खानापूर को-ऑप बँकेची यशस्वी वाटचाल; 104 वा वार्षिक अहवाल प्रसिद्ध; 21 सप्टेंबर रोजी वार्षिक सर्वसाधारण सभा | ಖಾನಾಪುರ ಕೋ-ಆಪ್ ಬ್ಯಾಂಕಿನ ಯಶಸ್ವಿ ಪಯಣ; 104ನೇ ವಾರ್ಷಿಕ ವರದಿ ಪ್ರಕಟ; ಸೆಪ್ಟೆಂಬರ್ 21ರಂದು ವಾರ್ಷಿಕ ಸರ್ವಸಾಧಾರಣ ಸಭೆ
खानापूर : शतकाहून अधिक काळाची गौरवशाली परंपरा लाभलेल्या दि खानापूर को-ऑपरेटिव्ह बँक लि., खानापूर या बँकेने आर्थिक वर्ष 2025-26 मध्ये उल्लेखनीय आर्थिक प्रगती साधली असून, बँकेला 99 लाख 23 हजार 823 रुपये 64 पैसे निव्वळ नफा झाला आहे.

बँकेचा 104 वा वार्षिक अहवाल प्रसिद्ध झाला असून, त्यानिमित्ताने सोमवार, 21 सप्टेंबर 2026 रोजी सकाळी 11.30 वाजता खानापूर-जांबोटी रोडवरील रामगुरवाडी क्रॉस येथील ओंकार शुभम गार्डन मंगल कार्यालयात वार्षिक सर्वसाधारण सभा आयोजित करण्यात आली आहे.
बँकेचे अध्यक्ष अमृत शेलार यांनी बँकेच्या आर्थिक कामगिरीची माहिती दिली. जागतिक आर्थिक परिस्थितीतील आव्हानात्मक काळातही बँकेने आर्थिक स्थैर्य, पारदर्शक व्यवहार आणि सभासदांचा विश्वास कायम राखत चांगली कामगिरी केली असल्याचे त्यांनी सांगितले.
वार्षिक अहवालानुसार, बँकेकडे 14,376 सभासद असून, 3 कोटी 45 लाख 21 हजार 250 रुपयांचे भागभांडवल आहे. तसेच बँकेकडे 11 कोटी 94 लाख 17 हजार रुपयांचा राखीव निधी उपलब्ध आहे.
बँकेच्या एकूण ठेवी 88 कोटी 3 लाख 10 हजार रुपये असून, सभासद व ग्राहकांना 64 कोटी 34 लाख 73 हजार रुपयांचे कर्जवाटप करण्यात आले आहे. बँकेने 32 कोटी 58 लाख 34 हजार रुपयांची गुंतवणूक केली असून, बँकेचे एकूण खेळते भांडवल 111 कोटी 71 लाख 7 हजार रुपये इतके आहे.

सभासदांना लाभांश देण्याचा प्रस्ताव
बँकेच्या निव्वळ नफ्यातून विविध वैधानिक निधी, कर्मचारी ग्रॅच्युइटी फंड, इमारत निधी, गुंतवणूक घसारा निधी, कर्मचारी कल्याण निधी, सभासद कल्याण निधी व शताब्दी निधी आदींसाठी तरतूद करण्यात आली आहे.
तसेच ‘अ’ वर्ग सभासदांना 15 टक्के आणि ‘ब’ वर्ग सभासदांना 8 टक्के लाभांश देण्याचा प्रस्ताव वार्षिक अहवालात मांडण्यात आला आहे. या नफा विभागणीस वार्षिक सर्वसाधारण सभेची मंजुरी घेण्यात येणार आहे.
सभासदाभिमुख विविध सुविधा
बँकेकडून आधुनिक बँकिंगच्या विविध सेवा उपलब्ध करून देण्यात आल्या असून, पारदर्शक व्यवहार आणि विश्वासार्हता ही बँकेची प्रमुख ओळख असल्याचे अध्यक्ष अमृत शेलार यांनी सांगितले. बँकेत सेफ डिपॉझिट लॉकरची सुविधा उपलब्ध आहे.
वयाची 60 वर्षे पूर्ण झालेल्या तसेच 40 वर्षांहून अधिक काळ बँकेचे सभासद असलेल्या सभासदांना वार्षिक 1,000 रुपये मानधन देण्यात येते. तसेच दहावी, बारावी व पदवी परीक्षेत गुणवत्ताप्राप्त विद्यार्थ्यांचा गौरव करण्याची परंपराही बँकेने कायम ठेवली आहे.
