बैलूर महालक्ष्मी यात्रा 6 मे 2026 पासून — पंधरा वर्षांनंतर पुन्हा पारंपरिक उत्सवाची धामधूम | ಬೈಲೂರು ಮಹಾಲಕ್ಷ್ಮಿ ಜಾತ್ರೆ ಮೇ 6 ರಿಂದ
बैलूर (ता. खानापूर):
बैलूर, बाकनूर, मोरब आणि देवाचीहट्टी या चार गावांची संयुक्त महालक्ष्मी यात्रा यंदा 6 मे ते 15 मे 2026 या कालावधीत भरणार आहे. तब्बल १५ वर्षांच्या प्रतीक्षेनंतर पुन्हा एकदा या पारंपरिक यात्रेचे आयोजन करण्यात येत आहे. यापूर्वी ११ मे २०११ रोजी ही यात्रा भरण्यात आली होती.

अलीकडेच चारही गावच्या भोमांनदार आणि पंचांची बैठक घेण्यात आली असून, त्यात यात्रेचा निर्णय घेण्यात आला. पारंपरिक रितीरिवाजांनुसार पालव्यांची विधिवत पूजा करून त्या गावामध्ये सोडण्यात आल्या असून महालक्ष्मी देवीचे पाच वार पाळणे पूर्ण करण्यात आले आहे.
बैलूर गावची महालक्ष्मी ही देवाचीहट्टीतील कुंभार घराण्यातील कन्या असल्याची परंपरा आहे. देवीसाठी आसनाची व्यवस्था बाकनूर ग्रामस्थ करतात, तसेच देवीची मूर्ती गाड्यावरून उचलून बैलूरवासीयांकडे सुपूर्त केली जाते. त्यानंतर बैलूर येथे देवीचा विवाह विधीपूर्वक साजरा केला जातो. विवाहानंतर नऊ दिवसांनी देवीचे प्रयाण मोरब गावच्या सीमेत केले जाते. त्या वेळी मोरब ग्रामस्थ देवीसाठी पर्णकुटी (गवताची झोपडी) तयार करून आपले कर्तव्य पूर्ण करतात — ही प्रथा आजही कायम आहे.
यात्रेपूर्वी रस्ते व सोयीसुविधा सुधारण्याची मागणी
बैलूर गावाला बाकनूर आणि देवाचीहट्टी या गावांशी जोडणारे रस्ते तसेच बैलूर क्रॉस ते बैलूर हा मार्ग अत्यंत खराब अवस्थेत आहे. यात्रेदरम्यान भाविकांची मोठ्या प्रमाणावर वर्दळ या मार्गावरून होणार असल्याने हे रस्ते तातडीने दुरुस्त करण्याची मागणी ग्रामस्थांनी केली आहे.

तसेच यात्रेच्या काळात अधिक बससेवा सुरू करावी, गावात नियमित वीजपुरवठा व पाणीपुरवठा सुनिश्चित करावा, अशी मागणी ग्रामस्थांनी सरकार दरबारी केली आहे.
ಬೈಲೂರು ಮಹಾಲಕ್ಷ್ಮಿ ಜಾತ್ರೆ ಮೇ 6 ರಿಂದ — 15 ವರ್ಷಗಳ ನಂತರ ಪುನಃ ಸಾಂಪ್ರದಾಯಿಕ ಉತ್ಸವದ ಸಂಭ್ರಮ
ಬೈಲೂರು (ತಾ. ಖಾನಾಪುರ):
ಬೈಲೂರು, ಬಾಕನೂರು, ಮೋರಬ ಮತ್ತು ದೇವಾಚಿಹಟ್ಟಿ ಈ ನಾಲ್ಕು ಗ್ರಾಮಗಳ ಸಂಯುಕ್ತ ಮಹಾಲಕ್ಷ್ಮಿ ಜಾತ್ರೆ ಈ ಬಾರಿ ಮೇ 6 ರಿಂದ ಮೇ 15, 2025ರವರೆಗೆ ನಡೆಯಲಿದೆ. ಸುಮಾರು 15 ವರ್ಷಗಳ ಬಳಿಕ ಈ ಸಾಂಪ್ರದಾಯಿಕ ಜಾತ್ರೆಯು ಮತ್ತೆ ಭಕ್ತರ ಹರ್ಷोल್ಲಾಸದಲ್ಲಿ ಆಚರಿಸಲ್ಪಡುತ್ತಿದೆ. ಹಿಂದಿನ ಬಾರಿ ಮೇ 11, 2011ರಂದು ಜಾತ್ರೆ ನಡೆದಿತ್ತು.
