इंदिरा कॅन्टीनवर लाकडी चुलीची वेळ – गॅस सिलिंडरच्या तुटवड्यामुळे स्वयंपाकाचे हाल! | ಕಟ್ಟಿಗೆ ಒಲೆಗೆ ಮೊರೆ ಹೋದ ಇಂದಿರಾ ಕ್ಯಾಂಟೀನ್ – ಸಿಲಿಂಡರ್ ಅಭಾವದಿಂದ ವಿಜಯಪುರದಲ್ಲಿ ಅಡುಗೆ ಸಂಕಷ್ಟ!

आखाती देशांमधील युद्धजन्य परिस्थितीमुळे अनेक ठिकाणी व्यावसायिक गॅस सिलिंडरचा तुटवडा तीव्र झाला असून, याचा थेट परिणाम काही इंदिरा कॅन्टीन आणि स्थानिक हॉटेल्सवर झाला आहे. सिलिंडरचा पुरवठा विस्कळीत झाल्यामुळे अनेक कॅन्टीनमधील स्वयंपाकाचे काम विस्कळीत झाले आहे.
असाच प्रकार विजापूर शहरातील इंदिरा कॅन्टीनमध्ये सिलिंडर नसल्यामुळे आता लाकडी चुलींचा आधार घ्यावा लागत आहे. सद्यस्थितीत जिल्ह्यातील दोन इंदिरा कॅन्टीन पूर्णपणे बंद पडली असून, उर्वरित सहा कॅन्टीनमध्ये अन्न पुरवठ्यात अडथळे येत आहेत. ही समस्या केवळ कॅन्टीनपुरती मर्यादित नसून हॉटेल्सनाही याचा मोठा फटका बसला आहे. व्यावसायिक गॅस उपलब्ध होत नसल्याने अनेक हॉटेल मालक लाकडी चुलीवर स्वयंपाक करण्यास हतबल झाले आहेत. ग्राहकांना सेवा देण्यात खंड पडू नये म्हणून हा पर्याय स्वीकारल्याचे हॉटेल मालकांनी सांगितले आहे.
या संदर्भात हॉटेल मालक संघटनेचे सचिव प्रशांत यांनी प्रतिक्रिया देताना सांगितले की,
”सिलिंडरचा पुरवठा थांबल्यामुळे हॉटेल व्यवसाय मोठ्या संकटात सापडला आहे. सरकारने या समस्येत तातडीने लक्ष घालून व्यावसायिक गॅसचा पुरवठा सुरळीत करावा.”
एकंदरीत, गॅसच्या कमतरतेमुळे अनेक शहरांमध्ये खानावळी आणि हॉटेल व्यवस्था कोलमडली असून, तातडीने उपाययोजना न केल्यास आणखी काही कॅन्टीन आणि हॉटेल्स बंद होण्याची भीती व्यक्त केली जात आहे.
ಕಟ್ಟಿಗೆ ಒಲೆಗೆ ಮೊರೆ ಹೋದ ಇಂದಿರಾ ಕ್ಯಾಂಟೀನ್ – ಸಿಲಿಂಡರ್ ಅಭಾವದಿಂದ ವಿಜಯಪುರದಲ್ಲಿ ಅಡುಗೆ ಸಂಕಷ್ಟ!
ವಿಜಯಪುರ:
ಗಲ್ಫ್ ರಾಷ್ಟ್ರಗಳ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಅನೇಕ ನಗರದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವ ತೀವ್ರಗೊಂಡಿದ್ದು, ಇದರ ನೇರ ಪರಿಣಾಮ ಇಂದಿರಾ ಕ್ಯಾಂಟೀನ್ ಹಾಗೂ ಹೋಟೆಲ್‌ಗಳ ಮೇಲೆ ಬಿದ್ದಿದೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ, ಹಲವು ಕ್ಯಾಂಟೀನ್‌ಗಳಲ್ಲಿ ಅಡುಗೆ ಕಾರ್ಯವೇ ಅಸ್ತವ್ಯಸ್ತಗೊಂಡಿದೆ.
ನಗರದ ಇಂದಿರಾ ಕ್ಯಾಂಟೀನ್‌ಗಳು ಸಿಲಿಂಡರ್ ಕೊರತೆಯಿಂದಾಗಿ ಕಟ್ಟಿಗೆ ಒಲೆಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಜಿಲ್ಲೆಯ ಎರಡು ಇಂದಿರಾ ಕ್ಯಾಂಟೀನ್‌ಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಉಳಿದ ಆರು ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನು ಹೋಟೆಲ್‌ಗಳಿಗೂ ಈ ಸಮಸ್ಯೆ ತೀವ್ರವಾಗಿ ತಟ್ಟಿದ್ದು, ಕಮರ್ಷಿಯಲ್ ಗ್ಯಾಸ್ ಸಿಗದ ಕಾರಣ ಅನೇಕ ಹೋಟೆಲ್ ಮಾಲೀಕರು ಕಟ್ಟಿಗೆ ಒಲೆಗಳಲ್ಲಿ ಅಡುಗೆ ಮಾಡುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಈ ಕುರಿತು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಶಾಂತ್ ಮಾತನಾಡಿ:
”ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಹೋಟೆಲ್ ವಲಯ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸಿ, ಕಮರ್ಷಿಯಲ್ ಗ್ಯಾಸ್ ಪೂರೈಕೆಯನ್ನು ಸರಾಗಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ, ಗ್ಯಾಸ್ ಅಭಾವದಿಂದ ವಿಜಯಪುರದಲ್ಲಿ ಅಡುಗೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದ್ದು, ತಕ್ಷಣದ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಕ್ಯಾಂಟೀನ್ ಹಾಗೂ ಹೋಟೆಲ್‌ಗಳು ಮುಚ್ಚುವ ಭೀತಿ ಎದುರಾಗಿದೆ.

