मुगळीहाळ येथे रावसाहेब वागळे महाविद्यालयाची तालुकास्तरीय क्रीडा स्पर्धेत दमदार कामगिरी | ಮುಗಳಿಹಾಳದಲ್ಲಿ ರಾವಸಾಹೇಬ ವಾಗಳೆ ಕಾಲೇಜಿನ ಕ್ರೀಡಾ ಕ್ಷೇತ್ರದಲ್ಲಿ ಭರ್ಜರಿ ಸಾಧನೆ
मुगळीहाळ (ता. खानापूर) : मुगळीहाळ येथे नुकत्याच पार पडलेल्या तालुकास्तरीय पदवीपूर्व महाविद्यालयीन क्रीडा स्पर्धेत खानापूर येथील रावसाहेब वागळे पदवीपूर्व महाविद्यालयाच्या विद्यार्थ्यांनी उल्लेखनीय यश संपादन केले.
सांघिक प्रकारात महाविद्यालयाच्या मुलांच्या कबड्डी संघाने प्रथम क्रमांक, तर मुलींच्या खो-खो संघाने द्वितीय क्रमांक पटकावला.

वैयक्तिक क्रीडा प्रकारात कु. ज्ञानदेव शिंदे यांनी ३००० मीटर धावणे तसेच ५००० मीटर क्रॉस कंट्री धावण्याच्या प्रकारात प्रथम क्रमांक मिळवला. कु. परशुराम गावडे यांनी ५००० मीटर धावण्यात पाचवा क्रमांक, कु. प्रज्वल सावंत यांनी गोळाफेकमध्ये प्रथम क्रमांक, तर कु. इंदू गावडे यांनी ४०० मीटर धावण्यात द्वितीय क्रमांक मिळवला.
या सर्व यशस्वी विद्यार्थ्यांची जिल्हास्तरीय क्रीडा स्पर्धेसाठी निवड झाली आहे.
विद्यार्थ्यांना महाविद्यालयाच्या प्राचार्या सौ. शरयू कदम, क्रीडा प्रशिक्षक प्रा. शंकर गावडा तसेच संदीप पाटील, गुंडू कोडला, डी. व्ही. पाटील, इमिलिया फर्नांडिस, सोनी गुंजीकर, रेणुका पाटील आणि खेमराज गडकरी यांचे मार्गदर्शन लाभले.
महाविद्यालयाच्या या उल्लेखनीय कामगिरीबद्दल संस्थेचे चेअरमन, संचालक, सेक्रेटरी व सर्व पदाधिकाऱ्यांनी यशस्वी विद्यार्थी आणि क्रीडा विभागाचे अभिनंदन करून जिल्हास्तरीय स्पर्धेसाठी शुभेच्छा दिल्या.
ಕನ್ನಡ ಸುದ್ದಿ
ಮುಗಳಿಹಾಳದಲ್ಲಿ ರಾವಸಾಹೇಬ ವಾಗಳೆ ಕಾಲೇಜಿನ ಕ್ರೀಡಾ ಕ್ಷೇತ್ರದಲ್ಲಿ ಭರ್ಜರಿ ಸಾಧನೆ
ಮುಗಳಿಹಾಳ (ಖಾನಾಪುರ ತಾಲೂಕು) : ಮುಗಳಿಹಾಳದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಖಾನಾಪುರದ ರಾವಸಾಹೇಬ ವಾಗಳೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಾಮೂಹಿಕ ಕ್ರೀಡಾ ವಿಭಾಗದಲ್ಲಿ ಕಾಲೇಜಿನ ಬಾಲಕರ ಕಬಡ್ಡಿ ತಂಡವು ಪ್ರಥಮ ಸ್ಥಾನ, ಬಾಲಕಿಯರ ಖೋ-ಖೋ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ ಕು. ಜ್ಞಾನದೆವ ಶಿಂಧೆ ಅವರು 3000 ಮೀಟರ್ ಓಟ ಹಾಗೂ 5000 ಮೀಟರ್ ಕ್ರಾಸ್ ಕಂಟ್ರಿ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕು. ಪರಶುರಾಮ ಗಾವಡೆ ಅವರು 5000 ಮೀಟರ್ ಓಟದಲ್ಲಿ ಐದನೇ ಸ್ಥಾನ, ಕು. ಪ್ರಜ್ವಲ ಸಾವಂತ್ ಅವರು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ಕು. ಇಂದು ಗಾವಡೆ ಅವರು 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲ ಸಾಧಕ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಶರಯೂ ಕದಂ, ಕ್ರೀಡಾ ತರಬೇತುದಾರ ಪ್ರಾ. ಶಂಕರ ಗಾವಡಾ ಸೇರಿದಂತೆ ಸಂದೀಪ ಪಾಟೀಲ, ಗುಂಡು ಕೊಡ್ಲಾ, ಡಿ.ವಿ. ಪಾಟೀಲ, ಎಮಿಲಿಯಾ ಫರ್ನಾಂಡಿಸ್, ಸೋನಿ ಗುಂಜೀಕರ, ರೇಣುಕಾ ಪಾಟೀಲ ಹಾಗೂ ಖೇಮರಾಜ ಗಡ್ಕರಿ ಅವರ ಮಾರ್ಗದರ್ಶನ ದೊರೆಯಿತು.
ಕಾಲೇಜಿನ ಈ ಗಮನಾರ್ಹ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಸಾಧಕ ವಿದ್ಯಾರ್ಥಿಗಳು ಮತ್ತು ಕ್ರೀಡಾ ವಿಭಾಗವನ್ನು ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