ಇತ್ತೀಚೆಗೆ ನಾಲ್ಕು ಗ್ರಾಮಗಳ ಭೋಮಂದಾರರು ಮತ್ತು ಪಂಚರು ಸೇರಿ ಸಭೆ ನಡೆಸಿ ಜಾತ್ರೆಯ ನಿರ್ಣಯ ಕೈಗೊಂಡಿದ್ದಾರೆ. ಪರಂಪರೆಯಂತೆ ಪಾಲವ್ಯಗಳ ಪೂಜೆ ನೆರವೇರಿಸಿ ಅವುಗಳನ್ನು ಗ್ರಾಮದಲ್ಲಿ ಬಿಡಲಾಗಿದೆ. ಹಾಗೆಯೇ ಮಹಾಲಕ್ಷ್ಮಿ ದೇವಿಯ ಐದು ವಾರ್ ಆಚರಣೆ ಪೂರ್ಣಗೊಂಡಿದೆ.
ಬೈಲೂರು ಗ್ರಾಮದ ಮಹಾಲಕ್ಷ್ಮಿ ದೇವಿ ದೇವಾಚಿಹಟ್ಟಿಯ ಕುಂಭಾರ ಕುಟುಂಬದ ಮಗಳು ಎಂಬ ನಂಬಿಕೆಯಿದೆ. ದೇವಿಗೆ ಆಸನ ಸಿದ್ಧಪಡಿಸುವ ಜವಾಬ್ದಾರಿ ಬಾಕನೂರು ಗ್ರಾಮಸ್ಥರದ್ದು, ಹಾಗೆಯೇ ದೇವಿಯ ವಿಗ್ರಹವನ್ನು ಗಾಡಿಯಲ್ಲಿ ಏರಿ ಬೈಲೂರಿನವರ ಬಳಿ ಹಸ್ತಾಂತರ ಮಾಡಲಾಗುತ್ತದೆ. ನಂತರ ಬೈಲೂರಿನಲ್ಲಿ ದೇವಿಯ ವಿವಾಹ ಸಂಭ್ರಮದಿಂದ ನೆರವೇರಿಸಲಾಗುತ್ತದೆ. ವಿವಾಹದ ಒಂಬತ್ತನೇ ದಿನ ದೇವಿಯ ಪ್ರಯಾಣ ಮೋರಬ ಗ್ರಾಮದ ಸೀಮೆಯತ್ತ ನಡೆಯುತ್ತದೆ. ಅಲ್ಲಿ ಮೋರಬ ಗ್ರಾಮಸ್ಥರು ಪರ್ಣಕೂಟಿ (ಹುಲ್ಲಿನ ಮನೆ) ನಿರ್ಮಿಸಿ ತಮ್ಮ ಕರ್ತವ್ಯ ಪೂರೈಸುತ್ತಾರೆ — ಈ ಪರಂಪರೆ ಇಂದಿಗೂ ಅಚಲವಾಗಿದೆ.
ಜಾತ್ರೆಗೆ ಮುನ್ನ ರಸ್ತೆ ಮತ್ತು ಸೌಲಭ್ಯ ಸುಧಾರಣೆಯ ಬೇಡಿಕೆ
ಬೈಲೂರು ಗ್ರಾಮವನ್ನು ಬಾಕನೂರು ಮತ್ತು ದೇವಾಚಿಹಟ್ಟಿಗೆ ಸಂಪರ್ಕಿಸುವ ರಸ್ತೆ ಹಾಗು ಬೈಲೂರು ಕ್ರಾಸ್‌ನಿಂದ ಬೈಲೂರುವರೆಗಿನ ರಸ್ತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಜಾತ್ರೆಯ ಅವಧಿಯಲ್ಲಿ ಭಕ್ತರ ಸಂಚಾರ ಹೆಚ್ಚಾಗುವ ಕಾರಣ ಈ ರಸ್ತೆಗಳನ್ನು ತುರ್ತು ಆಧಾರದ ಮೇಲೆ ದುರಸ್ತಿ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಾಗೆಯೇ ಜಾತ್ರೆಯ ಅವಧಿಯಲ್ಲಿ ಹೆಚ್ಚುವರಿ ಬಸ್ ಸೇವೆ ಪ್ರಾರಂಭಿಸಬೇಕು, ಗಾಮದಲ್ಲಿ ಸರಿಯಾದ ವಿದ್ಯುತ್ ಮತ್ತು ನೀರಿನ ಪೂರೈಕೆ ಇರಬೇಕು, ಎಂಬ ಬೇಡಿಕೆಗಳನ್ನು ಗ್ರಾಮಸ್ಥರು ಸರ್ಕಾರದ ಗಮನಕ್ಕೆ ತಂದಿದ್ದಾರೆ.
— ಚೇತನ್ ಸಿದ್ದಪ್ಪ ವೇತಾಳ, ಬೈಲೂರು
