खानापूर

खानापूर तालुक्यातील 8 गावांसाठी बससेवा सुरू करण्याची मागणी; दलित संघर्ष समितीचे आक्रमक निवेदन | ಖಾನಾಪುರ ತಾಲೂಕಿನ 8 ಹಳ್ಳಿಗಳಿಗೆ ಬಸ್ ಸೇವೆ ಕಲ್ಪಿಸಲು ಆಗ್ರಹ: ದಲಿತ ಸಂಘರ್ಷ ಸಮಿತಿಯಿಂದ ಮನವಿ

खानापूर: तालुक्यातील मुडेवाडी, हत्तरगुंजी, डुक्करवाडी, सातनाळी, पिंपळी, मांजरपाई, माचाळी आणि घार्ली या आठ गावांना गेली २० वर्षे नियमित बससेवेपासून वंचित राहावे लागत आहे. या समस्येमुळे विद्यार्थी, शेतकरी आणि सर्वसामान्य नागरिकांचे अतोनात हाल होत असून, या मार्गांवर तातडीने बससेवा सुरू करण्यात यावी, अशी मागणी करत कर्नाटक राज्य दलित संघर्ष समितीच्या (समन्वयक संघटना) वतीने खानापूर आगार व्यवस्थापकांना निवेदन सादर करण्यात आले.


गेल्या दोन दशकांपासून सार्वजनिक वाहतूक नसल्याने या गावांतील ग्रामस्थांना खासगी वाहनांवर अवलंबून राहावे लागत आहे. यामुळे विद्यार्थ्यांचे शिक्षण, शेतीमालाची ने-आण आणि तातडीच्या कामांसाठी नागरिकांना नाहक आर्थिक भुर्दंड सहन करावा लागत आहे. ही गंभीर परिस्थिती लक्षात घेता, प्रशासनाने तत्काळ दखल घेऊन बसफेऱ्या सुरू कराव्यात, अशी आग्रही मागणी करण्यात आली.
यावेळी संघटनेचे जिल्हा प्रधान कार्यदर्शी राजशेखर हिंडलगी, रवि मादार, बसवराज मादार, मंजुनाथ मादार, संजय देसाई, सुजाता देसाई, यल्लाप्पा खोत, पुंडलिक दळवी, मनोहर इंदोलकर यांच्यासह संबंधित गावांतील नागरिक आणि कार्यकर्ते मोठ्या संख्येने उपस्थित होते.

ಖಾನಾಪುರ ತಾಲೂಕಿನ 8 ಹಳ್ಳಿಗಳಿಗೆ ಬಸ್ ಸೇವೆ ಕಲ್ಪಿಸಲು ಆಗ್ರಹ: ದಲಿತ ಸಂಘರ್ಷ ಸಮಿತಿಯಿಂದ ಮನವಿ
ಖಾನಾಪುರ: ಕಳೆದ ಸುಮಾರು 20 ವರ್ಷಗಳಿಂದ ತಾಲೂಕಿನ ಮುಡೆವಾಡಿ, ಹತ್ತರಗುಂಜಿ, ಡುಕರ್ವಾಡಿ, ಸಾತನಾಳಿ, ಪಿಂಪ್ಳಿ, ಮಾಂಜರಪಾಯಿ, ಮಾಚಾಳಿ ಮತ್ತು ಘಾರ್ಲಿ ಗ್ರಾಮಗಳಿಗೆ ಸಾರಿಗೆ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಸಮನ್ವಯ ಸಂಘಟನೆ) ವತಿಯಿಂದ ಖಾನಾಪುರದ NWKRTC ಡಿಪೋ ವ್ಯವಸ್ಥಾಪಕ ಸಂತೋಷ ಬೆನಕನಕೊಪ್ಪ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಲಾಗಿದೆ.
ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲದ ಕಾರಣ ಈ ಭಾಗದ ಜನರು ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹಾಗೂ ಸಾರ್ವಜನಿಕರು ಸರ್ಕಾರಿ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಆರಂಭಿಸಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಿಯೋಗ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂದಲಗಿ, ರವಿ ಮಾದಾರ, ಬಸವರಾಜ ಮಾದಾರ, ಮಂಜುನಾಥ ಮಾದಾರ, ಸಂಜಯ ದೇಸಾಯಿ, ಸುಜಾತಾ ದೇಸಾಯಿ, ಯಲ್ಲಪ್ಪ ಖೋತ, ಪುಂಡಲಿಕ ದಳವಿ, ಮನೋಹರ ಇಂದೋಲಕರ ಸೇರಿದಂತೆ ಅನೇಕ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या