खानापूर

खानापुरात विराट निषेध मोर्चा; पोरक्या मुलांसाठी अनेकांची मदत, माडीगुंजी शाळा बॅचकडून ₹25001 | ಖಾನಾಪುರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ; ಅನಾಥ ಮಕ್ಕಳ ನೆರವಿಗೆ ಮಾಢಿಗುಂಜಿ ಶಾಲೆಯ ಬ್ಯಾಚ್‌ನಿಂದ ₹25,001

आरोपीला फाशीची शिक्षा द्या; मुलांच्या भवितव्याची जबाबदारी शासनाने घ्यावी, अशी मागणी

खानापूर : सांगली जिल्ह्यातील कुपवाड येथे खानापूर तालुक्यातील हेब्बाळ गावचे मूळ रहिवासी मोहन केसरेकर व त्यांच्या पत्नी मनीषा केसरेकर यांच्यावर झालेल्या प्राणघातक हल्ल्यात दोघांचाही दुर्दैवी मृत्यू झाल्याने संपूर्ण खानापूर तालुक्यात संतापाची लाट उसळली आहे. या दुहेरी हत्याकांडाच्या निषेधार्थ गुरुवारी खानापूर येथे विविध हिंदू संघटना, सामाजिक कार्यकर्ते, नागरिक, महिला, युवक व ग्रामस्थांच्या वतीने भव्य निषेध मोर्चा काढण्यात आला.  या घटनेत केसरेकर दाम्पत्याच्या मृत्यूमुळे त्यांची दोन मुले पोरकी झाली आहेत. त्यामुळे आरोपीला कठोरात कठोर, फाशीची शिक्षा द्यावी, तसेच आई-वडिलांचे छत्र हरपलेल्या मुलांच्या शिक्षणासह त्यांच्या भविष्यातील संगोपनाची जबाबदारी शासनाने घ्यावी, अशी मागणी मोर्चातून करण्यात आली. यापूर्वीही विविध ठिकाणी झालेल्या आंदोलनांमध्ये मुलांच्या पुनर्वसनाची मागणी करण्यात आली आहे. मोर्चाची सुरुवात खानापूर येथील श्री लक्ष्मी मंदिरापासून झाली. घोडे गल्ली, स्टेशन रोड मार्गे मोर्चा शिवस्मारक सर्कल येथे पोहोचला. याठिकाणी आंदोलकांनी मानवी साखळी करून केसरेकर दाम्पत्याच्या हत्येचा तीव्र निषेध नोंदविला. त्यानंतर मोर्चा तहसीलदार कार्यालयावर धडकला. यावेळी ग्रेड-२ तहसीलदार एस. के. तंगोळी यांनी आंदोलकांचे निवेदन स्वीकारले. हे निवेदन तातडीने महाराष्ट्राच्या मुख्यमंत्र्यांकडे पाठविण्यात येईल, असे आश्वासन त्यांनी दिले.

‘आरोपीला फाशी द्या’च्या घोषणांनी दणाणले खानापूर

मोर्चादरम्यान आंदोलकांनी आरोपीला कठोरात कठोर शिक्षा द्यावी, जलदगती न्यायालयात खटला चालवावा आणि कायद्यानुसार फाशीची शिक्षा द्यावी, अशा जोरदार घोषणा दिल्या. केसरेकर कुटुंबाला न्याय मिळेपर्यंत लढा सुरू ठेवण्याचा निर्धारही यावेळी व्यक्त करण्यात आला.

या मोर्चाच्या अग्रभागी दिवंगत मोहन व मनीषा केसरेकर यांची मुलगी मनाली तसेच कुटुंबीय सहभागी झाले होते. आई-वडिलांचे छत्र गमावलेल्या मुलांच्या भवितव्याचा प्रश्न या आंदोलनाचा प्रमुख केंद्रबिंदू ठरला.

आमदार हलगेकरांकडून ₹२ लाखांची मदत; ₹२५ लाखांसाठी मुख्यमंत्र्यांकडे मागणी

केसरेकर कुटुंबाच्या मदतीसाठी लोकप्रतिनिधी आणि नागरिकांनीही पुढाकार घेतला. खानापूरचे आमदार विठ्ठलराव हलगेकर यांनी घटनेचा तीव्र निषेध करत स्वतःकडून ₹२ लाखांचा धनादेश केसरेकर कुटुंबाला सुपूर्द केला. याचबरोबर खानापूर मधील अनेक दानशूर व्यक्तींनी मदत केली आहे.

