खानापूर

खानापूरच्या शिवस्मारक चौकातील बस थांब्याचा प्रश्न पुन्हा ऐरणीवर! प्रशासनाकडे वारंवार मागणी करूनही प्रश्न कायम | ಶಿವಸ್ಮಾರಕ ವೃತ್ತದ ಬಸ್ ನಿಲುಗಡೆ ಬಂದ್; ಹಿರಿಯರು, ವಿದ್ಯಾರ್ಥಿಗಳಿಗೆ ಸಂಕಷ್ಟ!

शिवस्मारक चौकातील 50 वर्षांची बस थांब्याची परंपरा खंडित; बस पकडण्यासाठी प्रवाशांना नवीन बसस्थानक गाठावे लागत आहे – प्रशासनाकडे वारंवार मागणी करूनही प्रश्न कायम

खानापूर : खानापूर शहरातील शिवस्मारक चौक आणि तहसीलदार कार्यालयाजवळील जुने बसस्थानक सध्या केवळ नावापुरतेच उरले आहे का, असा प्रश्न नागरिकांकडून उपस्थित केला जात आहे. एकेकाळी तालुक्यातील नागरिकांच्या प्रवासाचे महत्त्वाचे केंद्र असलेल्या या बसस्थानकात आता पूर्वीप्रमाणे बस थांबत नसल्याने प्रवाशांची मोठी गैरसोय होत आहे.

विशेषतः बेळगावहून खानापूरकडे येणाऱ्या बस केवळ नवीन बसस्थानकातच थांबत असल्याने शिवस्मारक चौक, तहसीलदार कार्यालय आणि बाजारपेठ परिसरात येणाऱ्या नागरिकांना तिथून चालत जावे लागत आहे. त्यामुळे ज्येष्ठ नागरिक, महिला, विद्यार्थी तसेच शासकीय कामांसाठी खानापूरला येणाऱ्या प्रवाशांना अतिरिक्त अंतर पार करावे लागत आहे.

खानापूर हे संपूर्ण तालुक्याचे मुख्यालय असल्याने तालुक्यातील विविध गावांमधून नागरिक दररोज विविध कामांसाठी शहरात येत असतात. तहसीलदार कार्यालय, सरकारी रुग्णालय, हेस्कॉम कार्यालय, पोस्ट ऑफिस, बँका, रेल्वे स्थानक आणि मुख्य बाजारपेठ यांसारखी महत्त्वाची ठिकाणे जुन्या बसस्थानकाच्या परिसरात आहेत. त्यामुळे या भागात बस थांबण्याची सुविधा असणे अत्यंत आवश्यक आहे.

५० वर्षांपासून सुरू असलेली व्यवस्था बंद

स्थानिक नागरिकांच्या म्हणण्यानुसार, गेल्या पाच दशकांपासून जुन्या बसस्थानकात विविध मार्गांवरील बस थांबत होत्या. त्यामुळे ग्रामीण भागातून येणाऱ्या नागरिकांना शहराच्या मध्यवर्ती भागात उतरता येत होते. मात्र, काही वर्षांपूर्वी रस्त्याच्या कामामुळे बस वाहतुकीत बदल करण्यात आले. त्यानंतर जुन्या बसस्थानकातील बस थांब्यांची व्यवस्था पूर्ववत झालेली नाही, अशी प्रवाशांची तक्रार आहे.

सध्या बेळगावहून येणाऱ्या बस नवीन बसस्थानकातच थांबत असल्याने शिवस्मारक चौक परिसरातील प्रवाशांना बस पकडण्यासाठी नवीन बसस्थानक गाठावे लागते. त्यामुळे प्रवाशांना अनावश्यक धावपळ करावी लागत आहे.

रस्त्याचे काम पूर्ण, पण बस थांबे सुरू होणार कधी?

बस वाहतुकीत बदल करण्यामागे शिवस्मारक ते नविन बसस्टॉप रस्त्याचे काम हे कारण असल्याचे सांगितले जात होते. मात्र, रस्त्याचे काम पूर्ण होऊनही जुन्या बसस्थानकात पूर्वीप्रमाणे बस थांबण्यास सुरुवात झालेली नाही. त्यामुळे रस्त्याचे काम पूर्ण झाल्यानंतरही बस थांब्यांची व्यवस्था पूर्ववत का करण्यात आली नाही, असा सवाल नागरिक उपस्थित करत आहेत.