सात शाखांमधून बँकेची प्रगती
बँकेचे मुख्य कार्यालय खानापूर येथे असून, खानापूर, नंदगड, टिळकवाडी, बिडी, पारिशवाड आणि काकतीवेस, बेळगाव येथे शाखा कार्यरत आहेत. सर्व शाखांनी आर्थिक वर्ष 2025-26 मध्ये उल्लेखनीय प्रगती साधली असल्याचे वार्षिक अहवालात नमूद करण्यात आले आहे.
सभेत विविध विषयांवर चर्चा
21 सप्टेंबर रोजी होणाऱ्या वार्षिक सर्वसाधारण सभेत मागील सभेचे इतिवृत्त कायम करणे, 2025-26 चा संचालक मंडळाचा अहवाल, नफा-तोटा पत्रक व ताळेबंद मंजूर करणे, वैधानिक लेखापरीक्षण अहवालाचा विचार करणे, नफा विभागणीस मंजुरी देणे, तसेच 2026-27 चे अंदाजपत्रक व कामकाजाची योजना मंजूर करणे आदी विषयांवर चर्चा होणार आहे.
याशिवाय बँकेच्या पोटनियमांमध्ये दुरुस्ती, नवीन सभासदांना मंजुरी, कर्मचारी नियुक्तीबाबत विचारविनिमय, सभासद व संचालकांनी बँकेकडून घेतलेल्या सेवांचा आढावा तसेच इतर वैधानिक विषय सभेत मांडण्यात येणार आहेत.
बँकेच्या सर्व सभासदांनी 21 सप्टेंबर रोजी सकाळी 11.30 वाजता सभास्थळी उपस्थित राहून आपली हजेरी नोंदवावी व सभेत सहभागी व्हावे, असे आवाहन अध्यक्ष अमृत शेलार, संचालक मंडळ व बँक प्रशासनाने केले आहे.
ಖಾನಾಪುರ ಕೋ-ಆಪರೇಟಿವ್ ಬ್ಯಾಂಕ್‌ಗೆ 99.23 ಲಕ್ಷ ರೂ. ನಿವ್ವಳ ಲಾಭ
104ನೇ ವಾರ್ಷಿಕ ವರದಿ ಪ್ರಕಟ; ಸೆ. 21ರಂದು ವಾರ್ಷಿಕ ಸರ್ವಸಾಧಾರಣ ಸಭೆ
ಖಾನಾಪುರ : ಶತಮಾನಕ್ಕೂ ಅಧಿಕ ಕಾಲದ ಗೌರವಯುತ ಪರಂಪರೆ ಹೊಂದಿರುವ ದಿ ಖಾನಾಪುರ ಕೋ-ಆಪರೇಟಿವ್ ಬ್ಯಾಂಕ್ ಲಿ., ಖಾನಾಪುರ ಬ್ಯಾಂಕ್ ಆರ್ಥಿಕ ವರ್ಷ 2025-26ರಲ್ಲಿ ಗಮನಾರ್ಹ ಆರ್ಥಿಕ ಪ್ರಗತಿ ಸಾಧಿಸಿದ್ದು, 99 ಲಕ್ಷ 23 ಸಾವಿರ 823 ರೂ. 64 ಪೈಸೆ ನಿವ್ವಳ ಲಾಭ ಗಳಿಸಿದೆ.
ಬ್ಯಾಂಕಿನ 104ನೇ ವಾರ್ಷಿಕ ವರದಿ ಪ್ರಕಟವಾಗಿದ್ದು, ಇದರ ಅಂಗವಾಗಿ ಸೋಮವಾರ, ಸೆಪ್ಟೆಂಬರ್ 21, 2026ರಂದು ಬೆಳಗ್ಗೆ 11.30ಕ್ಕೆ ಖಾನಾಪುರ-ಜಾಂಬೋಟಿ ರಸ್ತೆಯ ರಾಮಗುರುವಾಡಿ ಕ್ರಾಸ್ ಬಳಿಯ ಓಂಕಾರ ಶುಭಂ ಗಾರ್ಡನ್ ಮಂಗಳ ಕಾರ್ಯಾಲಯದಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ.