तसेच शिष्टमंडळासह महाराष्ट्राचे मुख्यमंत्री यांची भेट घेऊन केसरेकर कुटुंबाला शासनाकडून ₹२५ लाखांची आर्थिक मदत मिळावी, अशी मागणी करणार असल्याचे आमदार हलगेकर यांनी सांगितले.

माडीगुंजीच्या माजी विद्यार्थ्यांच्या बॅचकडून ₹२५,००१ची मदत

दरम्यान, केसरेकर दाम्पत्याच्या मृत्यूनंतर पोरक्या झालेल्या त्यांच्या दोन मुलांच्या भवितव्यासाठी समाजातील विविध घटकांकडून मदतीचे हात पुढे येत आहेत. याच सामाजिक बांधिलकीतून माडीगुंजी येथील सन २००१-२००२ सातवी ते सन २००४-२००५ दहावीच्या माजी विद्यार्थी बॅचकडून केसरेकर कुटुंबातील मुलांसाठी ₹२५,००१ची आर्थिक मदत देण्यात आली.

आई-वडिलांचे छत्र हरपलेल्या दोन मुलांच्या शिक्षणासाठी आणि भविष्यासाठी समाजाने एकजुटीने पुढे यावे, या भावनेतून ही मदत करण्यात आली. दुःखाच्या काळात माडीगुंजीच्या माजी विद्यार्थ्यांनी दाखविलेली ही सामाजिक बांधिलकी आणि माणुसकीचे उदाहरण ठरले आहे.

विविध संघटनांचा मोठा सहभाग

मोर्चात सनातन संस्था, विश्व हिंदू परिषद, भाजपा, शिवप्रतिष्ठान हिंदुस्थान,  माजी सैनिक संघटना, हेब्बाळ ग्रामस्थ तसेच विविध सामाजिक संघटनांचे पदाधिकारी व कार्यकर्ते मोठ्या संख्येने सहभागी झाले.

केसरेकर दाम्पत्याच्या हत्येप्रकरणी यापूर्वी खानापूरसह बेळगाव, सांगली आणि कुपवाड परिसरातही निषेध व्यक्त करण्यात आला आहे. आरोपी फरीद अब्दुल शेख याच्यावर जलदगती न्यायालयात खटला चालवून कायद्यानुसार कठोरात कठोर शिक्षा द्यावी, अशी मागणी सातत्याने होत आहे.

मुलांच्या भवितव्यासाठी समाज एकवटला

केसरेकर दाम्पत्याच्या हत्येने दोन निष्पाप मुलांच्या डोक्यावरचे आई-वडिलांचे छत्र कायमचे हरपले आहे. त्यामुळे केवळ आरोपीला शिक्षा मिळणे पुरेसे नसून, या मुलांचे शिक्षण, संगोपन आणि भविष्यातील सुरक्षितता यासाठी शासनाने ठोस पावले उचलावीत, अशी भावना व्यक्त होत आहे.

एका बाजूला ‘केसरेकर दाम्पत्याला न्याय मिळालाच पाहिजे’ या मागणीसाठी खानापूरच्या रस्त्यावर मोठ्या संख्येने नागरिक उतरले, तर दुसऱ्या बाजूला पोरक्या झालेल्या मुलांसाठी आर्थिक मदतीचे हात पुढे येत आहेत. माडीगुंजी सन २००१-२००२ सातवी ते सन २००४-२००५ दहावी बॅचकडून देण्यात आलेली ₹२५,००१ची मदत ही याच माणुसकीच्या भावनेचे उदाहरण ठरली आहे.

आरोपीला कठोरात कठोर शिक्षा, केसरेकर कुटुंबाला शासनाची आर्थिक मदत आणि दोन्ही मुलांच्या भवितव्याची कायमस्वरूपी जबाबदारी शासनाने घ्यावी, या प्रमुख मागण्यांसाठी खानापूरचा आवाज आता अधिक बुलंद झाला आहे.