प्रशासनाकडे निवेदन, मात्र प्रश्न कायम

या समस्येवर तोडगा काढण्यासाठी ६ ऑक्टोबर २०२६ रोजी खानापूर येथे झालेल्या प्रजासेवा आंदोलनादरम्यान पालकमंत्री आणि जिल्हाधिकाऱ्यांकडे निवेदन सादर करण्यात आले होते.

जुन्या बसस्थानकात सर्व संबंधित मार्गांवरील बस थांबविण्याचे निर्देश खानापूर आगार व्यवस्थापनाला द्यावेत, अशी मागणी करण्यात आली होती.

याच निवेदनातून हेस्कॉम कार्यालयापासून मलप्रभा नदी पुलापर्यंतच्या सुमारे ३०० मीटर आरसीसी रस्त्याचे काम तातडीने पूर्ण करण्याची मागणीही करण्यात आली होती.

प्रशासनाने प्रवाशांच्या अडचणी समजून घ्याव्यात

जुन्या बसस्थानकाचे महत्त्व लक्षात घेऊन बेळगावहून खानापूरकडे येणाऱ्या बससह इतर संबंधित मार्गांवरील बस जुन्या बसस्थानकातही थांबविण्याबाबत परिवहन विभागाने सकारात्मक निर्णय घ्यावा, अशी मागणी नागरिकांकडून होत आहे.

जुन्या बसस्थानकात बस थांबविणे शक्य नसल्यास त्यामागील कारणे स्पष्ट करून प्रवाशांसाठी पर्यायी सुविधा उपलब्ध करून द्याव्यात. तसेच खानापूर आगार व्यवस्थापनाने जुन्या बसस्थानकातील बस थांब्यांची व्यवस्था पुन्हा सुरू करण्यासाठी आवश्यक नियोजन करावे, अशी अपेक्षा व्यक्त होत आहे.

तालुक्याच्या मुख्यालयात येणाऱ्या नागरिकांनाच बस पकडण्यासाठी एका बसस्थानकातून दुसऱ्या बसस्थानकाकडे धाव घ्यावी लागत असेल, तर सार्वजनिक वाहतूक व्यवस्थेचा उपयोग सामान्य नागरिकांना कसा होणार? आता तरी परिवहन विभागाने या प्रश्नाकडे लक्ष देऊन जुन्या बसस्थानकात बस थांबण्याची व्यवस्था पूर्ववत करावी, अशी मागणी खानापूरकरांची मागणी आहे.

ಖಾನಾಪುರದ ಹಳೆಯ ಬಸ್ ನಿಲ್ದಾಣಕ್ಕೆ ಬಸ್‌ಗಳು ಬರುವುದೇ ಇಲ್ಲವೇ? ಬೆಳಗಾವಿಯಿಂದ ಬರುವ ಬಸ್‌ಗಳು ಹೊಸ ಬಸ್ ನಿಲ್ದಾಣದಲ್ಲೇ ನಿಲುಗಡೆ!

ಶಿವಸ್ಮಾರಕ ವೃತ್ತದ 50 ವರ್ಷಗಳ ಬಸ್ ನಿಲುಗಡೆ ವ್ಯವಸ್ಥೆ ಸ್ಥಗಿತ; ಬಸ್ ಹಿಡಿಯಲು ಹೊಸ ಬಸ್ ನಿಲ್ದಾಣಕ್ಕೆ ತೆರಳಬೇಕಾದ ಪ್ರಯಾಣಿಕರು – ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ

