गोकर्ण समुद्रात तिघा आयटी कर्मचाऱ्यांचा बुडून मृत्यू |ಗೋಕರ್ಣ ಸಮುದ್ರದಲ್ಲಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಮುಳುಗಿ ಸಾವು
गोकर्ण : वीकेंडच्या निमित्ताने सहलीसाठी बंगळूरहून गोकर्णला आलेल्या आयटी कर्मचाऱ्यांच्या गटातील तिघांचा समुद्रात बुडून मृत्यू झाला, तर दोघांना वाचवण्यात यश आले. मृतांमध्ये एका तरुणीचा समावेश आहे. दुब्बनशशी समुद्रकिनाऱ्यावर पाण्यात खेळत असताना सोमवारी सायंकाळी ही दुर्घटना घडली.
शोभा दास (वय २२, झारखंड), मोहम्मद अकरम आणि विश्वा (रा. बंगळूर) अशी मृतांची नावे आहेत. निशांत आणि मोहम्मद कासीम यांना वाचवण्यात यश आले आहे.
बंगळूरच्या बेल्लंदूर येथील अलोरिया इकोस्पेस कंपनीचे १६ कर्मचारी सहलीसाठी शनिवारी गोकर्णला आले होते. ते येथील दुब्बनशशी समुद्रकिनाऱ्यावरील कोजे रिसॉर्टमध्ये थांबले होते. त्यांच्यापैकी काहीजण समुद्रात खेळण्यासाठी गेले होते. अचानक आलेल्या एका मोठ्या लाटेत पाचजण वाहून गेले. रिसॉर्टच्या जीवरक्षकांनी आणि स्थानिक मच्छीमारांनी चौघांना किनाऱ्यावर आणले. मात्र शोभा हिचा रुग्णालयात मृत्यू झाला. तर गटाचा प्रमुख मोहम्मद अकरम याला पुढील उपचारांसाठी मणिपाल रुग्णालयात नेत असताना वाटेतच त्याचा मृत्यू झाला. निशांत व मोहम्मद कासीम यांना जीवरक्षकांनी वाचवले असून, उपचारानंतर त्यांची प्रकृती सुधारत आहे.
गोकर्ण पोलिसांनी घटनास्थळी भेट देऊन मृतदेह कारवार मेडिकल कॉलेजच्या शवागारात हलवले. या अपघातानंतर पोलिसांनी रिसॉर्ट व होमस्टे मालकांना पर्यटकांच्या सुरक्षेबाबत सतर्क केले आहे.
ಕನ್ನಡ
ಗೋಕರ್ಣ: ವಾರಾಂತ್ಯದ ಪ್ರವಾಸಕ್ಕಾಗಿ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ ಐಟಿ ಉದ್ಯೋಗಿಗಳ ತಂಡದ ಮೂವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮೃತರಲ್ಲಿ ಒಬ್ಬ ಯುವತಿಯೂ ಸೇರಿದ್ದಾರೆ. ದುಬ್ಬನಶಶಿ ಕಡಲತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ.
ಮೃತರನ್ನು ಶೋಭಾ ದಾಸ್ (22, ಜಾರ್ಖಂಡ್), ಮೊಹಮ್ಮದ್ ಅಕ್ರಂ ಮತ್ತು ವಿಶ್ವಾ (ಬೆಂಗಳೂರು) ಎಂದು ಗುರುತಿಸಲಾಗಿದೆ. ನಿಶಾಂತ್ ಮತ್ತು ಮೊಹಮ್ಮದ್ ಕಾಸಿಂ ಅವರನ್ನು ರಕ್ಷಿಸಲಾಗಿದೆ.
ಬೆಂಗಳೂರಿನ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳು ಶನಿವಾರ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಅವರು ದುಬ್ಬನಶಶಿ ಕಡಲತೀರದ ಕೋಜೆ ರೆಸಾರ್ಟ್ನಲ್ಲಿ ತಂಗಿದ್ದರು. ಅವರಲ್ಲಿ ಕೆಲವರು ಸಮುದ್ರದಲ್ಲಿ ಆಟವಾಡಲು ಹೋಗಿದ್ದರು. ಆಗ ಒಮ್ಮೆಲೇ ಬಂದ ದೊಡ್ಡ ಅಲೆಗೆ ಐವರು ಕೊಚ್ಚಿಹೋದರು. ರೆಸಾರ್ಟ್ನ ಜೀವರಕ್ಷಕರು ಮತ್ತು ಸ್ಥಳೀಯ ಮೀನುಗಾರರು ನಾಲ್ವರನ್ನು ದಡಕ್ಕೆ ಕರೆತಂದರು. ಆದರೆ ಶೋಭಾ ಆಸ್ಪತ್ರೆಯಲ್ಲಿ ಮೃತಪಟ್ಟರು. ತಂಡದ ನಾಯಕ ಮೊಹಮ್ಮದ್ ಅಕ್ರಂ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆಯೇ ಸಾವನ್ನಪ್ಪಿದರು. ನಿಶಾಂತ್ ಮತ್ತು ಮೊಹಮ್ಮದ್ ಕಾಸಿಂ ಅವರನ್ನು ಜೀವರಕ್ಷಕರು ರಕ್ಷಿಸಿದ್ದು, ಚಿಕಿತ್ಸೆಯ ನಂತರ ಅವರ ಆರೋಗ್ಯ ಸುಧಾರಿಸುತ್ತಿದೆ.
ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸಾಗಿಸಿದರು. ಈ ಅವಘಡದ ನಂತರ ಪೊಲೀಸರು ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರಿಗೆ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
