‘NO DRUGS’ अभियानात खानापूर पोलीस सक्रिय – शाळा, कॉलेजांमध्ये जनजागृती | ‘NO DRUGS’ ಅಭಿಯಾನದಲ್ಲಿ ಖಾನಾಪುರ ಪೊಲೀಸರು ಸಕ್ರಿಯ
खानापूर : आंतरराष्ट्रीय मादक पदार्थ व बेकायदेशीर तस्करी विरोधी दिनाचे औचित्य साधून खानापूर पोलीस ठाणे, बेलगाव जिल्हा पोलीस आणि बैलहोंगल पोलीस उपविभाग यांच्या संयुक्त विद्यमाने ‘NO DRUGS – मादकद्रव्य मुक्त खानापूर’ हे विशेष जनजागृती अभियान राबवण्यात आले.
या अभियानाअंतर्गत खानापूर शहरातील विविध शाळा आणि महाविद्यालयांमध्ये विद्यार्थ्यांना मादक पदार्थांच्या दुष्परिणामांची माहिती देण्यात आली. पोलिस अधिकाऱ्यांनी प्रत्यक्ष भेटी देत, ‘NO DRUGS’ हा संदेश दिला. विद्यार्थ्यांना या व्यसनापासून दूर राहण्याचे आवाहन करण्यात आले.
“स्वस्थ समाज निर्मितीसाठी आपल्या सोबत हात मिळवा” या ब्रीदवाक्याखाली हे जनजागृती अभियान राबवले गेले. युवकांमध्ये सकारात्मक ऊर्जा निर्माण करून त्यांना चुकीच्या मार्गावर जाण्यापासून रोखण्याचा हेतू यामागे आहे.
खानापूर पोलिसांचा हा उपक्रम समाजात बदल घडवणारा ठरत असून, पालकवर्ग, शिक्षक व स्थानिक नागरिकांनीही याचे स्वागत केले आहे. भविष्यामध्ये असे अभियान अधिक प्रभावीपणे राबवण्याची गरज असल्याचे मत नागरिकांनी व्यक्त केले.
‘NO DRUGS’ ಅಭಿಯಾನದಲ್ಲಿ ಖಾನಾಪುರ ಪೊಲೀಸರು ಸಕ್ರಿಯ – ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ
ಖಾನಾಪುರ : ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಬೆಳಗಾವಿ ಜಿಲ್ಲಾ ಪೊಲೀಸ್, ಬೈಲಹೊಂಗಲ ಉಪವಿಭಾಗ ಹಾಗೂ ಖಾನಾಪುರ ಪೊಲೀಸ್ ಠಾಣೆಯ ವತಿಯಿಂದ ‘NO DRUGS – ಮಾದಕದ್ರವ್ಯ ಮುಕ್ತ ಖಾನಾಪುರ’ ಎಂಬ ವಿಶೇಷ ಜಾಗೃತಿ ಅಭಿಯಾನವನ್ನು ಖಾನಾಪುರ ಪಟ್ಟಣದ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದಡಿಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಅಪಾಯಗಳು ಮತ್ತು ಅದರ ಹಾನಿಕಾರಕ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಪೊಲೀಸ್ ಅಧಿಕಾರಿಗಳು ನೇರವಾಗಿ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ “NO DRUGS” ಎಂಬ ಘೋಷಣೆಯೊಂದಿಗೆ ಮಾದಕ ವ್ಯಸನದಿಂದ ದೂರವಿರಲು ಕರೆ ನೀಡಿದರು.
“ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ” ಎಂಬ ಘೋಷವಾಕ್ಯದೊಂದಿಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಈ ಅಭಿಯಾನ ಮುಂದಾಗಿತ್ತು. ಯುವಕರು ತಪ್ಪು ದಾರಿಗೆ ಸಾಗದಂತೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಖಾನಾಪುರ ಪೊಲೀಸ್ ಇಲಾಖೆ ಕೈಗೊಂಡಿರುವ ಈ ಸತ್ಕಾರ್ಯವನ್ನು ಪೋಷಕರು, ಶಿಕ್ಷಕರು ಮತ್ತು ಸ್ಥಳೀಯರಿಂದ ಪ್ರಶಂಸೆ ಲಭಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕೆಂಬ ಅವಶ್ಯಕತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
