाप्पा गुरव यांच्या पश्चात पत्नी, एक मुलगा आणि दोन मुली असा परिवार आहे. एका कष्टाळू कुटुंबप्रमुखाच्या जाण्याने गुरव कुटुंबावर डोंगर कोसळला आहे.
ಖಾನಾಪುರ: ನದಿಗೆ ಬಿದ್ದು ರೈತ ದುರ್ಮರಣ; ಶೆಡೇಗಾಳಿ ಗ್ರಾಮದಲ್ಲಿ ಶೋಕಸಾಗರ
ಖಾನಾಪುರ:
ಹೊಲಕ್ಕೆ ನೀರು ಹರಿಸಲು ಹೋಗಿದ್ದ 48 ವರ್ಷದ ರೈತರೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆ ಖಾನಾಪುರ ತಾಲ್ಲೂಕಿನ ಶೆಡೇಗಾಳಿ ಗ್ರಾಮದಲ್ಲಿ ಶುಕ್ರವಾರ (ಮಾ. 20) ಸಂಭವಿಸಿದೆ. ಮೃತರನ್ನು ದೇವಾಪ್ಪ ಮಹಾದೇವ ಗುರವ್ (48) ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ಘಟನೆಯ ವಿವರ:
ಶುಕ್ರವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ದೇವಾಪ್ಪ ಅವರು ತಮ್ಮ ಮಗನೊಂದಿಗೆ ಹೊಲಕ್ಕೆ ನೀರು ಬಿಡಲು ಹೋಗಿದ್ದರು. ಮಗ ಪಂಪ್ಸೆಟ್ ಚಾಲನೆ ಮಾಡಿ ಮನೆಗೆ ಮರಳಿದ್ದನು. ಈ ನಡುವೆ ವಿದ್ಯುತ್ ಸ್ಥಗಿತಗೊಂಡು ಪಂಪ್ ಆಫ್ ಆಗಿತ್ತು. ಮರಳಿ ವಿದ್ಯುತ್ ಬಂದಾಗ ಪಂಪ್ ಆರಂಭಿಸಲು ದೇವಾಪ್ಪ ಅವರು ನದಿಯ ದಡಕ್ಕೆ ತೆರಳಿದ್ದರು. ಈ ವೇಳೆ ದಡದಲ್ಲಿ ಕಾಲು ಜಾರಿ ನೇರವಾಗಿ ಹಲಾತ್ರಿ ನದಿಯ ಆಳವಾದ ನೀರಿಗೆ ಬಿದ್ದಿದ್ದಾರೆ. ಅವರಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಪತ್ತೆಯಾದ ಶವ:
ತಂದೆ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ ಮತ್ತು ಮೊಬೈಲ್ ಕರೆಗೆ ಸ್ಪಂದಿಸದಿದ್ದಾಗ ಮಗ ಹೊಲಕ್ಕೆ ಧಾವಿಸಿದ್ದಾನೆ. ಅಲ್ಲಿ ತಂದೆ ಕಾಣಿಸದಿದ್ದಾಗ ನದಿಯ ದಡದಲ್ಲಿ ಕಾಲು ಜಾರಿದ ಗುರುತುಗಳು ಕಂಡುಬಂದಿವೆ. ತಕ್ಷಣವೇ ಗ್ರಾಮಸ್ಥರು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಖಾನಾಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಅಂತ್ಯಕ್ರಿಯೆ:
ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ರಾತ್ರಿ 9 ಗಂಟೆಗೆ ಶೆಡೇಗಾಳಿ ಗ್ರಾಮದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಷ್ಟಜೀವಿ ರೈತನ ಅಕಾಲಿಕ ನಿಧನಕ್ಕೆ ಇಡೀ ತಾಲೂಕಿನ ಜನತೆ ಸಂತಾಪ ಸೂಚಿಸಿದ್ದಾರೆ.
