खानापूरमध्ये उत्साहात पार पडली U-16 आंतरशालेय क्रिकेट स्पर्धा | ಖಾನಾಪುರದಲ್ಲಿ ಭರ್ಜರಿ U-16 ಕ್ರಿಕೆಟ್ ಸ್ಪರ್ಧೆ
खानापूर : खानापूर येथे प्रथमच 16 वर्षांखालील आंतरशालेय क्रिकेट स्पर्धेचे भव्य आयोजन उत्साहात पार पडले. साई स्पोर्ट्स अकॅडमी, खानापूर यांच्या वतीने मराठा मंडळ मैदानावर ही स्पर्धा घेण्यात आली. या स्पर्धेला विद्यार्थी, पालक आणि क्रीडाप्रेमी नागरिकांचा उत्स्फूर्त प्रतिसाद लाभला.
या स्पर्धेत एकूण 12 शाळांनी सहभाग नोंदवला होता. खानापूर व बेळगाव परिसरातील नामांकित शाळांचा यात समावेश होता. शांतिनिकेतन खानापूर, सिद्धी विनायक खानापूर, सेंट पॉल्स खानापूर, ज्ञान मंदिर बेळगाव, भातखंडे शाळा बेळगाव, जैन स्कूल बेळगाव, सेंट झेवियर्स बेळगाव, बिर्ला इंटरनॅशनल बेळगाव, केंद्रीय विद्यालय बेळगाव, एमव्हीएम बेळगाव, जैन हेरिटेज बेळगाव आणि सेंट्रल हायस्कूल या शाळांनी स्पर्धेत दमदार खेळ सादर केला.
स्पर्धेचा अंतिम सामना भातकांडे शाळा, बेळगाव आणि ज्ञान प्रबोधन मंदिर शाळा, बेळगाव यांच्यात रंगला. अत्यंत चुरशीच्या या लढतीत प्रथम फलंदाजी करत भातकांडे शाळेने 20 षटकांत 7 गडी बाद 171 धावा केल्या. प्रत्युत्तरात ज्ञान प्रबोधन शाळेने 20 षटकांत 10 गडी गमावत 165 धावा केल्या. त्यामुळे भातकांडे शाळेने 6 धावांनी विजय मिळवत स्पर्धेचे विजेतेपद पटकावले.
अंतिम सामन्यात भातकांडे शाळेचा खेळाडू सचिन तलवार याने 50 चेंडूत नाबाद 79 धावा करत उत्कृष्ट फलंदाजी केली. त्याला सामनावीर पुरस्काराने सन्मानित करण्यात आले. संपूर्ण स्पर्धेत सातत्यपूर्ण कामगिरी करणाऱ्या मोहम्मद हमजा याला मालिकावीर पुरस्कार देण्यात आला. त्याने 6 डावांत 17 बळी घेतले तसेच 156 धावा करत अष्टपैलू खेळाचे दर्शन घडवले.
स्पर्धेच्या आयोजनासाठी मॅनेजिंग डायरेक्टर राजलक्ष्मी हलगेकर-जाधव, संचालक प्रसाद जाधव आणि शारीरिक संचालक संजय धवळे यांनी विशेष परिश्रम घेतले. अंतिम सामन्यास प्रमुख पाहुण्या म्हणून हिंडलगा सुळगा (बेळगाव) येथील श्रेया पोते उपस्थित होत्या. त्या 19 वर्षांखालील महिला राष्ट्रीय क्रिकेट स्पर्धा तसेच महाराणी ट्रॉफीमध्ये खेळत आहेत. तसेच भाजप नेते व समाजसेवक श्री किरण जाधव हे स्पर्धेचे टायटल स्पॉन्सर म्हणून उपस्थित होते.
खानापूरमध्ये प्रथमच आयोजित करण्यात आलेल्या या स्पर्धेमुळे स्थानिक स्तरावर क्रिकेटला नवी उभारी मिळाली असून भविष्यात अशाच अधिक मोठ्या क्रीडा स्पर्धांचे आयोजन करण्याचा आयोजकांनी निर्धार व्यक्त केला.
ಖಾನಾಪುರ : ಖಾನಾಪುರದಲ್ಲಿ ಪ್ರಥಮ ಬಾರಿಗೆ 16 ವರ್ಷದೊಳಗಿನ ಅಂತರ ಶಾಲಾ ಕ್ರಿಕೆಟ್ ಟೂರ್ನಿಯನ್ನು ಭರ್ಜರಿಯಾಗಿ ಆಯೋಜಿಸಲಾಯಿತು. ಸಾಯಿ ಸ್ಪೋರ್ಟ್ಸ್ ಅಕಾಡೆಮಿ, ಖಾನಾಪುರ ಇವರ ವತಿಯಿಂದ ಮರಾಠಾ ಮಂಡಲ್ ಮೈದಾನದಲ್ಲಿ ಈ ಟೂರ್ನಿ ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳು, ಪಾಲಕರು ಹಾಗೂ ಕ್ರೀಡಾಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೋತ್ಸವಕ್ಕೆ ಮೆರುಗು ತಂದರು.
