एप्रिल 2026 पूर्वी तालुका पंचायत आणि जिल्हा पंचायत निवडणुका , ತಾಲೂಕು–ಜಿಲ್ಲಾ ಪಂಚಾಯತ್ ಚುನಾವಣೆ ಏಪ್ರಿಲ್ ಒಳಗೆ ಸಿದ್ಧತೆ ಪೂರ್ಣಗೊಳಿಸಲು ನಿರ್ಧಾರ
बेंगळूरू: कर्नाटक राज्यात गेल्या पाच वर्षांपासून रखडलेल्या तालुका पंचायत आणि जिल्हा पंचायत निवडणुका आता मार्गी लागण्याची चिन्हे दिसत आहेत. गुरुवारी (दि. ११) झालेल्या मंत्रिमंडळ बैठकीत एप्रिल २०२६ पूर्वी या निवडणुका घेण्यासाठी आवश्यक प्रशासकीय व तांत्रिक तयारी पूर्ण करण्याचा निर्णय घेण्यात आला.
राज्यात शेवटच्या वेळेस २०१६ मध्ये तापं–जिपं निवडणुका पार पडल्या होत्या. त्यानंतर २७ एप्रिल २०२१ रोजी संबंधित सभागृहांचा कार्यकाळ संपला. मात्र विविध तांत्रिक अडचणींमुळे त्यानंतर आजतागायत या निवडणुका घेण्यात आलेल्या नाहीत. परिणामी ग्रामीण स्थानिक स्वराज्य संस्थांचा लोकप्रतिनिधींविना कारभार सुरू आहे.
राज्य सरकारकडून २०२६ च्या मे महिन्यापर्यंत निवडणुका घेण्याचे नियोजन सुरू झाले आहे. पावसाळ्यात निवडणुका घेणे अवघड ठरत असल्याने, पावसाळ्यापूर्वी म्हणजेच मे महिन्यापर्यंत या प्रक्रिया पूर्ण करण्याचा सरकारचा प्रयत्न असल्याचे सूत्रांकडून सांगण्यात येत आहे.
दरम्यान, तालुका व जिल्हा पंचायतींच्या मतदारसंघांची पुनर्रचना पूर्ण झाली असली, तरी आरक्षणाचा प्रश्न अद्याप प्रलंबित आहे. आरक्षणाची अधिसूचना जाहीर होताच निवडणूक प्रक्रियेला गती मिळेल, असा अंदाज व्यक्त केला जात आहे.
याशिवाय, येत्या काही महिन्यांत राज्यातील अनेक ग्राम पंचायत सभागृहांचा कार्यकाळ संपणार आहे. त्यामुळे जानेवारी महिन्यात ग्राम पंचायत निवडणुकांची घोषणा होण्याची शक्यता आहे. त्यानंतर तापं आणि जिपं निवडणुकांचा कार्यक्रम जाहीर होण्याची दाट शक्यता असून, आगामी वर्षात ग्रामीण भागात निवडणुकांचा जोरदार माहोल पाहायला मिळण्याची चिन्हे आहेत.
ತಾಲೂಕು–ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಚುರುಕು; ಏಪ್ರಿಲ್ ಒಳಗೆ ಸಿದ್ಧತೆ ಪೂರ್ಣಗೊಳಿಸಲು ನಿರ್ಧಾರ
ಬೆಳಗಾವಿ : ಪ್ರತಿನಿಧಿ ವರದಿ
ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಮುಂದೂಡಲ್ಪಟ್ಟಿರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಶೀಘ್ರದಲ್ಲೇ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಗುರುವಾರ (ದಿನಾಂಕ 11) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, 2026ರ ಏಪ್ರಿಲ್ಗೂ ಮೊದಲು ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಕೊನೆಯ ಬಾರಿ 2016ರಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆದಿದ್ದವು. ನಂತರ 27 ಏಪ್ರಿಲ್ 2021ರಂದು ಆಯಾ ಸಭೆಗಳ ಅವಧಿ ಮುಕ್ತಾಯಗೊಂಡಿತು. ಆದರೆ ತಾಂತ್ರಿಕ ಕಾರಣಗಳು ಮತ್ತು ವಿವಿಧ ಅಡಚಣೆಗಳಿಂದಾಗಿ ಕಳೆದ ಐದು ವರ್ಷಗಳಿಂದ ಈ ಚುನಾವಣೆಗಳನ್ನು ನಡೆಸಲಾಗಿಲ್ಲ.
ರಾಜ್ಯ ಸರ್ಕಾರವು 2026ರ ಮೇ ತಿಂಗಳೊಳಗೆ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ಮಳೆಯ ಕಾಲದಲ್ಲಿ ಚುನಾವಣೆ ನಡೆಸುವುದು ಕಷ್ಟಕರವಾಗಿರುವುದರಿಂದ, ಮಳೆಗಾಲ ಆರಂಭಕ್ಕೂ ಮುನ್ನವೇ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ.
ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ವ್ಯವಸ್ಥೆ ಕಾರ್ಯ ಪೂರ್ಣಗೊಂಡಿದೆ. ಆದರೆ ಮೀಸಲಾತಿ (ಆರಕ್ಷಣಾ) ವಿಷಯದಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ಮೀಸಲಾತಿ ಘೋಷಣೆಯಾದ ಬಳಿಕ ಚುನಾವಣಾ ಪ್ರಕ್ರಿಯೆಗೆ ವೇಗ ಸಿಗಲಿದೆ ಎಂಬ ನಿರೀಕ್ಷೆಯಿದೆ.
ಇನ್ನೊಂದೆಡೆ, ರಾಜ್ಯದ ಅನೇಕ ಗ್ರಾಮ ಪಂಚಾಯತ್ ಸಭೆಗಳ ಅವಧಿಯೂ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳ ಘೋಷಣೆ ಸಾಧ್ಯತೆ ಇದೆ. ಅದಾದ ನಂತರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸಲು ಸರ್ಕಾರ ಮುಂದಾಗುವ ಸಾಧ್ಯತೆ ಇದ್ದು, ಮುಂದಿನ ವರ್ಷ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆಗಳ ಸಂಭ್ರಮ ಜೋರಾಗುವ ಲಕ್ಷಣಗಳು ಕಂಡುಬರುತ್ತಿವೆ.