ಕೇಸರೇಕರ್ ದಂಪತಿಗೆ ನ್ಯಾಯಕ್ಕಾಗಿ ಖಾನಾಪುರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ; ಅನಾಥ ಮಕ್ಕಳ ನೆರವಿಗೆ ಮಾಢಿಗುಂಜಿ ಶಾಲೆಯ ಬ್ಯಾಚ್‌ನಿಂದ ₹25,001

ಆರೋಪಿಗೆ ಮರಣದಂಡನೆ ವಿಧಿಸಿ; ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿ ಎಂದು ಆಗ್ರಹ

ಖಾನಾಪುರ: ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲ ನಿವಾಸಿಗಳಾದ ಮೋಹನ್ ಕೇಸರೇಕರ್ ಹಾಗೂ ಅವರ ಪತ್ನಿ ಮನೀಷಾ ಕೇಸರೇಕರ್ ಅವರ ಮೇಲೆ ನಡೆದ ಪ್ರಾಣಾಂತಿಕ ದಾಳಿಯಲ್ಲಿ ಇಬ್ಬರೂ ದುರಂತವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ಖಾನಾಪುರ ತಾಲೂಕಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ದ್ವಂದ್ವ ಹತ್ಯಾಕಾಂಡವನ್ನು ಖಂಡಿಸಿ ಗುರುವಾರ ಖಾನಾಪುರದಲ್ಲಿ ವಿವಿಧ ಹಿಂದೂ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ನಾಗರಿಕರು, ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ರ್ಯಾಲಿಯಲ್ಲಿ ಪಾಲ್ಗೊಂಡರು.

ಈ ಘಟನೆಯಿಂದ ಕೇಸರೇಕರ್ ದಂಪತಿಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಆದ್ದರಿಂದ ಆರೋಪಿಗೆ ಕಠಿಣ ಶಿಕ್ಷೆ, ಮರಣದಂಡನೆ ವಿಧಿಸಬೇಕು. ಅಲ್ಲದೆ ತಂದೆ-ತಾಯಿಯ ಆಶ್ರಯ ಕಳೆದುಕೊಂಡಿರುವ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಹಿಂದೆ ನಡೆದ ವಿವಿಧ ಪ್ರತಿಭಟನೆಗಳಲ್ಲಿಯೂ ಮಕ್ಕಳ ಪುನರ್ವಸತಿ ಹಾಗೂ ಭವಿಷ್ಯದ ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಲಕ್ಷ್ಮಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ರ್ಯಾಲಿ

ಖಾನಾಪುರದ ಶ್ರೀ ಲಕ್ಷ್ಮಿ ದೇವಸ್ಥಾನದಿಂದ ಪ್ರತಿಭಟನಾ ರ್ಯಾಲಿ ಆರಂಭವಾಯಿತು. ಘೋಡೆ ಗಲ್ಲಿ, ಸ್ಟೇಷನ್ ರಸ್ತೆ ಮಾರ್ಗವಾಗಿ ರ್ಯಾಲಿಯು ಶಿವಸ್ಮಾರಕ ಸರ್ಕಲ್ ತಲುಪಿತು. ಇಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಕೇಸರೇಕರ್ ದಂಪತಿಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ಬಳಿಕ ರ್ಯಾಲಿಯು ತಹಸೀಲ್ದಾರ್ ಕಚೇರಿಗೆ ತೆರಳಿತು.

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಎಸ್. ಕೆ. ತಂಗೋಳಿ ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಮನವಿಯನ್ನು ತಕ್ಷಣವೇ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

‘ಆರೋಪಿಗೆ ಗಲ್ಲು ಶಿಕ್ಷೆ ನೀಡಿ’ ಘೋಷಣೆಗಳಿಂದ ಮೊಳಗಿದ ಖಾನಾಪುರ

ರ್ಯಾಲಿಯಲ್ಲಿ ಪ್ರತಿಭಟನಾಕಾರರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಹಾಗೂ ಕಾನೂನಿನ ಪ್ರಕಾರ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದರು. ಕೇಸರೇಕರ್ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.

ರ್ಯಾಲಿಯ ಮುಂಚೂಣಿಯಲ್ಲಿ ಮೃತ ಮೋಹನ್ ಮತ್ತು ಮನೀಷಾ ಕೇಸರೇಕರ್ ಅವರ ಪುತ್ರಿ ಮನಾಲಿ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು. ತಂದೆ-ತಾಯಿಯ ಆಶ್ರಯ ಕಳೆದುಕೊಂಡಿರುವ ಮಕ್ಕಳ ಭವಿಷ್ಯದ ಪ್ರಶ್ನೆಯೇ ಈ ಪ್ರತಿಭಟನೆಯ ಪ್ರಮುಖ ಕೇಂದ್ರಬಿಂದುವಾಗಿತ್ತು.

