इटगी क्रॉसजवळ टँकरच्या धडकेत तीन कामगार ठार; तिघे गंभीर जखमी ಇಟಗಿ ಕ್ರಾಸ್ ಬಳಿ ಭೀಕರ ಅಪಘಾತ
ಇಟಗಿ ಕ್ರಾಸ್ ಬಳಿ ಭೀಕರ ಅಪಘಾತ, ಟ್ಯಾಂಕರ್ ಢಿಕ್ಕಿಯಿಂದ ಮೂರು ರಸ್ತೆ ಕಾಮಗಾರರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ
कित्तूर: तालुक्यातील इटगी क्रॉसजवळ itagi cross राष्ट्रीय महामार्गावर रविवारी दुपारी एक भीषण अपघात झाला. टँकरने धडक दिल्याने रस्त्याच्या दुरुस्तीवर काम करणारे तीन कामगार जागीच ठार झाले, तर तिघे गंभीर जखमी झाले आहेत. kittur

अपघातात मृत्यू झालेल्यांची नावे रामचंद्र, महेश आणि रामण्णा अशी असून, हे तिघेही महामार्गावर दुरुस्तीचं काम करत होते. या अपघातात भीमाबाई, लक्ष्मिबाई आणि अनुश्री या तिघी महिलांना गंभीर दुखापत झाली असून, त्यांना तातडीने रुग्णालयात दाखल करण्यात आले आहे.

अपघातग्रस्त टँकर रस्त्यावरून नियंत्रण सुटून थेट सर्व्हिस रोडवर घुसला आणि कामगारांना धडक दिली. टँकरचालकालाही गंभीर दुखापत झाली असून, त्याला पुढील उपचारासाठी बेळगाव येथील रुग्णालयात हलवण्यात आले आहे.
कित्तूर पोलीस घटनास्थळी दाखल झाले असून, त्यांनी अपघाताची पाहणी करून तपास सुरू केला आहे. सर्व मृत आणि जखमी व्यक्ती कलबुर्गी जिल्ह्यातील रहिवासी असल्याचे सांगण्यात येत आहे.
ಇಟಗಿ ಕ್ರಾಸ್ ಬಳಿ ಭೀಕರ ಅಪಘಾತ, ಟ್ಯಾಂಕರ್ ಢಿಕ್ಕಿಯಿಂದ ಮೂರು ರಸ್ತೆ ಕಾಮಗಾರರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ**
ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ಮಾಡುತ್ತಿದ್ದ ಮೂವರು ಕಾರ್ಮಿಕರು ಟ್ಯಾಂಕರ್ ವಾಹನದ ಢಿಕ್ಕಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಾದವರು ರಾಮಚಂದ್ರ, ಮಹೇಶ್ ಮತ್ತು ರಾಮಣ್ಣ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡವರು ಭೀಮಾಬಾಯಿ, ಲಕ್ಷ್ಮಿಬಾಯಿ ಮತ್ತು ಅನುಶ್ರೀ ಎಂಬುವರಾಗಿದ್ದಾರೆ.
ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಸರ್ವೀಸ್ ರಸ್ತೆಗೆ ಸೇರಿ ಕಾರ್ಮಿಕರಿಗೆ ಢಿಕ್ಕಿಯಾಗಿದೆ. ಟ್ಯಾಂಕರ್ ಚಾಲಕನಿಗೂ ಗಂಭೀರ ಗಾಯವಾಗಿದೆ.BELAGAVI ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಕಿತ್ತೂರು ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ. ಮೃತರು ಹಾಗೂ ಗಾಯಾಳುಗಳು ಕಲಬುರಗಿ ಜಿಲ್ಲೆಯವರು ಎನ್ನಲಾಗಿದೆ.