असोगा येथील रामलिंग मंदिरात उद्या अधिक मासनिमित्त भजन सोहळ्याचे आयोजन | ಖಾನಾಪುರ ತಾಲೂಕಿನ ಭಕ್ತಾದಿಗಳಿಗೆ ಸುದ್ಧಿ: ಅಸೋಗಾದಲ್ಲಿ ಶನಿವಾರದಂದು ವಿಶೇಷ ಭಜನೆ ಹಾಗೂ ಪ್ರವಚನ
खानापूर: तालुक्यातील मौजे रामलिंग मंदिर, असोगा येथे श्रीमंत ब्रह्मचैतन्य सद्गुरु वै. तात्यासाहेब बाबासाहेब वासकर महाराज यांच्या प्रेरणेने शनिवार, दिनांक ०६ जून २०२६ रोजी अधिक महिना (पुरुषोत्तम मास) पुण्यपर्वकाळाचे औचित्य साधून एक दिवसीय भजन सोहळ्याचे आयोजन करण्यात आले आहे. हिंदू संस्कृतीनुसार दर दोन वर्षे आठ महिन्यांनी येणारा अधिक महिना हा ‘पुरुषोत्तम मास’ म्हणून ओळखला जातो. हा काळ भगवान विष्णूच्या उपासनेसाठी अत्यंत पवित्र मानला जात असून, या काळात केलेल्या नामस्मरणाचे व उपासनेचे फळ अनेक पटीने मिळते आणि आत्मिक शांती प्रदान करते, अशी भाविकांची श्रद्धा आहे. याच पवित्र भावनेतून या विशेष सोहळ्याचे आयोजन करण्यात आले आहे.
शनिवारी सकाळी १० ते दुपारी ०१ वाजेपर्यंत पारंपारिक सांप्रदायिक भजन होणार असून, दुपारी ०१ ते ०२ या वेळेत महाप्रसाद (भोजन) व विश्रांतीची व्यवस्था करण्यात आली आहे. यानंतर दुपारी ०२ ते सायंकाळी ०४ वाजेपर्यंत पुन्हा सांप्रदायिक भजनाचे दुसरे सत्र रंगणार आहे. सायंकाळी ०४-३० ते ०६ या वेळेत भाविकांसाठी सुश्राव्य प्रवचन होईल आणि त्यानंतर सायंकाळी ०६ ते ०६-३० या वेळेत ‘जय जय राम कृष्ण हरी’ या पवित्र बीजमंत्राचा सामुदायिक नामजप केला जाईल. नामजप झाल्यानंतर उपस्थितांसाठी चहा-फराळाची व्यवस्था करण्यात आली असून त्यानंतर कार्यक्रमाची सांगता होईल. खानापूर तालुक्यातील सर्व वारकरी, भाविक आणि विठ्ठल भक्तांनी या सोहळ्याला बहुसंख्येने उपस्थित राहून लाभ घ्यावा, असे आवाहन करण्यात आले आहे.
ಖಾನಾಪುರ:
ತಾಲೂಕಿನ ಮೌಜೆ ರಾಮಲಿಂಗ ಮಂದಿರ, ಅಸೋಗಾದಲ್ಲಿ ಶ್ರೀಮಂತ ಬ್ರಹ್ಮಚೈತನ್ಯ ಸದ್ಗುರು ವೈ. ತಾತ್ಯಾಸಾಹೇಬ್ ಬಾಬಾಸಾಹೇಬ್ ವಾಸ್ಕರ್ ಮಹಾರಾಜರ ಪ್ರೇರಣೆಯೊಂದಿಗೆ ಶನಿವಾರ, ದಿನಾಂಕ 06 ಜೂನ್ 2026 ರಂದು ಅಧಿಕ ಮಾಸದ (ಪುರುಷೋತ್ತಮ ಮಾಸ) ಪುಣ್ಯಪರ್ವಕಾಲದ ನಿಮಿತ್ತ ಒಂದು ದಿನದ ಭಜನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಹೈಂದವ ಸಂಸ್ಕೃತಿಯ ಪ್ರಕಾರ ಪ್ರತಿ 2 ವರ್ಷ 8 ತಿಂಗಳಿಗೊಮ್ಮೆ ಬರುವ ಅಧಿಕ ಮಾಸವನ್ನು ‘ಪುರುಷೋತ್ತಮ ಮಾಸ’ ಎಂದು ಕರೆಯಲಾಗುತ್ತದೆ. ಈ ಕಾಲವು ಶ್ರೀ ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರವಾಗಿದ್ದು, ಈ ಅವಧಿಯಲ್ಲಿ ಮಾಡುವ ನಾಮಸ್ಮರಣೆ, ಭಜನೆ ಮತ್ತು ತಪಸ್ಸಿಗೆ ಅನಂತ ಪಟ್ಟು ಫಲ ಸಿಗುತ್ತದೆ ಹಾಗೂ ಆತ್ಮಿಕ ಶಾಂತಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಪವಿತ್ರ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 01 ರವರೆಗೆ ಸಾಂಪ್ರದಾಯಿಕ ಭಜನೆ ನಡೆಯಲಿದ್ದು, ಮಧ್ಯಾಹ್ನ 01 ರಿಂದ 02 ರವರೆಗೆ ಮಹಾಪ್ರಸಾದ (ಊಟ) ಮತ್ತು ವಿಶ್ರಾಂತಿಯ ವ್ಯವಸ್ಥೆ ಇರಲಿದೆ. ತದನಂತರ ಮಧ್ಯಾಹ್ನ 02 ರಿಂದ ಸಂಜೆ 04 ರವರೆಗೆ ಭಜನೆಯ ಎರಡನೇ ಹಂತದ ಕಾರ್ಯಕ್ರಮ ನಡೆಯಲಿದೆ. ಸಂಜೆ 04-30 ರಿಂದ 06 ರವರೆಗೆ ಆಧ್ಯಾತ್ಮಿಕ ಪ್ರವಚನ ಜರುಗಲಿದ್ದು, ನಂತರ ಸಂಜೆ 06 ರಿಂದ 06-30 ರವರೆಗೆ ‘ಜಯ ಜಯ ರಾಮ ಕೃಷ್ಣ ಹರಿ’ ಪವಿತ್ರ ಬೀಜ ಮಂತ್ರದ ಸಾಮೂಹಿಕ ನಾಮಜಪ ನೆರವೇರಲಿದೆ. ನಾಮಜಪದ ನಂತರ ಭಕ್ತಾದಿಗಳಿಗೆ ಚಹಾ ಮತ್ತು ಉಪಹಾರದ ವ್ಯವಸ್ಥೆ ಇರಲಿದ್ದು, ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ. ಖಾನಾಪುರ ತಾಲೂಕಿನ ಎಲ್ಲಾ ವಾರಕರಿ ಬಂಧುಗಳು ಮತ್ತು ಭಾವಿಕ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಲಾಭವನ್ನು ಪಡೆಯಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