ಶಾಸಕ ವಿಠ್ಠಲ ಹಲಗೇಕರರಿಂದ ₹2 ಲಕ್ಷ ನೆರವು; ₹25 ಲಕ್ಷ ಪರಿಹಾರಕ್ಕೆ ಸಿಎಂ ಬಳಿ ಮನವಿ

ಕೇಸರೇಕರ್ ಕುಟುಂಬದ ನೆರವಿಗೆ ಜನಪ್ರತಿನಿಧಿಗಳು ಹಾಗೂ ನಾಗರಿಕರು ಮುಂದಾಗಿದ್ದಾರೆ. ಖಾನಾಪುರದ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿ ತಮ್ಮ ವೈಯಕ್ತಿಕ ಕಡೆಯಿಂದ ₹2 ಲಕ್ಷದ ಚೆಕ್ ಅನ್ನು ಕೇಸರೇಕರ್ ಕುಟುಂಬಕ್ಕೆ ಹಸ್ತಾಂತರಿಸಿದರು.

ಅಲ್ಲದೆ ನಿಯೋಗದೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೇಸರೇಕರ್ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸುವುದಾಗಿ ಶಾಸಕ ಹಲಗೇಕರ ತಿಳಿಸಿದರು.

ಈ ಹಿಂದೆ ಖಾನಾಪುರ ತಾಲೂಕಿನ ಹಿಂದೂ ಸಂಘಟನೆಗಳ ಸಭೆಯಲ್ಲಿಯೂ ಕೇಸರೇಕರ್ ದಂಪತಿಯ ಮಕ್ಕಳಿಗೆ ಆರ್ಥಿಕ ನೆರವು ನೀಡಲು ನಿಧಿ ಸಂಗ್ರಹಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಮಾಢಿಗುಂಜಿ ಶಾಲೆಯ ಮಾಜಿ ವಿದ್ಯಾರ್ಥಿಗಳ ಬ್ಯಾಚ್‌ನಿಂದ ₹25,001 ನೆರವು

ಇದೀಗ ಕೇಸರೇಕರ್ ದಂಪತಿಯ ಸಾವಿನಿಂದ ಅನಾಥರಾಗಿರುವ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಸಮಾಜದ ವಿವಿಧ ವರ್ಗಗಳಿಂದ ನೆರವಿನ ಹಸ್ತಗಳು ಮುಂದಕ್ಕೆ ಬರುತ್ತಿವೆ. ಇದೇ ಸಾಮಾಜಿಕ ಬದ್ಧತೆಯ ಭಾಗವಾಗಿ ಮಾಡಿಗುಂಜಿಯ 2001-2002ರ 7ನೇ ತರಗತಿಯಿಂದ 2004-2005ರ 10ನೇ ತರಗತಿಯ ಮಾಜಿ ವಿದ್ಯಾರ್ಥಿಗಳ ಬ್ಯಾಚ್ ವತಿಯಿಂದ ಕೇಸರೇಕರ್ ಕುಟುಂಬದ ಮಕ್ಕಳಿಗಾಗಿ ₹25,001 ಆರ್ಥಿಕ ನೆರವು ನೀಡಲಾಗಿದೆ.

ತಂದೆ-ತಾಯಿಯ ಆಶ್ರಯ ಕಳೆದುಕೊಂಡಿರುವ ಇಬ್ಬರು ಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕಾಗಿ ಸಮಾಜ ಒಗ್ಗಟ್ಟಾಗಿ ಮುಂದೆ ಬರಬೇಕು ಎಂಬ ಭಾವನೆಯಿಂದ ಈ ನೆರವು ನೀಡಲಾಗಿದೆ. ದುಃಖದ ಸಂದರ್ಭದಲ್ಲಿ ಮಾಢಿಗುಂಜಿ ಶಾಲೆಯ ಮಾಜಿ ವಿದ್ಯಾರ್ಥಿಗಳು ತೋರಿದ ಸಾಮಾಜಿಕ ಕಳಕಳಿ ಹಾಗೂ ಮಾನವೀಯತೆ ಮೆಚ್ಚುಗೆಗೆ ಪಾತ್ರವಾಗಿದೆ.