ಖಾನಾಪುರ : ಖಾನಾಪುರ ನಗರದ ಶಿವಸ್ಮಾರಕ ವೃತ್ತ ಹಾಗೂ ತಹಶೀಲ್ದಾರ್ ಕಚೇರಿ ಸಮೀಪದಲ್ಲಿರುವ ಹಳೆಯ ಬಸ್ ನಿಲ್ದಾಣ ಈಗ ಹೆಸರಿಗೆ ಮಾತ್ರ ಉಳಿದಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಒಂದು ಕಾಲದಲ್ಲಿ ತಾಲೂಕಿನ ಜನರ ಸಂಚಾರಕ್ಕೆ ಪ್ರಮುಖ ಕೇಂದ್ರವಾಗಿದ್ದ ಈ ಬಸ್ ನಿಲ್ದಾಣದಲ್ಲಿ ಹಿಂದಿನಂತೆ ಬಸ್‌ಗಳು ನಿಲ್ಲದಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಿಶೇಷವಾಗಿ ಬೆಳಗಾವಿಯಿಂದ ಖಾನಾಪುರಕ್ಕೆ ಬರುವ ಬಸ್‌ಗಳು ಕೇವಲ ಹೊಸ ಬಸ್ ನಿಲ್ದಾಣದಲ್ಲೇ ನಿಲ್ಲುತ್ತಿರುವುದರಿಂದ ಶಿವಸ್ಮಾರಕ ವೃತ್ತ, ತಹಶೀಲ್ದಾರ್ ಕಚೇರಿ ಹಾಗೂ ಮಾರುಕಟ್ಟೆ ಪ್ರದೇಶಕ್ಕೆ ಬರುವ ಸಾರ್ವಜನಿಕರು ಬಸ್ ಹತ್ತಲು ಹೊಸ ಬಸ್ ನಿಲ್ದಾಣದತ್ತ ತೆರಳಬೇಕಾಗಿದೆ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕೆಲಸಗಳಿಗಾಗಿ ಆಗಮಿಸುವವರಿಗೆ ಹೆಚ್ಚುವರಿ ದೂರ ಕ್ರಮಿಸುವ ಅನಿವಾರ್ಯತೆ ಎದುರಾಗಿದೆ.

ಖಾನಾಪುರ ತಾಲೂಕು ಕೇಂದ್ರವಾಗಿರುವುದರಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರುತ್ತಾರೆ. ತಹಶೀಲ್ದಾರ್ ಕಚೇರಿ, ಸರ್ಕಾರಿ ಆಸ್ಪತ್ರೆ, ಹೆಸ್ಕಾಂ ಕಚೇರಿ, ಅಂಚೆ ಕಚೇರಿ, ಬ್ಯಾಂಕ್‌ಗಳು, ರೈಲು ನಿಲ್ದಾಣ ಹಾಗೂ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಹಳೆಯ ಬಸ್ ನಿಲ್ದಾಣದ ಸುತ್ತಮುತ್ತಲಿವೆ. ಹೀಗಾಗಿ ಈ ಭಾಗದಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಇರುವುದು ಅತ್ಯಂತ ಅಗತ್ಯವಾಗಿದೆ.

50 ವರ್ಷಗಳ ಹಳೆಯ ವ್ಯವಸ್ಥೆಗೆ ಬ್ರೇಕ್!

ಸ್ಥಳೀಯರ ಪ್ರಕಾರ, ಕಳೆದ ಐದು ದಶಕಗಳಿಂದ ಹಳೆಯ ಬಸ್ ನಿಲ್ದಾಣದಲ್ಲಿ ವಿವಿಧ ಮಾರ್ಗಗಳ ಬಸ್‌ಗಳು ನಿಲ್ಲುತ್ತಿದ್ದವು. ಇದರಿಂದ ಗ್ರಾಮೀಣ ಪ್ರದೇಶಗಳಿಂದ ಬರುವ ಜನರಿಗೆ ನಗರದ ಮಧ್ಯಭಾಗದಲ್ಲಿಯೇ ಇಳಿಯಲು ಅನುಕೂಲವಾಗುತ್ತಿತ್ತು.

ಆದರೆ ಕೆಲವು ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ಬದಲಾವಣೆ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರವೂ ಹಳೆಯ ಬಸ್ ನಿಲ್ದಾಣದಲ್ಲಿ ಹಿಂದಿನಂತೆ ಬಸ್ ನಿಲುಗಡೆ ವ್ಯವಸ್ಥೆ ಆರಂಭವಾಗಿಲ್ಲ ಎಂಬುದು ಪ್ರಯಾಣಿಕರ ಆರೋಪವಾಗಿದೆ.

ಪ್ರಸ್ತುತ ಬೆಳಗಾವಿಯಿಂದ ಖಾನಾಪುರಕ್ಕೆ ಬರುವ ಬಸ್‌ಗಳು ಹೊಸ ಬಸ್ ನಿಲ್ದಾಣದಲ್ಲೇ ನಿಲ್ಲುತ್ತಿರುವುದರಿಂದ ಶಿವಸ್ಮಾರಕ ವೃತ್ತದ ಸುತ್ತಮುತ್ತಲಿನ ಪ್ರಯಾಣಿಕರು ಬಸ್ ಹಿಡಿಯಲು ಹೊಸ ಬಸ್ ನಿಲ್ದಾಣಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಕಾಮಗಾರಿ ಮುಗಿದರೂ ಬಸ್ ನಿಲುಗಡೆ ಆರಂಭವಾಗಿಲ್ಲ!