ಬ್ಯಾಂಕಿನ ಅಧ್ಯಕ್ಷ ಅಮೃತ ಶೇಲಾರ್ ಅವರು ಬ್ಯಾಂಕಿನ ಆರ್ಥಿಕ ಸಾಧನೆಯ ಕುರಿತು ಮಾಹಿತಿ ನೀಡಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿಯ ಸವಾಲುಗಳ ನಡುವೆಯೂ ಬ್ಯಾಂಕ್ ತನ್ನ ಆರ್ಥಿಕ ಸ್ಥಿರತೆ, ಪಾರದರ್ಶಕ ವ್ಯವಹಾರ ಮತ್ತು ಸದಸ್ಯರ ವಿಶ್ವಾಸವನ್ನು ಕಾಪಾಡಿಕೊಂಡು ಉತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ವಾರ್ಷಿಕ ವರದಿಯ ಪ್ರಕಾರ, ಬ್ಯಾಂಕಿನಲ್ಲಿ 14,376 ಸದಸ್ಯರು ಇದ್ದು, 3 ಕೋಟಿ 45 ಲಕ್ಷ 21 ಸಾವಿರ 250 ರೂ. ಷೇರು ಬಂಡವಾಳ ಹೊಂದಿದೆ. ಅಲ್ಲದೆ 11 ಕೋಟಿ 94 ಲಕ್ಷ 17 ಸಾವಿರ ರೂ. ಮೀಸಲು ನಿಧಿ ಲಭ್ಯವಿದೆ.
ಬ್ಯಾಂಕಿನ ಒಟ್ಟು ಠೇವಣಿಗಳು 88 ಕೋಟಿ 3 ಲಕ್ಷ 10 ಸಾವಿರ ರೂ. ಇದ್ದು, ಸದಸ್ಯರು ಹಾಗೂ ಗ್ರಾಹಕರಿಗೆ 64 ಕೋಟಿ 34 ಲಕ್ಷ 73 ಸಾವಿರ ರೂ. ಸಾಲ ವಿತರಣೆ ಮಾಡಲಾಗಿದೆ. ಬ್ಯಾಂಕ್ 32 ಕೋಟಿ 58 ಲಕ್ಷ 34 ಸಾವಿರ ರೂ. ಹೂಡಿಕೆ ಮಾಡಿದ್ದು, ಒಟ್ಟು ದುಡಿಯುವ ಬಂಡವಾಳ 111 ಕೋಟಿ 71 ಲಕ್ಷ 7 ಸಾವಿರ ರೂ. ಇದೆ.
ಸದಸ್ಯರಿಗೆ ಲಾಭಾಂಶ ನೀಡುವ ಪ್ರಸ್ತಾವ
ಬ್ಯಾಂಕಿನ ನಿವ್ವಳ ಲಾಭವನ್ನು ಕಾನೂನುಬದ್ಧ ನಿಯಮಗಳಂತೆ ವಿವಿಧ ನಿಧಿಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸ್ಟ್ಯಾಚ್ಯುಟರಿ ರಿಸರ್ವ್ ಫಂಡ್, ಸ್ಟೇಟ್ ಕೋ-ಆಪರೇಟಿವ್ ಎಜುಕೇಶನ್ ಫಂಡ್, ಅರ್ಬನ್ ಬ್ಯಾಂಕ್ ಫೆಡರೇಶನ್ ಎಜುಕೇಶನ್ ಫಂಡ್, ಸಿಬ್ಬಂದಿ ಗ್ರ್ಯಾಚ್ಯುಟಿ ಫಂಡ್, ಕಟ್ಟಡ ನಿಧಿ, ಹೂಡಿಕೆ ಮೌಲ್ಯಹ್ರಾಸ ನಿಧಿ, ಧರ್ಮಾದಾಯ ನಿಧಿ, ಸಿಬ್ಬಂದಿ ಕಲ್ಯಾಣ ನಿಧಿ, ಸದಸ್ಯರ ಕಲ್ಯಾಣ ನಿಧಿ ಹಾಗೂ ಶತಮಾನೋತ್ಸವ ನಿಧಿ ಮುಂತಾದವುಗಳಿಗೆ ಮೀಸಲಾತಿ ಮಾಡಲಾಗಿದೆ.
ಅಲ್ಲದೆ ‘ಎ’ ವರ್ಗದ ಸದಸ್ಯರಿಗೆ ಶೇ.15 ಹಾಗೂ ‘ಬಿ’ ವರ್ಗದ ಸದಸ್ಯರಿಗೆ ಶೇ.8 ಲಾಭಾಂಶ ನೀಡುವ ಪ್ರಸ್ತಾವವನ್ನು ವಾರ್ಷಿಕ ವರದಿಯಲ್ಲಿ ಮಂಡಿಸಲಾಗಿದೆ. ಈ ನಫಾ ಹಂಚಿಕೆಗೆ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು.