ವಿವಿಧ ಸಂಘಟನೆಗಳ ಭಾರೀ ಭಾಗವಹಿಸುವಿಕೆ

ಪ್ರತಿಭಟನಾ ರ್ಯಾಲಿಯಲ್ಲಿ ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಬಿಜೆಪಿ, ಶಿವಪ್ರತಿಷ್ಠಾನ ಹಿಂದುಸ್ಥಾನ್, ಸ್ವಾಮಿ ಸಮರ್ಥ ಭಕ್ತರು, ಮಾಜಿ ಸೈನಿಕರ ಸಂಘಟನೆ, ಹೆಬ್ಬಾಳ ಗ್ರಾಮಸ್ಥರು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕೇಸರೇಕರ್ ದಂಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಸೇರಿದಂತೆ ಬೆಳಗಾವಿ, ಸಾಂಗ್ಲಿ ಹಾಗೂ ಕುಪವಾಡ ಪ್ರದೇಶಗಳಲ್ಲಿಯೂ ಈ ಹಿಂದೆ ಪ್ರತಿಭಟನೆಗಳು ನಡೆದಿವೆ. ಆರೋಪಿ ಫರೀದ್ ಅಬ್ದುಲ್ ಶೇಖ್ ವಿರುದ್ಧ ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ನಿರಂತರವಾಗಿ ಕೇಳಿಬರುತ್ತಿದೆ.

ಮಕ್ಕಳ ಭವಿಷ್ಯಕ್ಕಾಗಿ ಸಮಾಜ ಒಂದಾಗಿದೆ

ಕೇಸರೇಕರ್ ದಂಪತಿಯ ಹತ್ಯೆಯಿಂದ ಇಬ್ಬರು ನಿರಪರಾಧಿ ಮಕ್ಕಳ ತಲೆಯ ಮೇಲಿದ್ದ ತಂದೆ-ತಾಯಿಯ ಆಶ್ರಯ ಶಾಶ್ವತವಾಗಿ ಕಳೆದುಹೋಗಿದೆ. ಆದ್ದರಿಂದ ಆರೋಪಿಗೆ ಶಿಕ್ಷೆ ನೀಡುವುದರ ಜೊತೆಗೆ ಈ ಮಕ್ಕಳ ಶಿಕ್ಷಣ, ಪಾಲನೆ-ಪೋಷಣೆ ಹಾಗೂ ಭವಿಷ್ಯದ ಭದ್ರತೆಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಂದೆಡೆ ‘ಕೇಸರೇಕರ್ ದಂಪತಿಗೆ ನ್ಯಾಯ ದೊರೆಯಲೇಬೇಕು’ ಎಂಬ ಆಗ್ರಹದೊಂದಿಗೆ ಖಾನಾಪುರದ ರಸ್ತೆಗೆ ಅಪಾರ ಸಂಖ್ಯೆಯಲ್ಲಿ ನಾಗರಿಕರು ಇಳಿದರೆ, ಮತ್ತೊಂದೆಡೆ ಅನಾಥರಾಗಿರುವ ಮಕ್ಕಳಿಗಾಗಿ ಆರ್ಥಿಕ ನೆರವಿನ ಹಸ್ತಗಳು ಮುಂದಕ್ಕೆ ಬರುತ್ತಿವೆ. ಮಾಢಿಗುಂಜಿಯ 2001-2002ರ 7ನೇ ತರಗತಿಯಿಂದ 2004-2005ರ 10ನೇ ತರಗತಿಯ ಬ್ಯಾಚ್ ವತಿಯಿಂದ ನೀಡಲಾದ ₹25,001 ನೆರವು ಇದೇ ಮಾನವೀಯ ಕಳಕಳಿಗೆ ಉತ್ತಮ ಉದಾಹರಣೆಯಾಗಿದೆ.

ಆರೋಪಿಗೆ ಕಠಿಣ ಶಿಕ್ಷೆ, ಕೇಸರೇಕರ್ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಹಾಗೂ ಇಬ್ಬರು ಮಕ್ಕಳ ಭವಿಷ್ಯದ ಶಾಶ್ವತ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಖಾನಾಪುರದ ಧ್ವನಿ ಇದೀಗ ಮತ್ತಷ್ಟು ಗಟ್ಟಿಯಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या