ರಸ್ತೆ ಕಾಮಗಾರಿಯ ಕಾರಣದಿಂದ ಬಸ್ ಸಂಚಾರದಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಕಾಮಗಾರಿ ಪೂರ್ಣಗೊಂಡರೂ ಹಳೆಯ ಬಸ್ ನಿಲ್ದಾಣದಲ್ಲಿ ಹಿಂದಿನಂತೆ ಬಸ್‌ಗಳು ನಿಲ್ಲುತ್ತಿಲ್ಲ. ರಸ್ತೆ ಕೆಲಸ ಮುಗಿದ ಬಳಿಕವೂ ಬಸ್ ನಿಲುಗಡೆ ವ್ಯವಸ್ಥೆಯನ್ನು ಏಕೆ ಪುನರಾರಂಭಿಸಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.

ಆಡಳಿತಕ್ಕೆ ಮನವಿ ಸಲ್ಲಿಕೆ, ಸಮಸ್ಯೆ ಮಾತ್ರ ಮುಂದುವರಿಕೆ

ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಅಕ್ಟೋಬರ್ 6, 2026ರಂದು ಖಾನಾಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಹಳೆಯ ಬಸ್ ನಿಲ್ದಾಣದಲ್ಲಿ ಸಂಬಂಧಪಟ್ಟ ಎಲ್ಲಾ ಮಾರ್ಗಗಳ ಬಸ್‌ಗಳು ನಿಲ್ಲುವಂತೆ ಖಾನಾಪುರ ಡಿಪೋ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.

ಇದೇ ಮನವಿಯಲ್ಲಿ ಹೆಸ್ಕಾಂ ಕಚೇರಿಯಿಂದ ಮಲಪ್ರಭಾ ನದಿ ಸೇತುವೆಯವರೆಗೆ ಸುಮಾರು 300 ಮೀಟರ್ ಉದ್ದದ ಆರ್‌ಸಿಸಿ ರಸ್ತೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆಯೂ ಆಗ್ರಹಿಸಲಾಗಿತ್ತು.

ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಯಾವಾಗ?

ಖಾನಾಪುರ ನಗರದ ಮಧ್ಯಭಾಗದಲ್ಲಿರುವ ಹಳೆಯ ಬಸ್ ನಿಲ್ದಾಣದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿಯಿಂದ ಖಾನಾಪುರಕ್ಕೆ ಬರುವ ಬಸ್‌ಗಳು ಸೇರಿದಂತೆ ಸಂಬಂಧಪಟ್ಟ ಮಾರ್ಗಗಳ ಬಸ್‌ಗಳು ಹಳೆಯ ಬಸ್ ನಿಲ್ದಾಣದಲ್ಲಿಯೂ ನಿಲ್ಲುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಳೆಯ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ತಿಳಿಸಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಖಾನಾಪುರ ಡಿಪೋ ಅಧಿಕಾರಿಗಳು ಈ ಬಗ್ಗೆ ಸೂಕ್ತ ಯೋಜನೆ ರೂಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ತಾಲೂಕು ಕೇಂದ್ರಕ್ಕೆ ಬರುವ ಜನರೇ ಬಸ್ ಹಿಡಿಯಲು ಒಂದು ಬಸ್ ನಿಲ್ದಾಣದಿಂದ ಮತ್ತೊಂದು ಬಸ್ ನಿಲ್ದಾಣಕ್ಕೆ ಅಲೆದಾಡಬೇಕಾದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಜನರಿಗೆ ಏನು ಪ್ರಯೋಜನ? ಸಾರಿಗೆ ಇಲಾಖೆ ಈ ಸಮಸ್ಯೆಗೆ ಸ್ಪಂದಿಸಿ ಹಳೆಯ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ವ್ಯವಸ್ಥೆಯನ್ನು ಯಾವಾಗ ಪುನರಾರಂಭಿಸಲಿದೆ ಎಂಬುದನ್ನು ಖಾನಾಪುರದ ಜನತೆ ಎದುರು ನೋಡುತ್ತಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या