राष्ट्रीय कराटे स्पर्धेत खानापूर शांतिनिकेतन शाळेच्या विद्यार्थ्यांची चमकदार कामगिरी
खानापुर: नुकतीच बेंगळुरू येथे पार पडलेल्या राष्ट्रीय कराटे स्पर्धेत शांतिनिकेतन शाळेच्या विद्यार्थ्यांनी उल्लेखनीय यश संपादन करत खानापुरचे नाव उज्ज्वल केले आहे. या स्पर्धेत त्यांनी एकूण सुवर्ण आणि कांस्य पदकांची कमाई करत शाळेचा आणि शहराचा सन्मान वाढविला.
दि. ३ ऑगस्ट रोजी बेंगळुरू येथे आयोजित करण्यात आलेल्या या राष्ट्रीय कराटे स्पर्धेत डिफेन्स स्कूल ऑफ इंडिया मार्फत सुमारे १२०० खेळाडूंनी सहभाग घेतला होता. या स्पर्धेत १४ वर्षे वयोगटात शांतिनिकेतन शाळेचे खालील विद्यार्थी विशेष कामगिरी बजावली:

गिरीश जंगण्णावर, सुकीत गलगली, क्रांती पाटील, पृथ्वीराज देसाई, कृष्णा अळवाडी, प्रणयकुमार गोणी, समर्थ पाटील, ओम गावडे आणि अच्युत नायक यांनी सुवर्ण आणि कांस्य पदकं पटकावली.
या विद्यार्थ्यांना आंतरराष्ट्रीय कराटे मास्टर्स मधु पाटील, आकाश पाटील, मुनीर पाशा, प्रविण रंका, स्वाती वालवे यांचे मार्गदर्शन लाभले असून, खानापूरचे आमदार मा. विठ्ठल हलगेकर यांचे विशेष प्रोत्साहन लाभले.
विद्यार्थ्यांच्या या घवघवीत यशामुळे बेळगाव खानापूर परिसरात आनंदाचे वातावरण असून, शाळेचे शिक्षक, पालक आणि संपूर्ण शहरवासीयांनी त्यांच्या या कामगिरीचे कौतुक केले आहे.
ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳ ಮೆರೆದ ಸಾಧನೆ
ಚಿನ್ನ ಮತ್ತು ಕಂಚಿನ ಪದಕಗಳೊಂದಿಗೆ ಬೆಳಗಾವಿಯ ಕೀರ್ತಿಗೆ ಮತ್ತಷ್ಟು ಮೆರಗು
ಬೆಳಗಾವಿ – ಬೆಂಗಳೂರಿನಲ್ಲಿ ಆಗಸ್ಟ್ 3 ರಂದು ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆ ಮಾಡಿದ್ದು, ಚಿನ್ನ ಮತ್ತು ಕಂಚಿನ ಪದಕಗಳನ್ನು ಗಳಿಸಿ ಶಾಲೆಯ ಹೆಮ್ಮೆ ಹೆಚ್ಚಿಸಿದ್ದಾರೆ. ಈ ಸಾಧನೆಯಿಂದ ಬೆಳಗಾವಿ ನಗರದ ಕೀರ್ತಿ ಮತ್ತಷ್ಟು ಹೆಚ್ಚಾಗಿದೆ.
ಈ ಸ್ಪರ್ಧೆಯನ್ನು ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿತ್ತು. ಈ ಸಂಸ್ಥೆಯ ಮೂಲಕ ದೇಶದಾದ್ಯಂತದಿಂದ ಸುಮಾರು 1200 ಕರಾಟೆ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 14 ವರ್ಷ ವಯೋಮಾನದ ವಿಭಾಗದಲ್ಲಿ ಶಾಂತಿ ನಿಕೇತನ ಶಾಲೆಯ ಗಿರೀಶ್ ಜಂಗನ್ನವರ, ಸುಕೀತ್ ಗಲಗಲಿ, ಕ್ರಾಂತಿ ಪಾಟೀಲ್, ಪೃಥ್ವಿರಾಜ್ ದೇಸಾಯಿ, ಕೃಷ್ಣಾ ಅಲವಾಡಿ, ಪ್ರಣಯಕುಮಾರ ಗೋಣಿ, ಸಮರ್ಥ್ ಪಾಟೀಲ್, ಓಂ ಗಾವಡೆ ಹಾಗೂ ಅಚ್ಯುತ್ ನಾಯಕ ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಕರಾಟೆ ಮಾಸ್ಟರ್‌ಗಳಾದ ಮಧು ಪಾಟೀಲ್, ಆಕಾಶ್ ಪಾಟೀಲ್, ಮುನೀರ್ ಪಾಶಾ, ಪ್ರವೀಣ್ ರಂಕಾ ಮತ್ತು ಸ್ವಾತಿ ವಾಳವೆ ಅವರ ಮಾರ್ಗದರ್ಶನ ಲಭಿಸಿದ್ದು, ಖಾನಾಪೂರ ಶಾಸಕ ವಿ. ವಿಠ್ಠಲ ಹಲಗೇಕರ ಅವರ ಪ್ರೋತ್ಸಾಹವೂ ದೊರೆತಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ಅಭಿನಂದನೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಸಾಧನೆಗಳ ನಿರೀಕ್ಷೆ ವ್ಯಕ್ತವಾಗುತ್ತಿದೆ.