ಸದಸ್ಯರಿಗಾಗಿ ವಿವಿಧ ಸೌಲಭ್ಯಗಳು
ಬ್ಯಾಂಕ್ ಆಧುನಿಕ ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ಒದಗಿಸುತ್ತಿದ್ದು, ಪಾರದರ್ಶಕ ವ್ಯವಹಾರ ಮತ್ತು ವಿಶ್ವಾಸಾರ್ಹತೆ ಬ್ಯಾಂಕಿನ ಪ್ರಮುಖ ವೈಶಿಷ್ಟ್ಯಗಳಾಗಿವೆ ಎಂದು ಅಧ್ಯಕ್ಷ ಅಮೃತ ಶೇಲಾರ್ ತಿಳಿಸಿದ್ದಾರೆ. ಬ್ಯಾಂಕಿನಲ್ಲಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯ ಲಭ್ಯವಿದೆ.
60 ವರ್ಷ ಪೂರ್ಣಗೊಳಿಸಿದ ಹಾಗೂ 40 ವರ್ಷಕ್ಕೂ ಹೆಚ್ಚು ಕಾಲ ಬ್ಯಾಂಕಿನ ಸದಸ್ಯರಾಗಿರುವ ಸದಸ್ಯರಿಗೆ ವಾರ್ಷಿಕ 1,000 ರೂ. ಗೌರವಧನ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಪರಂಪರೆಯನ್ನೂ ಬ್ಯಾಂಕ್ ಮುಂದುವರಿಸಿಕೊಂಡು ಬಂದಿದೆ.
ಏಳು ಶಾಖೆಗಳ ಮೂಲಕ ಬ್ಯಾಂಕಿನ ಪ್ರಗತಿ
ಬ್ಯಾಂಕಿನ ಮುಖ್ಯ ಕಚೇರಿ ಖಾನಾಪುರದಲ್ಲಿದ್ದು, ಖಾನಾಪುರ, ನಂದಗಡ, ಟಿಳಕವಾಡಿ, ಬೀಡಿ, ಪಾರಿಶವಾಡ ಹಾಗೂ ಕಾಕತಿವೇಸ್, ಬೆಳಗಾವಿ ಇಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಶಾಖೆಗಳು ಆರ್ಥಿಕ ವರ್ಷ 2025-26ರಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ ಎಂದು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ
ಸೆಪ್ಟೆಂಬರ್ 21ರಂದು ನಡೆಯುವ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ ಅನುಮೋದನೆ, 2025-26ನೇ ಸಾಲಿನ ಆಡಳಿತ ಮಂಡಳಿಯ ವರದಿ, ಲಾಭ-ನಷ್ಟ ಪತ್ರಿಕೆ ಹಾಗೂ ತಾಳೆಪತ್ರ ಅನುಮೋದನೆ, ಶಾಸನಬದ್ಧ ಲೆಕ್ಕಪರಿಶೋಧನಾ ವರದಿ ಪರಿಶೀಲನೆ, ನಫಾ ಹಂಚಿಕೆಗೆ ಅನುಮೋದನೆ ಮತ್ತು 2026-27ನೇ ಸಾಲಿನ ಅಂದಾಜು ಪತ್ರಿಕೆ ಹಾಗೂ ಕಾರ್ಯಯೋಜನೆಗೆ ಅನುಮೋದನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಇದಲ್ಲದೆ ಬ್ಯಾಂಕಿನ ಬೈಲಾ ತಿದ್ದುಪಡಿ, ಹೊಸ ಸದಸ್ಯರಿಗೆ ಅನುಮೋದನೆ, ಸಿಬ್ಬಂದಿ ನೇಮಕಾತಿ ಕುರಿತು ಚರ್ಚೆ, ಸದಸ್ಯರು ಹಾಗೂ ನಿರ್ದೇಶಕರು ಬ್ಯಾಂಕಿನಿಂದ ಪಡೆದ ಸೇವೆಗಳ ಮರುಪರಿಶೀಲನೆ ಸೇರಿದಂತೆ ಇತರ ಕಾನೂನುಬದ್ಧ ವಿಷಯಗಳನ್ನೂ ಸಭೆಯಲ್ಲಿ ಮಂಡಿಸಲಾಗುವುದು.
ಬ್ಯಾಂಕಿನ ಎಲ್ಲ ಸದಸ್ಯರು ಸೆಪ್ಟೆಂಬರ್ 21ರಂದು ಬೆಳಗ್ಗೆ 11.30ಕ್ಕೆ ಸಭಾ ಸ್ಥಳಕ್ಕೆ ಆಗಮಿಸಿ ಹಾಜರಾತಿ ದಾಖಲಿಸಿ ಸಭೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಅಮೃತ ಶೇಲಾರ್, ಆಡಳಿತ ಮಂಡಳಿ ಹಾಗೂ ಬ್ಯಾಂಕ್ ಆಡಳಿತ ಮನವಿ ಮಾಡಿದೆ.

