रामनगर शाळेच्या मैदानावर चालकाचा मृतदेह आढळला | ರಾಮನಗರ ಶಾಲಾ ಮೈದಾನದಲ್ಲಿ ಚಾಲಕನ ಶವ ಪತ್ತೆ
रामनगर (ता. जोयडा): रामनगर येथील प्राथमिक आणि माध्यमिक शाळेच्या मैदानावर शुक्रवारी पहाटे एका चालकाचा मृतदेह आढळून आला. मृताची ओळख जोयडा तालुक्यातील कुंभारवाडा येथील उमेश नाईक (वय ४२) अशी झाली आहे.
सकाळी नियमित फेरफटका मारणाऱ्या नागरिकांना मैदानावर मृतदेह दिसताच त्यांनी पोलिसांना माहिती दिली. पोलिसांनी घटनास्थळी धाव घेतली आणि पंचनामा करून मृतदेह ताब्यात घेतला.
मृत उमेश नाईक हा गेल्या अनेक वर्षांपासून रामनगर येथील दगडी खाणीवर चालक म्हणून कार्यरत होता. पोलिसांच्या प्राथमिक माहितीनुसार, गेल्या दोन दिवसांपासून अन्न न घेता दारूचे अतिसेवन केल्यामुळे त्याचा मृत्यू झाला असावा, असा अंदाज व्यक्त करण्यात आला आहे.
या घटनेची नोंद रामनगर पोलिस ठाण्यात करण्यात आली असून पुढील तपास सुरू आहे.
ರಾಮನಗರ ಶಾಲಾ ಮೈದಾನದಲ್ಲಿ ಚಾಲಕನ ಶವ ಪತ್ತೆ
ರಾಮನಗರ (ತಾಲೂಕು ಜೋಯ್ಡಾ): ರಾಮನಗರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮೈದಾನದಲ್ಲಿ ಶುಕ್ರವಾರ ಬೆಳಗಿನ ಜಾವ ಒಬ್ಬ ಚಾಲಕನ ಶವ ಪತ್ತೆಯಾಗಿದೆ. ಮೃತನನ್ನು ಜೋಯ್ಡಾ ತಾಲ್ಲೂಕಿನ ಕುಂಭಾರವಾಡ ಗ್ರಾಮದ ಉಮೇಶ್ ನಾಯ್ಕ (ವಯಸ್ಸು 42) ಎಂದು ಗುರುತಿಸಲಾಗಿದೆ.
ಪ್ರತಿ ದಿನ ಬೆಳಿಗ್ಗೆ ವಾಕ್‌ಗೆ ಬರುವ ನಾಗರಿಕರಿಗೆ ಮೈದಾನದಲ್ಲಿ ಶವ ಕಾಣಿಸಿಕೊಂಡು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳಪಂಚನಾಮೆ ನಡೆಸಿ ಶವವನ್ನು ವಶಕ್ಕೆ ಪಡೆದರು.
ಮೃತ ಉಮೇಶ್ ನಾಯ್ಕ ಅವರು ಹಲವಾರು ವರ್ಷಗಳಿಂದ ರಾಮನಗರದ ಕಲ್ಲು ಖಾಣೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆ ಪ್ರಕಾರ, ಕೊನೆಯ ಎರಡು ದಿನಗಳಿಂದ ಆಹಾರ ಸೇವಿಸದೆ ಮದ್ಯದ ಅತಿಸೇವನೆಯಿಂದ ಅವರ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
