कारगिल शहीद वीर जवान धोंडिबा देसाई यांच्या पुतळ्याची भव्य मिरवणूक! | ಕಾರ್ಗಿಲ್ ಹುತಾತ್ಮ ವೀರ ಯೋಧ ಧೋಂಡಿಬಾ ದೇಸಾಯಿ ಅವರ ಭವ್ಯ ಪುತ್ಥಳಿ ಮೆರವಣಿಗೆ!
बेळगाव: देशाच्या रक्षणासाठी कारगिल युद्धात आपल्या प्राणांची आहुती देणारे वीर सुपुत्र शहीद धोंडिबा देसाई यांच्या स्मृतीप्रीत्यर्थ बेळगावमधील अनगोळ ते जांबोटी (वडगाव) पर्यंत त्यांच्या पुतळ्याची भव्य मिरवणूक काढण्यात आली.
कारगिल युद्धाला २५ वर्षे पूर्ण झाल्याच्या निमित्ताने, त्यांच्या बलिदानाचे स्मरण कायम राहावे या उद्देशाने ग्रामस्थ, कुटुंबिय आणि माजी सैनिकांनी एकत्र येऊन गावाच्या प्रवेशद्वारावर शहीद जवानाचा भव्य पुतळा उभारण्याचा निर्णय घेतला आहे. या पुतळ्याची मिरवणूक आज सकाळी अनगोळ येथून पिरनवाडी-किणये मार्गे जांबोटी-वडगावपर्यंत उत्साहात काढण्यात आली.
या कार्यक्रमात माजी आमदार अरविंद पाटील यांच्यासह अनेक मान्यवर आणि माजी सैनिकांनी उपस्थित राहून वीर जवानाच्या बलिदानाला भावपूर्ण श्रद्धांजली वाहिली. यावेळी बोलताना अरविंद पाटील यांनी शहीद धोंडिबा देसाई यांच्या शौर्याचे कौतुक केले. दरम्यान, या पुतळ्याचे अनावरण केंद्रीय संरक्षण मंत्री राजनाथ सिंह यांच्या हस्ते लवकरच होणार असल्याची माहिती संयोजकांनी दिली.

ಬೆಳಗಾವಿ: ಕಾರ್ಗಿಲ್ ಹುತಾತ್ಮ ವೀರ ಯೋಧ ಧೋಂಡಿಬಾ ದೇಸಾಯಿ ಅವರ ಭವ್ಯ ಪುತ್ಥಳಿ ಮೆರವಣಿಗೆ!
ಬೆಳಗಾವಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕಾರ್ಗಿಲ್ ಯುದ್ಧದ ವೀರ ಸುಪುತ್ರ, ಹುತಾತ್ಮ ಯೋಧ ಧೋಂಡಿಬಾ ದೇಸಾಯಿ ಅವರ ಸ್ಮರಣಾರ್ಥವಾಗಿ ಬೆಳಗಾವಿಯ ಅನಗೋಳದಿಂದ ಖಾನಾಪುರ ತಾಲೂಕಿನ ಜಾಂಬೋಟಿ-ವಡಗಾಂವವರೆಗೆ ಭವ್ಯ ಪುತ್ಥಳಿ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಧೋಂಡಿಬಾ ದೇಸಾಯಿ ಅವರು ವೀರಮರಣ ಅಪ್ಪಿ 25 ವರ್ಷಗಳು ಸಂದಿವೆ. ಅವರ ತ್ಯಾಗ ಮತ್ತು ಬಲಿದಾನವನ್ನು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಸಲು ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಮಾಜಿ ಸೈನಿಕರು ಒಗ್ಗೂಡಿ, ಗ್ರಾಮದ ಪ್ರವೇಶದ್ವಾರದಲ್ಲಿ ಪುತ್ಥಳಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅನಗೋಳದಿಂದ ಪೀರಣವಾಡಿ-ಕಿಣಯೇ ಮಾರ್ಗವಾಗಿ ಜಾಂಬೋಟಿಯವರೆಗೆ ಪುತ್ಥಳಿಯ ಭವ್ಯ ಮೆರವಣಿಗೆ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಅರವಿಂದ ಪಾಟೀಲ್ ಅವರು ವೀರಯೋಧನಿಗೆ ಭಾವಪೂರ್ಣ ನಮನ ಸಲ್ಲಿಸಿ, ಅವರ ದೇಶಪ್ರೇಮವನ್ನು ಶ್ಲಾಘಿಸಿದರು. ಈ ಪುತ್ಥಳಿಯನ್ನು ಶೀಘ್ರದಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಅನಾವರಣಗೊಳಿಸಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