ಈ ಟೂರ್ನಿಯಲ್ಲಿ ಒಟ್ಟು 12 ಶಾಲೆಗಳು ಭಾಗವಹಿಸಿದ್ದವು. ಖಾನಾಪುರ ಹಾಗೂ ಬೆಳಗಾವಿ ಭಾಗದ ಪ್ರಸಿದ್ಧ ಶಾಲೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವು. ಶಾಂತಿನಿಕೇತನ ಖಾನಾಪುರ, ಸಿದ್ಧಿವಿನಾಯಕ ಖಾನಾಪುರ, ಸೆಂಟ್ ಪಾಲ್ಸ್ ಖಾನಾಪುರ, ಜ್ಞಾನ ಮಂದಿರ ಬೆಳಗಾವಿ, ಭಟ್ಕಂಡೆ ಶಾಲೆ ಬೆಳಗಾವಿ, ಜೈನ್ ಶಾಲೆ ಬೆಳಗಾವಿ, ಸೆಂಟ್ ಜೇವಿಯರ್ಸ್ ಬೆಳಗಾವಿ, ಬಿರ್ಲಾ ಇಂಟರ್‌ನ್ಯಾಷನಲ್ ಬೆಳಗಾವಿ, ಕೇಂದ್ರಿಯ ವಿದ್ಯಾಲಯ ಬೆಳಗಾವಿ, ಎಂವಿಎಂ ಬೆಳಗಾವಿ, ಜೈನ್ ಹೆರಿಟೇಜ್ ಬೆಳಗಾವಿ ಹಾಗೂ ಸೆಂಟ್ರಲ್ ಹೈಸ್ಕೂಲ್ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಅಂತಿಮ ಪಂದ್ಯ ಭಟ್ಕಂಡೆ ಶಾಲೆ ಬೆಳಗಾವಿ ಹಾಗೂ ಜ್ಞಾನ ಪ್ರಬೋಧನ ಮಂದಿರ ಶಾಲೆ ಬೆಳಗಾವಿ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಟ್ಕಂಡೆ ಶಾಲೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಪ್ರತಿಯಾಗಿ ಜ್ಞಾನ ಪ್ರಬೋಧನ ತಂಡ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ಭಟ್ಕಂಡೆ ಶಾಲೆ 6 ರನ್‌ಗಳ ಅಂತರದಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿತು.
ಅಂತಿಮ ಪಂದ್ಯದಲ್ಲಿ ಭಟ್ಕಂಡೆ ಶಾಲೆಯ ಸಚಿನ್ ತಲವಾರ್ ಅವರು 50 ಚೆಂಡುಗಳಲ್ಲಿ ಅಜೇಯ 79 ರನ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಹಂಝಾ ಅವರಿಗೆ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ನೀಡಲಾಯಿತು. ಅವರು 6 ಇನ್ನಿಂಗ್ಸ್‌ಗಳಲ್ಲಿ 17 ವಿಕೆಟ್ ಪಡೆದು, ಜೊತೆಗೆ 156 ರನ್ ಗಳಿಸಿ ಆಲ್‌ರೌಂಡ್ ಪ್ರದರ್ಶನ ನೀಡಿದರು.
ಟೂರ್ನಿಯ ವ್ಯವಸ್ಥಾಪಕ ನಿರ್ದೇಶಕಿ ರಾಜಲಕ್ಷ್ಮಿ ಹಲಗೆಕರ ಜಾಧವ, ನಿರ್ದೇಶಕ ಪ್ರಸಾದ್ ಜಾಧವ ಹಾಗೂ ದೈಹಿಕ ನಿರ್ದೇಶಕ ಸಂಜಯ ಧವಳೆ ಅವರ ಪರಿಶ್ರಮದಿಂದ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು. ಅಂತಿಮ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ಹಿಂಡಲಗಾ ಸುಳಗಾ (ಬೆಳಗಾವಿ) ಮೂಲದ ಶ್ರೇಯಾ ಪೊಟೆ ಉಪಸ್ಥಿತರಿದ್ದರು. ಅವರು ಪ್ರಸ್ತುತ ಅಂಡರ್-19 ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಹಾಗೂ ಮಹಾರಾಣಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಜೊತೆಗೆ ಬಿಜೆಪಿ ನಾಯಕ ಹಾಗೂ ಸಮಾಜ ಸೇವಕರಾದ ಕಿರಣ ಜಾಧವ ಅವರು ಟೂರ್ನಿಯ ಟೈಟಲ್ ಸ್ಪಾನ್ಸರ್ ಆಗಿದ್ದರು.
ಖಾನಾಪುರದಲ್ಲಿ ಮೊದಲ ಬಾರಿಗೆ ನಡೆದ ಈ ಅಂತರ ಶಾಲಾ ಕ್ರಿಕೆಟ್ ಟೂರ್ನಿ ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

